Tuesday, September 2, 2025
HomeUncategorizedಕರ್ನಾಟಕದ ಬೆಳವಣಿಗೆಗೆ ಬಿಜೆಪಿ ಕಾರಣವಲ್ಲ : ರಾಜ​​ನಾಥ್​ ಸಿಂಗ್

ಕರ್ನಾಟಕದ ಬೆಳವಣಿಗೆಗೆ ಬಿಜೆಪಿ ಕಾರಣವಲ್ಲ : ರಾಜ​​ನಾಥ್​ ಸಿಂಗ್

ನವದೆಹಲಿ : ಕರ್ನಾಟಕದ ರಾಜ್ಯ ರಾಜಕೀಯದಲ್ಲಿ ಯಾರೂ ಊಹಿಸದ ಬೆಳವಣಿಗೆಗಳು ನಡೀತಾ ಇದೆ. ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದರಿಂದ ಮೈತ್ರಿ ಇಕ್ಕಟ್ಟಿ ಸಿಲುಕಿದೆ. ಹೇಗಾದ್ರೂ ಮಾಡಿ ಸರ್ಕಾರ ಉಳಿಸಿಕೊಳ್ಳ ಬೇಕು ಅಂತ ದೋಸ್ತಿ ನಾಯಕರು ಭಾರಿ ಸರ್ಕಸ್​ ನಡೆಸ್ತಾ ಇದ್ದಾರೆ. ಹಾಲಿ ಸಚಿವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಅತೃಪ್ತರಿಗೆ ಮಂತ್ರಿಗಿರಿ ನೀಡಿ ಸಮಾಧಾನ ಪಡಿಸಲು ಸಾಥ್ ನೀಡುತ್ತಿದ್ದಾರೆ.
ಇನ್ನು ರಾಜ್ಯ ರಾಜಕಾರಣದಲ್ಲಿನ ಈ ಬೆಳವಣಿಗೆಗಳಿಗೆ ಬಿಜೆಪಿಯೇ ಕಾರಣ ಎನ್ನೋದು ‘ದೋಸ್ತಿ’ ಆರೋಪ. ಆದರೆ, ಬಿಜೆಪಿ ಈ ಬೆಳವಣಿಗಳಿಗೆ ತನಗೂ ಯಾವ್ದೇ ಸಂಬಂಧವಿಲ್ಲ ಅಂತ ಹೇಳ್ತಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಇದೇ ಮಾತನ್ನು ಹೇಳಿದ್ದಾರೆ. ‘ಕರ್ನಾಟಕದ ಬೆಳವಣಿಗೆಗೆ ಬಿಜೆಪಿ ಕಾರಣವಲ್ಲ. ಶಾಸಕರ ಕುದುರೆ ವ್ಯಾಪಾರದಲ್ಲಿ ಬಿಜೆಪಿ ಭಾಗಿಯಾಗಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments