Sunday, August 24, 2025
Google search engine
HomeUncategorizedಬಿಜೆಪಿಯಲ್ಲಿನ ಅಸಮಾಧಾನ ಯಾವಾಗ ಸ್ಫೋಟ ಆಗುತ್ತೆ ಗೊತ್ತಿಲ್ಲ : ಜಗದೀಶ್ ಶೆಟ್ಟರ್

ಬಿಜೆಪಿಯಲ್ಲಿನ ಅಸಮಾಧಾನ ಯಾವಾಗ ಸ್ಫೋಟ ಆಗುತ್ತೆ ಗೊತ್ತಿಲ್ಲ : ಜಗದೀಶ್ ಶೆಟ್ಟರ್

ಹುಬ್ಬಳ್ಳಿ : ಬಿಜೆಪಿಯಲ್ಲಿನ ಅಸಮಾಧಾನ ಯಾವಾಗ ಸ್ಫೋಟ ಆಗುತ್ತೆ ಅಂತ ಗೊತ್ತಾಗಲ್ಲ ಎಂದು ನೂತನ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕುಟುಕಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿಯಲ್ಲಿ ಬಹಳಷ್ಟು ಅಸಮಾಧಾನ ಇದೆ. ಯಾವಾಗ ಸ್ಫೋಟ ಆಗುತ್ತೆ ಗೊತ್ತಿಲ್ಲ ಎಂದಿದ್ದಾರೆ.

ನಾವು ಸೋತ ಬಿಜೆಪಿ ಅಭ್ಯರ್ಥಿಗಳನ್ನು ಸೆಳೆಯುತ್ತಿಲ್ಲ. ಅಲ್ಲೇ ಬಿರುಕು, ಅಸಮಾಧಾನ ಆಗುತ್ತಿದೆ. ವಿಧಾನ ಪರಿಷತ್‌ನಲ್ಲಿ ಜನಪ್ರತಿನಿಧಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಕಾಂಗ್ರೆಸ್ ಪಕ್ಷ ನನಗೊಂದು ಅವಕಾಶ ಮಾಡಿಕೊಟ್ಟಿದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರ, ರಾಜ್ಯದ ನಾಯಕರಿಗೆ ಧನ್ಯವಾದವನ್ನು ಸಲ್ಲಿಸುತ್ತೆನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಬಿಜೆಪಿ ಮೂಗಿನ ಬದಲು ಹಣೆಗೆ ತುಪ್ಪ ಸವರಿದೆ : ಸಿದ್ದರಾಮಯ್ಯ

ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ

ಪರಿಷತ್ ಸದಸ್ಯನಾಗಿ ಆಯ್ಕೆಯಾಗಿದ್ದು ನನ್ನ ರಾಜಕೀಯ ಜೀವನದಲ್ಲಿ ಹೊಸ ಅಧ್ಯಾಯ. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಪರಿಷತ್‌ನಲ್ಲಿ ಚರ್ಚೆ ಮಾಡುತ್ತೇನೆ. ಈ ಭಾಗದ ಅನೇಕ ಅಭಿವೃದ್ಧಿ ಕೆಲಸ ಕಾರ್ಯಗಳು ನೆನಗುದಿಗೆ ಬಿದ್ದಿವೆ. ಅವುಗಳನ್ನು ಆದಷ್ಟು ಬೇಗ ಪರಿಹರಿಸಲು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ನಾನು ಕಾಯ್ದು ನೋಡ್ತೀನಿ

ರಾಜಕೀಯದಲ್ಲಿ ಬೇರೆ ಬೇರೆ ಅಧ್ಯಾಯಗಳು ಇರುತ್ತವೆ. ಇದು ನನ್ನ ಹೊಸ ಅಧ್ಯಾಯ, ಎರಡನೆಯ ಇನ್ನಿಂಗ್ಸ್. ವಿಧಾನ ಪರಿಷತ್‌ ಸದಸ್ಯ ಮಾಡುವಾಗ ಇನ್ನೂ ‌ಉನ್ನತ ಸ್ಥಾನಮಾನಗಳನ್ನ ನೀಡುವುದಾಗಿ ಪಕ್ಷ ಹೇಳಿದೆ. ಸಭಾಪತಿ ಮಾಡುವುದು ಕಾಂಗ್ರೆಸ್‌ಗೆ ಬಿಟ್ಟ ವಿಚಾರ. ಸಭಾಪತಿ ನೀಡುವ ವಿಷವನ್ನು ನಮ್ಮ ಪಕ್ಷ ಪ್ರಸ್ತಾಪ ಮಾಡಿಲ್ಲ. ವೇಟ್ ಅಂಡ್ ಸಿ, ನಾನು ಕಾಯ್ದು ನೋಡ್ತೀನಿ, ನೋಡೋಣ ಎಂದು ಪರೋಕ್ಷವಾಗಿ ಸಭಾಪತಿ ಸ್ಥಾನಕ್ಕೆ ಶೆಟ್ಟರ್ ಒಮ್ಮತ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments