Friday, September 19, 2025
HomeUncategorizedಚಿಕ್ಕಣ್ಣನಿಗೆ ರಾಖಿ ಕಟ್ಟಿದ ಮಲೆನಾಡಿನ ಹುಡುಗಿ

ಚಿಕ್ಕಣ್ಣನಿಗೆ ರಾಖಿ ಕಟ್ಟಿದ ಮಲೆನಾಡಿನ ಹುಡುಗಿ

ಶಿವಮೊಗ್ಗ : ರಕ್ಷಾ ಬಂಧನದ ಹಿನ್ನೆಲೆಯಲ್ಲಿ ಹಾಸ್ಯನಟ ಚಿಕ್ಕಣ್ಣ ಅವರಿಗೆ ಯುವತಿಯೊಬ್ಬಳು ರಾಖಿ ಕಟ್ಟಿದ ಪ್ರಸಂಗ ನಡೆಯಿತು. ಎಸ್, ಶಿವಮೊಗ್ಗದ ಭದ್ರಾ ಜಲಾಶಯಕ್ಕೆ ನಟ ದರ್ಶನ್ ಜೊತೆ ಭೇಟಿ ನೀಡಿದ್ದ ಹಾಸ್ಯ ನಟ ಚಿಕ್ಕಣ್ಣ ಅವರಿಗೆ ಯುವತಿಯೊಬ್ಬಳು ರಾಖಿ ಕಟ್ಟುವ ಮೂಲಕ ಅಭಿಮಾನ ವ್ಯಕ್ತಪಡಿಸಿದಳು. ಈ ವೇಳೆ ಯುವಕರ ಸೆಲ್ಫಿಗೆ ಫೋಸ್ ನೀಡುತ್ತಲೇ ಚಿಕ್ಕಣ್ಣ ರಾಖಿ ಕಟ್ಟಿದ ಯುವತಿಗೆ ಸ್ಪಂಧಿಸಿ ಶುಭ ಹಾರೈಸಿದ್ರು. ತಮ್ಮ ಕಾರಿನಲ್ಲೇ ಕೂತು ಸಫಾರಿಗೆ ಹೊರಟಿದ್ದ ಚಿಕ್ಕಣ್ಣನಿಗೆ ಅಭಿಮಾನಿಗಳು ಗೇಟಿನಲ್ಲೇ ಮುಗಿ ಬಿದ್ರು. ಈ ವೇಳೆ ರಾಖಿ ಕಟ್ಟಿದ ಯುವತಿ, ಚಿಕ್ಕಣ್ಣ ಜೊತೆ ಸೆಲ್ಫಿ ಕೂಡ ತೆಗಿಸಿಕೊಂಡರು. ಈ ವೇಳೆ ಯುವಕರು ಕೇಕೆ ಹಾಕಿ ತಮ್ಮ ನೆಚ್ಚಿನ ನಟನಿಗೆ ಜೈಕಾರ ಹಾಕಿ ಬೀಳ್ಕೊಟ್ರು. ಅಂದಹಾಗೆ, ನಾಯಕ ನಟ ದರ್ಶನ್, ವೈಲ್ಡ್‌ಲೈಫ್‌ ಸಫಾರಿ ಹಾಗೂ ಫೋಟೊಗ್ರಫಿಗೆಂದು ಶಿವಮೊಗ್ಗಕ್ಕೆ 2 ದಿನಗಳ ಕಾಲ ಪ್ರವಾಸ ಕೈಗೊಂಡಿದ್ದು, ಇವರ ಜೊತೆ ಚಿಕ್ಕಣ್ಣ ಮತ್ತು ಶ್ರೀನಗರ ಕಿಟ್ಟಿ ಸೇರಿದಂತೆ, 5-6 ಜನರ ಸ್ನೇಹಿತರು ಆಗಮಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments