Sunday, August 24, 2025
Google search engine
HomeUncategorizedಪಿಹೆಚ್​ಡಿ ಪರೀಕ್ಷೆಯಲ್ಲಿ ಅಕ್ರಮ: ಬೆಂಗಳೂರು ವಿವಿ ಮುಂಭಾಗ ಪ್ರತಿಭಟನೆಗೆ ತೀರ್ಮಾನ

ಪಿಹೆಚ್​ಡಿ ಪರೀಕ್ಷೆಯಲ್ಲಿ ಅಕ್ರಮ: ಬೆಂಗಳೂರು ವಿವಿ ಮುಂಭಾಗ ಪ್ರತಿಭಟನೆಗೆ ತೀರ್ಮಾನ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಪಿಹೆಚ್‌ಡಿ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಗೃಹಜ್ಯೋತಿ ಅರ್ಜಿ ಸಲ್ಲಿಕೆಗೆ ಸಿಗ್ತಿಲ್ಲ ಮುಕ್ತಿ!: ಗೊಂದಲಗಳಿಗೆ ಪರಿಹಾರ ಇಲ್ಲಿದೆ

ಜುಲೈ 16, ಭಾನುವಾರ KLE ಮತ್ತು ಶೇಷಾದ್ರಿ ಕಾಲೇಜಿನಲ್ಲಿ (ಕೆಂಗೇರಿ ) ನಡೆದ ಪಿಹೆಚ್‌ಡಿ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು ಈ  ಬಗ್ಗೆ ವಿದ್ಯಾರ್ಥಿಗಳು ಕುಲಪತಿಗಳಿಗೆ ದೂರು ನೀಡಿದ್ದಾರೆ.

ಪಿಹೆಚ್​ಡಿ ಪ್ರವೇಶ ಪರೀಕ್ಷೆಯಲ್ಲಿ ನಡೆದ ಅಕ್ರಮ ಖಂಡಿಸಿ ವಿದ್ಯಾರ್ಥಿಗಳು ಇಂದು ಬೆಂಗಳೂರು ವಿವಿಯ ಲೈಬ್ರರಿ ಮುಂದೆ ಪ್ರತಿಭಟನೆಗೆ ನಿರ್ಧಾರಿಸಿದ್ದಾರೆ.

 ವಿದ್ಯಾರ್ಥಿಗಳ ಆರೋಪವೇನು..?

  1. ಪ್ರಶ್ನೆ ಪತ್ರಿಕೆ ಕನ್ನಡದಲ್ಲಿ ಇರಲಿಲ್ಲ.

2.15 ನಿಮಿಷ ತಡವಾಗಿ ಪ್ರಶ್ನೆ ಪತ್ರಿಕೆ ವಿತರಣೆ.

  1. ಪ್ರಶ್ನೆ ಪತ್ರಿಕೆಯಲ್ಲಿ ಸೀಲ್ ಆಗಿರಲಿಲ್ಲ.
  2. ಕೆಲವರು ಮೊಬೈಲ್ ತಂದು ಬರೆದಿದ್ದಾರೆ.
  3. ಮತ್ತೆ ಚರ್ಚೆ ಮಾಡಿ ಬರೆದಿದ್ದಾರೆ.
  4. ಪ್ರಶ್ನೆ ಪತ್ರಿಕೆಯ ಬಂಡಲ್​ ಮೊದಲೇ ಓಪನ್ ಮಾಡಿ ಕೊಠಡಿಗೆ ತಂದಿದ್ದಾರೆ.
  5. ವಿಶ್ವವಿದ್ಯಾಲಯವು ಅಭ್ಯರ್ಥಿಗಳಿಗೆ ಕಾರ್ಬನ್ ಪ್ರತಿ ನೀಡಿಲ್ಲ.
  6. KLE ಮತ್ತು SHESADRI (ಕೆಂಗೇರಿ ) ಕಾಲೇಜುನಲ್ಲಿ 11:30 ವರೆಗೂ ಪ್ರವೇಶ ನೀಡಿದ್ದಾರೆ.
  7. ವಿಶ್ವವಿದ್ಯಾನಿಲಯವು Phd ಪ್ರೆವೇಶ ಪರೀಕ್ಷೆಯ ಲೋಪದೋಷಗಳನ್ನು ಮುಚ್ಚಿಕೊಳ್ಳಲು ಆತುರಾತುರವಾಗಿ OMR ಪ್ರತಿಯನ್ನು ಅಪ್ಲೋಡ್ ಮಾಡಿದ್ದಾರೆ ಎನ್ನುವ ಪ್ರಮುಖ ಆರೋಪಗಳನ್ನಿಟ್ಟುಕೊಂಡು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments