Sunday, August 24, 2025
Google search engine
HomeUncategorized26 ವರ್ಷ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಯೋಧನಿಗೆ ಅದ್ದೂರಿ ಸ್ವಾಗತ!

26 ವರ್ಷ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಯೋಧನಿಗೆ ಅದ್ದೂರಿ ಸ್ವಾಗತ!

ರಾಮನಗರ : ರೇಷ್ಮೆನಗರಿಯ ವೀರ ಯೋಧರೊಬ್ಬರು ಭಾರತೀಯ ಸೇನೆಯಲ್ಲಿ 26 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ, ಇದೀಗ ನಿವೃತ್ತಿಯಾಗಿ ತವರಿಗೆ ಮರಳಿದರು.

ರಾಮನಗರದ ವಿನಾಯಕ ನಗರದ ನಿವಾಸಿ ಶಂಕರ್ ಅವರೇ ಆ ವೀರ ಯೋಧ. 26 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿ ತವರಿಗೆ ಮರಳಿದ ಶಂಕರ್ ಅವರಿಗೆ ಜನರು ಭವ್ಯ ಸ್ವಾಗತ ಕೋರಿದರು.

ವೀರ ಯೋಧನ ಪರ ಘೋಷಣೆ ಮೊಳಗಿಸುತ್ತಾ ಹಾರ, ತುರಾಯಿ ಹಾಕಿ ರಾಷ್ಟ್ರಧ್ವಜ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರ ನೀಡಿ ಅಭಿಮಾನಿಗಳು ಗೌರವಿಸಿದರು. ತೆರದೆ ವಾಹನದಲ್ಲಿ ಅರ್ಕೇಶ್ವರ ಬಡವಾಣೆಯಿಂದ ವಿನಾಯಕ ನಗರದವರೆಗೆ ನಿವೃತ್ತ ಯೋಧ ಶಂಕರ್ ಅವರನ್ನು ಮೆರವಣಿಗೆ ಮೂಲಕ ಕರೆ ತಂದರು.

ಇದನ್ನೂ ಓದಿ : ರಸ್ತೆ ಅಪಘಾತದಲ್ಲಿ ಯೋಧನ ದುರ್ಮರಣ : ಗ್ರಾಮದಲ್ಲಿ ಮಡುಗಟ್ಟಿದ ಶೋಕ

ಹುಟ್ಟೂರಿಗೆ ಆಗಮಿಸಿದ ಯೋಧ ಶಂಕರ್ ಅವರನ್ನು ಕಂಡು ಊರಿಗೆ ಊರೇ ಸಂಭ್ರಮಿಸಿತ್ತು. 26 ವರ್ಷ ಮನೆಯಿಂದ ದೂರವಿದ್ದು ದೇಶಕ್ಕಾಗಿ ಹೋರಾಡಿದ ಮನೆ ಮಗ ಮನೆಗೆ ಬಂದಾಗ ಮನೆಯಲ್ಲಿ ಸಂಭ್ರಮ‌ ಸಡಗರ ಮೇಳೈಸಿತ್ತು. ‘ಭಾರತ್ ಮಾತಾಕಿ‌ ಜೈ’ ಘೋಷಣೆ ಕೂಗಿ ಶಂಕರ್ ಅವರನ್ನು ಮನೆಗೆ ಬರಮಾಡಿಕೊಳ್ಳಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments