”ಪ್ರಧಾನಿ ನರೇಂದ್ರ ಮೋದಿ ಅವ್ರಿಗೆ ಸೆಲೆಬ್ರೆಟಿಗಳ ಮದ್ವೆಗೆ ಹೋಗೋಕೆ ಟೈಮ್ ಇರುತ್ತೆ, ಸಿನಿಮಾ ನಟರನ್ನು ಭೇಟಿ ಆಗೋಕೆ ಆಗುತ್ತೆ. ಆದರೆ. ತನ್ನ ಇಡೀ ಜೀವನ್ನು ಬಡವರ ಉಳಿತಿಗಾಗಿ ಶ್ರಮಿಸಿದ ನಡೆದಾಡುವ ದೇವರ ಅಂತಿಮ ದರ್ಶನಕ್ಕೆ ಬರಲು ಅವರಿಗೆ ಸಮಯವಿಲ್ಲ” ಎಂಬ ಡಿಸಿಎಂ ಡಾ.ಜಿ ಪರಮೇಶ್ವರ್ ಅವರ ಟ್ವೀಟ್ಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
”ಗೌರವಾನ್ವಿತ, ಡಾ.ಪರಮೇಶ್ವರ್ ಸರ್.. ನಿಮ್ಮ ಸೋನಿಯಾಗಾಂಧಿ ಮತ್ತು ರಾಹುಲ್ಗಾಂಧಿ ಅವರು ಶ್ರೀಗಳ ದರ್ಶನಕ್ಕೆ ಬಂದಿದ್ದರೇ..? ಪ್ರಧಾನಿ ಅವರನ್ನು ಟೀಕಿಸುವ ಮೊದಲು ಸೋನಿಯಾ ಮತ್ತು ರಾಹುಲ್ ಗಾಂಧಿ ಬಗ್ಗೆ ಹೇಳಿ” ಅಂತ ಪ್ರತಾಪ್ ಸಿಂಹ ಟ್ವೀಟ್ ಮೂಲಕ ಪರಮೇಶ್ವರ್ ಅವರನ್ನು ಪ್ರಶ್ನಿಸಿದ್ದಾರೆ.
Respected @DrParameshwara Sir, where were your SoniaG n RahulG? Did they turn up? Can u pls answer?! https://t.co/sN1UG1kRZC
— Prathap Simha (@mepratap) January 23, 2019