Saturday, August 23, 2025
Google search engine
HomeUncategorizedಕಟ್ಟಡ ಕಾರ್ಮಿಕನ ಮೂನ್​ ವಾಕ್​ ನೃತ್ಯಕ್ಕೆ ನೆಟ್ಟಿಗರು ಫಿದಾ..!

ಕಟ್ಟಡ ಕಾರ್ಮಿಕನ ಮೂನ್​ ವಾಕ್​ ನೃತ್ಯಕ್ಕೆ ನೆಟ್ಟಿಗರು ಫಿದಾ..!

ಟ್ಯಾಲೆಂಟ್​ ಅನ್ನೋದು ಯಾರಪ್ಪನ ಸೊತ್ತು ಅಲ್ಲ. ಕೂಲಿ ಕಾರ್ಮಿನೊಳಗು ಒಬ್ಬ ಅದ್ಭುತ ನೃತ್ಯ ಪಟು ಇದ್ದಾನೆ ಎಂಬುದಕ್ಕೆ ಈ ದೃಶ್ಯನೆ ಸಾಕ್ಷಿಯಾಗಿದೆ. ಕಟ್ಟಡ ಕಾರ್ಮಿಕನೊಬ್ಬ ಇದ್ದಕ್ಕಿದ್ದಂತೆ ಎದ್ದು ನಿಂತು ಮೂನ್​ ವಾಕ್​ ನೃತ್ಯವನ್ನು ಮಾಡುವ ಮೂಲಕ ತನ್ನೊಳಗಿನ ಅದ್ಬುತ ಪ್ರತಿಭೆಯನ್ನು ಈ ದೃಶ್ಯದಲ್ಲಿ ಅನಾವರಣ ಮಾಡಿದ್ದಾನೆ. ಕಟ್ಟಡ ಕಾರ್ಮಿಕನ ನೃತ್ಯದ ಈ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿದ್ದು, ಈ ವಿಡಿಯೋ ನೋಡಿದ ನೆಟ್ಟಿಗರು ಕೂಡ ಶಹಬ್ಬಾಶ್ ಅಂದಿದ್ದಾರೆ.

ಮುಖ ನೋಡಿ ಮಣೆ ಹಾಕಬೇಡ ಅನ್ನೊ ಒಂದು ಗಾದೆ ಮಾತಿದೆ. ಹೌದು ಯಾರೊಬ್ಬರ ಟ್ಯಾಲೆಂಟ್​ ಅವರ ಮುಖ ಅವರ ವೇಷ ಭೂಷಣದಲ್ಲಿ ಅಡಗಿರಲ್ಲ ಅನ್ನೋದಕ್ಕೆ ಕಟ್ಟಡ ಕಾರ್ಮಿಕನ ಈ ನೃತ್ಯವೇ ಸಾಕ್ಷಿಯಾಗಿದೆ. ಈ ಕಟ್ಟಡ ಕಾರ್ಮಿಕ ಇದ್ದಕ್ಕಿದ್ದಂತೆ ಎದ್ದು ನಿಂತು ಮೂನ್​ ವಾಕ್​ನಲ್ಲಿ ನೃತ್ಯ ಮಾಡಿರುವ ಈ ದೃಶ್ಯ ನೋಡಿದರೆ ಮೈಕಲ್ ಜ್ಯಾಕ್ಸನ್​ನನ್ನು ಈ ಕಾರ್ಮಿಕನ ಮುಂದೆ ನಿವಾಳಿಸಿ ತೆಗಿಬೇಕು. ಮೂನ್​ ವಾಕ್​ನಲ್ಲಿ ಸಿಕ್ಕಾಪಟ್ಟೆ ಫೇಮಸ್​ ಆಗಿರುವ ಮೈಕೆಲ್​ ಜ್ಯಾಕ್ಸನ್​ ಹೆಜ್ಜೆಯನ್ನು​ ದಿಟ್ಟೋ ದಿಟ್ಟು ಅನುಕರಣೆ ಮಾಡಿದ್ದಾನೆ ಈ ಕಟ್ಟಡ ಕಾರ್ಮಿಕ.

ಇದನ್ನೂ ಓದಿ :ಆಪರೇಷನ್​ ಸಿಂಧೂರ್ ಕಾರ್ಯಚರಣೆ: 17 ನವಜಾತ ಶಿಶುಗಳಿಗೆ ‘ಸಿಂಧೂರ’ ಎಂದು ನಾಮಕರಣ

ಇವಳೊಗಿನ ಅದ್ಭುತ ಪ್ರತಿಭೆಗೆ ಉತ್ತಮ ವೇದಿಕೆ ಸಿಕ್ಕಿದರೆ, ಈತ ಮೈಕಲ್ ಜ್ಯಾಕ್ಸನ್​ನನ್ನು ಮೀರಿಸಬಹುದು. ಈತ ಡಾನ್ಸ್​​ ಮಾಡುತ್ತಿರಬೇಕಾದರೆ ಈತನ ಸಹೋಧ್ಯೋಗಿಗಳು ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡುವ ಮೂಲಕ ಈತನೊಳಗಡೆ ಇನ್ನಷ್ಟು ಉತ್ಸಾಹವನ್ನು ತುಂಬಿದ್ದಾರೆ. ಕಾರ್ಮಿಕನ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿದ್ದು ವೀಕ್ಷಕರು ಕೂಡ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments