Saturday, August 23, 2025
Google search engine
HomeUncategorizedಟಿಕೆಟ್ ಕೈತಪ್ಪಿದ್ದಕ್ಕೆ 'ಬಿಕ್ಕಿಬಿಕ್ಕಿ ಅತ್ತ' ಶಾಸಕ ರಘುಪತಿ ಭಟ್

ಟಿಕೆಟ್ ಕೈತಪ್ಪಿದ್ದಕ್ಕೆ ‘ಬಿಕ್ಕಿಬಿಕ್ಕಿ ಅತ್ತ’ ಶಾಸಕ ರಘುಪತಿ ಭಟ್

ಬೆಂಗಳೂರು : ಬಿಜೆಪಿ ಟಿಕೆಟ್‌ ಘೋಷಣೆ ಬೆನ್ನಲ್ಲೇ ಕಮಲ ಪಾಳಯದಲ್ಲೂ ಅಸಮಾಧಾನದ ಹೊಗೆ ಎದ್ದಿದೆ. ಟಿಕೆಟ್ ಕೈತಪ್ಪಿದ್ದಕ್ಕೆ ಉಡುಪಿ ಶಾಸಕ ಕೆ.ರಘುಪತಿ ಭಟ್‌ ಕಣ್ಣೀರು ಹಾಕಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪಕ್ಷದ ನಿರ್ಧಾರದ ಬಗ್ಗೆ ಬೇಸರವಿಲ್ಲ. ಆದರೆ, ಪಕ್ಷ ನಡೆಸಿಕೊಂಡ ರೀತಿ ಬೇಸರ ತಂದಿದೆ ಎಂದು ದುಃಖ ತೋಡಿಕೊಂಡಿದ್ದಾರೆ.

ಈ ಕಾರಣಕ್ಕೆ ಟಿಕೆಟ್‌ ಕೊಡಲು ಸಾಧ್ಯವಿಲ್ಲ ಎಂದು ಮೊದಲೇ ಹೇಳಿದ್ದರೆ, ಈಶ್ವರಪ್ಪ ಅವರಂತೆ ಸ್ವಯಂ ರಾಜಕೀಯ ನಿವೃತ್ತಿ ಪಡೆಯುತ್ತಿದ್ದೆ. ಕೊನೆಯ ಕ್ಷಣದವರೆಗೂ ಟಿಕೆಟ್‌ ಕೊಡುವುದಾಗಿ ಹಿರಿಯ ನಾಯಕರು ಭರವಸೆ ನೀಡಿದ್ದರು ಎಂದು ಹೇಳಿದ್ದಾರೆ.

ಇದನ್ನು ಓದಿ : ನಾನು ಸ್ವಾಭಿಮಾನಿ, ಲಜ್ಜೆಗೆಟ್ಟ ರಾಜಕಾರಣಿ ಅಲ್ಲ : ಲಕ್ಷ್ಮಣ ಸವದಿ ಗುಡುಗು

ಎರಡು ಕಡೆ ಬ್ರಾಹ್ಮಣರಿಗೆ ಟಿಕೆಟ್ ಎಂದಿತ್ತು

ಅಗತ್ಯಬಿದ್ದರೆ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಬ್ರಾಹ್ಮಣ ಸಮುದಾಯದವರನ್ನು ಪರಿಗಣಿಸುವುದಾಗಿ ಹೈಕಮಾಂಡ್ ಹೇಳಿತ್ತು. ಆದಾಗಿಯೂ ಟಿಕೆಟ್‌ ನಿರಾಕರಿಸಿರುವುದು ನೋವು ತಂದಿದೆ ಎಂದು ಬೇಸರ ಹೊರಹಾಕಿದ್ದಾರೆ.

ಉಡುಪಿ ವಿಧಾನಸಭಾ ಕ್ಷೇತ್ರದ ಮತದಾರರು ಮೂರು ಬಾರಿ ಶಾಸಕರಾಗಿ ಆಯ್ಕೆ ಮಾಡಿದ್ದಾರೆ. ಇಲ್ಲಿನ ಮತದಾರರು ಎಂದೂ ಜಾತಿ ನೋಡಿ ಮತ ಹಾಕಲಿಲ್ಲ. ಬಿಲ್ಲವರು, ಮೊಗವೀರರು ಸೇರಿದಂತೆ ಅತಿ ಹೆಚ್ಚು ಹಿಂದುಳಿದ ವರ್ಗಗಳ ಮತದಾರರು ಇರುವ ಕ್ಷೇತ್ರದಿಂದ ಆಯ್ಕೆಯಾದ ಬಗ್ಗೆ ಹೆಮ್ಮೆ ಇದೆ ಎಂದು ಶಾಸಕ ಕೆ.ರಘುಪತಿ ಭಟ್‌ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments