ಬೆಂಗಳೂರು : ಸ್ಟಾರ್ ವಾರ್ಗೆ ವೇದಿಕೆ ಸಿದ್ದವಾಗಿರುವ ಮಂಡ್ಯ ಲೋಕಸಭಾ ಚುನಾವಣಾ ಕಣ ಮತ್ತಷ್ಟು ರಂಗೇರಿದೆ. ಇದಕ್ಕೆ ಕಾರಣ ಟ್ರಬಲ್ ಶೂಟರ್, ಸಚಿವ ಡಿ.ಕೆ ಶಿವಕುಮಾರ್ ಎಂಟ್ರಿ.
ಹೌದು ಅತೃಪ್ತ ಕಾಂಗ್ರೆಸ್ ಶಾಸಕರ ಮನವೊಲಿಕೆಗೆ ಡಿ,ಕೆ ಶಿವಕುಮಾರ್ ಎಂಟ್ರಿ ಕೊಡ್ತಾ ಇದ್ದಾರೆ. ಮಂಡ್ಯದ ಅಸಮಧಾನ ಶಮನಕ್ಕೆ ಮುಂದಾಗಿರುವ ಡಿಕೆಶಿ, ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ತಮ್ಮ ಕಚೇರಿಯಲ್ಲಿ ಇಂದು ಸಂಜೆ 5ಗಂಟೆಗೆ ಅವರು ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಮಾಜಿ ಶಾಸಕರು, ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು ಮತ್ತಿತರ ಮುಖಂಡರು ಭಾಗಿಯಾಗಲಿದ್ದಾರೆ.
ಮಂಡ್ಯ ಅಖಾಡಕ್ಕೆ ಮತ್ತಷ್ಟು ರಂಗು ತಂದ ಟ್ರಬಲ್ ಶೂಟರ್ ಎಂಟ್ರಿ..!
RELATED ARTICLES