Thursday, August 21, 2025
Google search engine
HomeUncategorizedಸಾವರ್ಕರ್​ ಬಗ್ಗೆ ಮಾತನಾಡಿದ ರಾಹುಲ್​ ಮುಖಕ್ಕೆ ಮಸಿ ಬಳಿಯುತ್ತೇವೆ; ಶಿವಸೇನಾ ನಾಯಕ

ಸಾವರ್ಕರ್​ ಬಗ್ಗೆ ಮಾತನಾಡಿದ ರಾಹುಲ್​ ಮುಖಕ್ಕೆ ಮಸಿ ಬಳಿಯುತ್ತೇವೆ; ಶಿವಸೇನಾ ನಾಯಕ

ಮುಂಬೈ : ನಾಸಿಕ್ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮುಖಕ್ಕೆ ಮಸಿ ಬಳಿಯುತ್ತೇವೆ ಎಂದು ಶಿವಸೇನಾ ಮುಖಂಡ ಬಾಳಾ ದಾರಾಡೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ :ಆಪರೇಷನ್​ ಸಿಂಧೂರ್​ ಇನ್ನು ಮುಗಿದಿಲ್ಲ; ಭಾರತ-ಪಾಕ್‌ ಗಡಿಯಲ್ಲಿರೋ 4 ರಾಜ್ಯಗಳಲ್ಲಿ ನಾಳೆ ಮಾಕ್‌ ಡ್ರಿಲ್

ವೀರ ಸಾವರ್ಕರ್​ ಅವರು ಜನಿಸಿದ ಸ್ಥಳದಲ್ಲಿ ವಾಸಿಸುತ್ತಿರುವುದಕ್ಕೆ ನಮಗೆ ಹೆಮ್ಮೆಯಿದೆ, ಅವರಿಗೆ ಮಾಡುವ ಅವಮಾನವನ್ನ ನಾವು ಸಹಿಸೋದಿಲ್ಲ. ರಾಹುಲ್ ಗಾಂಧಿ ಸಾವರ್ಕರ್ ಬಗ್ಗೆ ಹೇಳಿದ್ದು ಅವಮಾನಕರವಾಗಿತ್ತು. ಅವರು ನಾಶಿಕ್‌ಗೆ ಬಂದರೆ, ನಾವು ಅವರ ಮುಖಕ್ಕೆ ಮಸಿ ಬಳಿಯುತ್ತೇವೆ, ಹಾಗೆ ಮಾಡಲು ಸಾಧ್ಯವಾಗದಿದ್ದರೆ ನಾವು ಅವರ ಬೆಂಗಾವಲು ಪಡೆಯ ಮೇಲೆ ಕಲ್ಲು ಎಸೆಯುತ್ತೇವೆ ಎಂದು ಶಿವಸೇನೆಯ ನಾಸಿಕ್ ನಗರದ ಉಪ ಮುಖ್ಯಸ್ಥ ಬಾಳಾ ದಾರಾಡೆ ಹೇಳಿದ್ದಾರೆ.

ಶಿವಸೇನಾ ನಾಸಿಕ್ ಘಟಕದ ಉಪಾಧ್ಯಕ್ಷರೂ ಆಗಿರುವ ಬಾಳಾ ದಾರಾಡೆ ನೀಡಿರುವ ಈ ಹೇಳಿಕೆಯು ಎಂವಿಎ ಮೈತ್ರಿಕೂಟದಲ್ಲಿ ಬಿರುಕು ಮೂಡಿಸಿದೆ. ಆದರೆ ತಮ್ಮ ಹೇಳಿಕೆಯಿಂದ ಎಂವಿಎ (ಮಹಾ ವಿಕಾಸ್​ ಅಘಾಡಿ) ಮೈತ್ರಿ ಮೇಲೆ ಯಾವುದೇ ಪರಿಣಾಮ ಬೀರಿದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ದಾರಾಡೆ ಹೇಳಿದ್ದಾರೆ.

ಇದನ್ನೂ ಓದಿ:ಬಿಲ್​ ಕೊಡೊ ವಿಚಾರಕ್ಕೆ ಜಗಳ; ಗ್ರಾಹಕರ ಮೇಲೆ ಬಾರ್​ ಮಾಲೀಕನಿಂದ ಮಾರಣಾಂತಿಕ ಹಲ್ಲೆ

ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಲ್ಮಾಲ್ ಅವರು ದಾರಾಡೆ ಅವರ ಬೆದರಿಕೆಯನ್ನು ಹೇಡಿತನ ಎಂದು ಕರೆದಿದ್ದಾರೆ. ಮತ್ತೊಂದೆಡೆ ಲೋಕಸಭೆಯಲ್ಲಿ ಸಾರ್ವಕರ್ ವಿರುದ್ಧ ಮಾಡಿರುವ ಟೀಕೆಗಳು ತಮ್ಮ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಆರೋಪಿಸಿ ನಾಸಿಕ್ ನಿವಾಸಿ ದೇವೇಂದ್ರ ಭೂತಾಡ ಅವರು, ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments