Monday, August 25, 2025
Google search engine
HomeUncategorizedಅಂಬೆಗಾಲಿಡುತ್ತಲೆ ವಿಶ್ವದಾಖಲೆ ನಿರ್ಮಿಸಿದ ಕಂದಮ್ಮ: ಅಭಿನಂದನೆ ಸಲ್ಲಿಸಿದ ಸಿಎಂ

ಅಂಬೆಗಾಲಿಡುತ್ತಲೆ ವಿಶ್ವದಾಖಲೆ ನಿರ್ಮಿಸಿದ ಕಂದಮ್ಮ: ಅಭಿನಂದನೆ ಸಲ್ಲಿಸಿದ ಸಿಎಂ

ವಿಜಯಪುರ : ಅಂಬೆಗಾಲಿಡುವ 9 ತಿಂಗಳ ಹಸುಗೂಸು ತನಗೆ ಗೊತ್ತಿಲ್ಲಂದಯೇ ವರ್ಡ್​ ರಿಕಾರ್ಡ್​ ಸಾಧನೆ ಮಾಡಿದ್ದು. ಬರೋಬ್ಬರಿ 422 ವಸ್ತುಗಳನ್ನು ಗುರುತಿಸುವ ಮೂಲಕ ಅವಿಸ್ಮರಣೀಯ ಸಾಧನೆ ಮಾಡಿ ತೋರಿಸಿದ್ದಾಳೆ. ಈ ಮೂಲಕ 9 ತಿಂಗಳ ಹೆಣ್ಣು ಮಗು ನೊಬೆಲ್ ವರ್ಡ್ ರಿಕಾರ್ಡ್ ನಲ್ಲಿ ತನ್ನ ಹೆಸರು ದಾಖಲು ಮಾಡಿದ್ದಾಳೆ.

ಹೌದು ಗುಮ್ಮಟ ನಗರಿ ವಿಜಯಪುರದಲ್ಲಿ ಒಂಬತ್ತು ತಿಂಗಳ ಮಗು ಐರಾ ಕತ್ತಿ ಎಂಬ ಪುಟ್ಟ ಬಾಲಕಿಯ ಅಮೋಘ ಸಾಧನೆ ಇದೀಗ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ. ನಗರದ ದೀಪಕ್ ಕಟ್ಟಿ ಹಾಗೂ ಅನುಷಾ ಕಟ್ಟಿ ದಂಪತಿಯ ಮಗಳು ಐರಾ. ನೋಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್​ನಲ್ಲಿ ಅತೀ ಹೆಚ್ಚು ವಸ್ತುಗಳನ್ನು ಗುರುತಿಸಿದ ಅತೀ ಕಿರಿಯ ವಯಸ್ಸಿನ ಮಗು ಎನ್ನುವ ಗೌರವಕ್ಕೆ ಐರಾ ಪಾತ್ರರಾಗಿದ್ದಾಳೆ. ಇವಳ ಈ ಸಾಧನೆಗೆ ಪದಕ ಹಾಗೂ ಪ್ರಮಾಣ ಪತ್ರ ಪಡೆದಿದ್ದು ಜೊತೆಗೆ ಸಿಎಂ ಸಿದ್ದರಾಮಯ್ಯ ಅವರು ಕೂಡಾ ಈ ಪುಟ್ಟ ಬಾಲಕಿ ಐರಾಳಿಗೆ ಕರೆದು ಬಾಲಕಿಯ ಸಾಧನೆಗೆ ಗೌರವಿಸಿದ್ದು, ಜೊತೆಗೆ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ :ಮಾಟ-ಮಂತ್ರಕ್ಕೆ ಮಗನ ಸಾ*ವು: ಸ್ವಂತ ಸಹೋದರಿಗೆ ಬಲವಂತವಾಗಿ ವಿಷ ಕುಡಿಸಿದ ಅಣ್ಣ

ಐರಾ ‘ಫ್ಲಕ್​ಕಾರ್ಡ್’​ ಬಳಸಿ ವಿಭಿನ್ನ ಪ್ರಕಾರದ 422 ವಸ್ತುಗಳನ್ನು ಗುರುತಿಸಿದ್ದಾರೆ. ಫ್ರೂಟ್ಸ್ 24, ಡೊಮೆಸ್ಟಿಕ್ ಅನಿಮಲ್ಸ್ 24, ಬಾಡಿ ಪಾರ್ಟ್ಸ್ 24, ತರಕಾರಿ ಸೇರಿದಂತೆ ಹೀಗೆ 422 ವಸ್ತುಗಳನ್ನು ಗುರುತಿಸಿ ಸಾಧನೆ ಮಾಡಿದ್ದಾಳೆ. ಒಂಬತ್ತು ತಿಂಗಳ ಪುಟ್ಟ ಮಗು ಅದ್ಭುತ ಸಾಧನೆಗೆ ಅವಳ ಆಲೋಚನಾ ಶಕ್ತಿ, ಜ್ಞಾಪಕ ಶಕ್ತಿ ಅತ್ಯುತ್ತಮ ಕಲಿಕಾ ಸಾಮರ್ಥ್ಯ ತೋರಿಸುತ್ತದೆ. ಚಿಕ್ಕ ವಯಸ್ಸಿನಲ್ಲಿ ಮಗುವಿನ ಸಮರ್ಥವಾಗಿ ಪಾಲನೆ, ಕಲಿಕೆ ಮಾರ್ಗದರ್ಶನ ನೀಡಿದಾಗ ಇಂತಹ ಆಕರ್ಷಕ ಸಾಧನೆ ಮಾಡಲು ಐರಾ ಸಾಕ್ಷಿಯಾಗಿದ್ದಾಳೆ. ತಾಯಿ ಅನುಷಾ ಐರಾಳ ಸಾಧನೆಗೆ ಪ್ರೇರಣೆಯಾಗಿದ್ದು, ತಂದೆ ದೀಪಿಕ್ ಮಾರ್ಗದರ್ಶನ ಬೆಂಬಲ ಕಾರಣವಾಗಿದೆ. ಮಗಳ ಸಾಧನೆಗೆ ಪೋಷಕರು ಫುಲ್ ಖುಷಿಯಾಗಿ ಸಂತಸ ಹಂಚಿಕೊಂಡಿದ್ದಾರೆ.

ಇತ್ತೀಚಿನ‌ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಕೂಡಿಸುತ್ತಾರೆ‌ ಇದರಿಂದ ಮಗುವಿನ‌ ಬೌದ್ದಿಕ ಬೆಳವಣಿಗೆ ಕೂಡಾ ಕುಂಟಿತ ಮಾಡುತ್ತದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆಯಂತೆ ಈ ಪುಟ್ಟ ಕಂದ ಐರಾಳ ಸಾಧನೆ ನಿಜಕ್ಕೂ ಶ್ಲಾಘನೀಯವೇ ಸರಿ.‌ ಇನ್ನೂ ಮಗಳ ಈ ಸಾಧನೆಗೆ ಪೋಷಕರ ಪಾತ್ರ ಕೂಡಾ ಹೆಚ್ಚಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments