Saturday, August 23, 2025
Google search engine
HomeUncategorizedದಿ ಕಿಂಗ್ ಈಸ್ ಬ್ಯಾಕ್ : #ViratKohli ಟ್ರೆಂಡಿಂಗ್

ದಿ ಕಿಂಗ್ ಈಸ್ ಬ್ಯಾಕ್ : #ViratKohli ಟ್ರೆಂಡಿಂಗ್

ಬೆಂಗಳೂರು : ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ರನ್ ಮೆಷಿನ್ ಕಿಂಗ್ ಕೊಹ್ಲಿ 75ನೇ ಶತಕ ಬಾರಿಸಿದ್ದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಹೌದು, ಈ ಕ್ಷಣಕ್ಕೆ ಅಸಂಖ್ಯಾತ ಅಭಿಮಾನಿಗಳು ಕಾತರರಾಗಿದ್ದರು. ಶತಕದ ಬರದಿಂದ ತೆವಳುತ್ತಿದ್ದ ವಿರಾಟ್ ಕೊಹ್ಲಿ ಅವರಿಗೆ ಈ ಶತಕವೂ ಅನಿವಾರ್ಯವಾಗಿತ್ತು. ತಮ್ಮ ವಿರುದ್ಧ ಬಂದ ಟೀಕೆಗಳನ್ನು ಅಲ್ಲಗಳೆದಿರುವ ಕೊಹ್ಲಿ ಎಲ್ಲಾ ಫಾರ್ಮೆಟ್‌ಗಳಲ್ಲಿ ಶತಕ ಬಾರಿಸುತ್ತಿದ್ದಾರೆ.

1,205 ದಿನಗಳ ನಂತರ ಶತಕ

ಕಿಂಗ್ ಕೊಹ್ಲಿ.. ಕ್ರಿಕೆಟ್ ದುನಿಯಾದಲ್ಲಿ ಹಲ್ ಚಲ್ ಎಬ್ಬಿಸಿರುವ ಹಾಗೂ ಎಬ್ಬಿಸುತ್ತಿರುವ ಹೆಸರಿದು. ಆದರೆ, ಇತ್ತೀಚೆಗೆ ಫಾರ್ಮ್ ಸಮಸ್ಯೆಯಿಂದ ಶತಕ ವಂಚಿತರಾಗುತ್ತಿದ್ದರು. ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ನಿಂದ ಅವರ ಅಮಾನಿಗಳಿಗೆ ನಿರಾಸೆಯಾಗಿದ್ದಂತೂ ಸುಳ್ಳಲ್ಲ. ಇಂದು ಆ ನಿರಾಸೆಗೆ ಕೊಹ್ಲಿ ಬಾರಿಸಿದ ಶತಕ ಅಂತ್ಯವಾಡಿದೆ.

#ViratKohli ಟ್ರೆಂಡಿಂಗ್

1,021 ದಿನಗಳ ನಂತರ ಮೊದಲ ಅಂತಾರಾಷ್ಟ್ರೀಯ ಶತಕ, 1,116 ದಿನಗಳ ನಂತರ ಮೊದಲ ಏಕದಿನ ಶತಕ, 1,205 ದಿನಗಳ ನಂತರ ಮೊದಲ ಟೆಸ್ಟ್ ಶತಕ ಬಾರಿಸಿ ಕೊಹ್ಲಿ ಅಭಿಮಾನಿಗಳಿಗೆ ಕಿಕ್ ನೀಡಿದ್ದಾರೆ. ಹೀಗಾಗಿ, ಅಭಿಮಾನಿಗಳು ‘ಕಿಂಗ್ ಈಸ್ ಬ್ಯಾಕ್’ ಎಂದು ಟ್ವಿಟ್ ಮಾಡುತ್ತಿದ್ದಾರೆ. #ViratKohli ಇದರೊಂದಿಗೆ ಟ್ರೆಂಡಿಂಗ್ ಆಗಿದ್ದಾರೆ.

ಇಂದಿನ ಪಂದ್ಯದಲ್ಲಿ 241 ಎಸೆತಗಳನ್ನು ಎದರಿಸಿದ ಕೊಹ್ಲಿ 100 ರನ್ ಪೂರೈಸಿದ್ದಾರೆ. ಕೊಹ್ಲಿಗೆ ಇದು ಕಳೆದ 40 ತಿಂಗಳಲ್ಲಿ ಮೊದಲ ಟೆಸ್ಟ್ ಶತಕವಾಗಿದೆ. 139ನೇ ಓವರ್‌ನ ಎರಡನೇ ಎಸೆತದಲ್ಲಿ ಸಿಂಗಲ್ ರನ್ ಕದ್ದ ಕೊಹ್ಲಿ ತಮ್ಮ ಶತಕ ಪೂರ್ಣಗೊಳಿಸಿದರು.

ವಿರಾಟ್ ಶತಕ ಸಿಡಿಸುತ್ತಿದ್ದಂತೆ ಇಡೀ ಮೈದಾನವೇ ಹರ್ಷೋದ್ಗಾರದಿಂದ ತುಂಬಿ ತುಳುಕಿತು. ಕೊಹ್ಲಿ ಕೂಡ ತಮ್ಮ ಲಾಕೆಟ್‌ಗೆ ಮುತ್ತಿಕ್ಕುವ ಮೂಲಕ ಶತಕವನ್ನು ಸಂಭ್ರಮಿಸಿದರು. ಇನ್ನೂ ಔಟಾಗದೆ ಅಬ್ಬರ ಮುಂದುವರಿಸಿರುವ ಕೊಹ್ಲಿ 320 ಎಸೆತಗಳನ್ನು ಎದುರಿಸಿ 160 ರನ್ ಗಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments