Saturday, August 23, 2025
Google search engine
HomeUncategorizedಕಾಂಗ್ರೆಸ್ 'ಸುಳ್ಳು ಹೇಳೋದ್ರಲ್ಲಿ ಪ್ರಸಿದ್ಧಿ' ಪಡೆದ ಪಾರ್ಟಿ : ಪ್ರಲ್ಹಾದ ಜೋಶಿ

ಕಾಂಗ್ರೆಸ್ ‘ಸುಳ್ಳು ಹೇಳೋದ್ರಲ್ಲಿ ಪ್ರಸಿದ್ಧಿ’ ಪಡೆದ ಪಾರ್ಟಿ : ಪ್ರಲ್ಹಾದ ಜೋಶಿ

ಹುಬ್ಬಳ್ಳಿ : ಕಾಂಗ್ರೆಸ್ ಪಾರ್ಟಿ ಸುಳ್ಳು ಹೇಳುವುದರಲ್ಲಿ ಪ್ರಸಿದ್ಧಿ ಪಡೆದಂತಹ, ಪರಿಣಿತಿ ಪಾರ್ಟಿಯಾಗಿ ಸಿದ್ಧಗೊಂಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕುಟುಕಿದ್ದಾರೆ.

ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಿದ್ದರಾಮಯ್ಯ ಅವರು ನಿನ್ನೆ ಹೇಳಿಕೆ ನೀಡಿದ್ದಾರೆ. ನಮಗೆ ದುಡ್ಡು ಕಮ್ಮಿ ಬಂದಿದೆ ಅಂತ. 2009 ರಿಂದ 2014ರ ಡೆವಲ್ಯೂಷನ್ ಫಂಡ್ ನಲ್ಲಿ  ಶೇಖಡಾ 148 ರಷ್ಟು ಜಾಸ್ತಿ ಆಗಿದೆ ಎಂದು ಹೇಳಿದ್ದಾರೆ.

2014 ರಿಂದ 2019ರ ಅವಧಿಯಲ್ಲಿ ಶೇ.129 ರಷ್ಟು ಜಾಸ್ತಿ ಆಗಿದೆ. ಯಾವ ಯಾವ ವರ್ಷದಲ್ಲಿ ಯಾವುದು ಬಂದಿತ್ತು ಅನ್ನೋದು ಈಗಾಗಲೇ ನಾವು ಸ್ಪಷ್ಟವಾಗಿ ಹೇಳಿದ್ದೇವೆ. 700ರಿಂದ 800 ಕೋಟಿ ಡೆವಲ್ಯೂಷನ್ ಫಂಡ್ ನಲ್ಲಿ ಬರ್ತಾ ಇದ್ದದ್ದು. ನಮ್ಮ ಕಾಲದಲ್ಲಿ 5000-7000 ಕೋಟಿ ಬಂದಿದೆ ಎಂದು ಸಿದ್ದುಗೆ ಲೆಕ್ಕ ಸಮೇತ ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ : ಸಿದ್ದರಾಮಯ್ಯ ‘ಸುಳ್ಳು ಭರವಸೆಗಳ ಸರ್ದಾರ’ : ಗೋವಿಂದ ಕಾರಜೋಳ

ಗ್ಯಾರಂಟಿ ಈಡೇರಿಸಲು ಆಸಕ್ತಿ ಇಲ್ವಾ?

ಸಿದ್ದರಾಮಯ್ಯ ಅವರು 2009-10 ರಲ್ಲಿ 2,476 ಕೋಟಿ ಬರ್ತಾ ಇದ್ರೆ, 2019-20ರಲ್ಲಿ 7578 ಕೋಟಿ ಬಂದಿದೆ. 2021-22ರಲ್ಲಿ 7862 ಕೋಟಿ ಬಂದಿದೆ. ಪ್ರತಿ ವರ್ಷ ಡೆವಲ್ಯೂಷನ್ ಫಂಡ್ ನಲ್ಲಿ ಜಾಸ್ತಿ ಆಗುತ್ತಿದೆ. ತಾವು ಕೊಟ್ಟ ಭರವಸೆಗಳನ್ನು ಈಡೇರಿಸುವುದರ ಬಗ್ಗೆ ಅವರಿಗೆ ಆಸಕ್ತಿ ಇಲ್ಲ ಎಂದು ಪ್ರಲ್ಹಾದ ಜೋಶಿ ಛೇಡಿಸಿದ್ದಾರೆ.

ಎಲ್ಲರಿಗೂ ಕೊಡ್ತೀವಿ ಅಂತ ಹೇಳಿದ್ರಿ..!

ಚುನಾವಣೆ ಕಾರಣಕ್ಕಾಗಿ ಭರವಸೆಯನ್ನು ಕೊಟ್ಟಿದ್ದರು. ಮೊದಲ ಕ್ಯಾಬಿನೆಟ್ ಇನ್ ಪ್ರಿನ್ಸಿಪಲ್ ಕೊಡ್ತೀವಿ ಅಂತ ಹೇಳಿದ್ರಾ ನೀವು? ಮೊದಲ ಕ್ಯಾಬಿನೆಟ್ ನಲ್ಲಿ ನಾವು ಜಾರಿ ಮಾಡ್ತೀವಿ, ಎಲ್ಲರಿಗೂ ಕೊಡ್ತೀವಿ ಅಂತ ಹೇಳಿದ್ರಿ. ಇವತ್ತು ಮೊದಲ ಕ್ಯಾಬಿನೆಟ್ ಆಗಿದೆ. ಈಗೇನು ಹೇಳ್ತಾ ಇದ್ದೀರಿ. ಇನ್ ಪ್ರಿನ್ಸಿಪಲ್ ಕೊಟ್ಟಿದ್ದೇವೆ, ಇನ್ ಪ್ರಿನ್ಸಿಪಲ್ ಏನು? ನೀವು ಚುನಾವಣೆಯಲ್ಲೇ ಕೊಟ್ಟಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್ ಪಾರ್ಟಿ ಸುಳ್ಳು ಹೇಳುವುದರಲ್ಲಿ ಪ್ರಸಿದ್ಧಿ ಪಡೆದಂತಹ, ಪರಿಣಿತಿ ಪಾರ್ಟಿಯಾಗಿ ಸಿದ್ಧಗೊಂಡಿದೆ. ಎಲ್ಲಾ ಹಗರಣದ ಬಗ್ಗೆ ತನಿಖೆ ನಡೆಸುತೇವೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ, ತನಿಖೆ ಮಾಡಲಿ ನಮ್ಮ ಸಮಯದಲ್ಲಿ ಏನು ಹಗರಣ ಆಗಿಯೇ ಇಲ್ಲ. ನಮ್ಮದೇನು ಅಭ್ಯಂತರ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments