Monday, August 25, 2025
Google search engine
HomeUncategorizedಸಮೃದ್ಧಿ ಮಂಜುನಾಥ್ ಪರ ಪತ್ನಿ ಪದ್ಮ ಪ್ರಚಾರ

ಸಮೃದ್ಧಿ ಮಂಜುನಾಥ್ ಪರ ಪತ್ನಿ ಪದ್ಮ ಪ್ರಚಾರ

ಬೆಂಗಳೂರು : ಕೋಲಾರದ ಮುಳಬಾಗಲು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಅವರ ಪ್ರಚಾರ ಮುಂದುವರಿದಿದ್ದು, ಜನರು ಜೆಡಿಎಸ್ ಪಕ್ಷದ ಪರ ಒಲವು ವ್ಯಕ್ತಪಡಿಸುತ್ತಿದ್ದಾರೆ.

ಸಮೃದ್ದಿ ಮಂಜುನಾಥ್ ಅವರ ಜೊತೆಗೆ ಅವರ ಪತ್ನಿ ಪದ್ಮ ಮಂಜುನಾಥ್ ಅವರು ಸಹ ಮತ ಬೇಟೆಗೆ ಇಳಿದಿದ್ದಾರೆ. ಇಂದು ಬೆಳಗ್ಗೆ ಮುಳಬಾಗಲು ಪಟ್ಟಣದ ಹಲವು ವಾರ್ಡ್ ಗಳಲ್ಲಿ ಪದ್ಮ ಮಂಜುನಾಥ ಪ್ರಚಾರ ಶುರು ಮಾಡಿದ್ದು, ಮತದಾರರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಮಾಜಿ ಸಿಎಂ ಕುಮಾರಸ್ವಾಮಿ ಅವರ ಪಂಚರತ್ನ ಯೋಜನೆಗಳ ಬಗ್ಗೆ ಪದ್ಮ ಅವರು ಮತದಾರರಿಗೆ ವಿವರಿಸಿದರು. ಸಮೃದ್ದಿ ಮಂಜುನಾಥ ಅವರನ್ನು ಆಯ್ಕೆ ಮಾಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ನಾಂದಿ ಹಾಡಲು ಪದ್ಮ ಅವರು ಕೋರಿದರು.

ಇದನ್ನೂ ಓದಿ : ಕುಮಾರಣ್ಣ ಬಂದ 24 ಗಂಟೆಯಲ್ಲೇ ‘ಸಂಪೂರ್ಣ ಸಾಲಮನ್ನಾ’ : ಸಮೃದ್ಧಿ ಮಂಜುನಾಥ್

ಈ ಬಾರಿ ಸಮೃದ್ದಿ ಮಂಜುನಾಥ ಅವರಿಗೆ ಮತ ಕೊಡುವುದಾಗಿ ಪದ್ಮ‌ ಮಂಜುನಾಥ್ ಅವರಿಗೆ ಮತದಾರರು ಭರವಸೆ ಕೊಟ್ಟರು. ಈ ಸಂದರ್ಭದಲ್ಲಿ ದಿವಂಗತ ಆಲಂಗೂರು ಶ್ರೀನಿವಾಸ ಅವರ ಪುತ್ರಿ ಡಾ.ಭವಾನಿ ಇದ್ದರು.

ಮುಳಬಾಗಿಲು ತಾಲ್ಲೂಕಿನ ವಿ.ಗುಟ್ಟಹಳ್ಳಿ ಗ್ರಾಮದಲ್ಲಿ ಯಾದವ ಸಂಘದ ಅಧ್ಯಕ್ಷರಾದ ಸಿ.ಎಂ.ಎಸ್ ಸೋಮಣ್ಣ ಅವರು ಕಾಡೇನಹಳ್ಳಿ ನಾಗರಾಜಣ್ಣರವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷ ತೊರೆದು, ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಸಮೃದ್ಧಿ ಮಂಜುನಾಥ್ ಅವರು ಪಕ್ಷದ ಶಾಲು ಹಾಗೂ ಹಾರ ಹಾಕಿ ಆತ್ಮೀಯವಾಗಿ ಬರಮಾಡಿಕೊಂಡರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments