ಮೈಸೂರು : ಪವರ್ ಟಿವಿ ವರದಿಗೆ ಸರ್ಕಾರ ಎಚ್ಚೆತ್ತುಕೊಂಡಿದೆ.ನಾಲ್ಕಾರು ದಶಕಗಳು ಆದಿವಾಸಿಗಳ ಸಮಸ್ಯೆಗೆ ಪರಿಹಾರ ಒದಗಿಸಲು ಸರ್ಕಾರ ಮುಂದಾಗುತ್ತಿದೆ.ಆದಿವಾಸಿಗಳ ಕಾಲೋನಿಗೆ ದೌಡಾಯಿಸಿದ ಅಧಿಕಾರಿಗಳ ತಂಡ ನಾಡು ತೊರೆಯಲು ಸಿದ್ದವಾಗಿದ್ದ ಆದಿವಾಸಿಗಳ ಮನವೊಲಿಸುವಲ್ಲಿ ಯಶಸ್ವಿಯಾಗಿದೆ.
ಮೈಸೂರು ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶದ ಮೇರೆಗೆ ಭೇಟಿ ನೀಡಿದ ಅಧಿಕಾರಿಗಳು ಆದಿವಾಸಿಗಳಿಂದ ಮಾಹಿತಿ ಕಲೆ ಹಾಕಿದ್ದಾರೆ.ಈ ಮೂಲಕ ಮೂಲಭೂತ ಸೌಲಭ್ಯ ವಂಚಿತ ಆದಿವಾಸಿ ಕಾಲೋನಿಯ ಜನರಲ್ಲಿ ಮಂದಹಾಸ ಮೂಡಿದೆ. ವಾಸದ ಮನೆಯ ಸೌಲಭ್ಯ, ಆಧಾರ ಕಾರ್ಡ್, ಪಡಿತರ ಚೀಟಿ ಸೌಲಭ್ಯಗಳಿಂದ ವಂಚಿತವಾಗಿದ್ದ ಹೆಚ್.ಡಿ.ಕೋಟೆ ತಾಲೂಕು ಅಳಲಹಳ್ಳಿ ಕಾಲೋನಿ ಆದಿವಾಸಿಗಳು ನಾಡು ತೊರೆದು ಕಾಡು ಸೇರಲು ನಿರ್ಧರಿಸಿದ್ದರು.ಸುಮಾರು ೮೦ ಆದಿವಾಸಿ ಕುಟುಂಬಗಳು ಇಂತಹ ನಿರ್ಧಾರ ಕೈಗೊಂಡಿದ್ದರು.ಈ ಕುರಿತಂತೆ ನಿನ್ನೆ ಪವರ್ ಟಿವಿ ವರದಿ ಮಾಡಿ ಅಧಿಕಾರಿಗಳನ್ನ ಎಚ್ಚರಿಸಿತ್ತು. ಸುದ್ದಿ ಪ್ರಕಟವಾದ ಬಳಿಕ ಎಚ್ ಡಿ ಕೋಟೆ ತಾಲೂಕಿನ ಆಹಾರ ನಿರೀಕ್ಷಕರು, ಮತ್ತು ಪರಿಶಿಷ್ಟ ಪಂಗಡಗಳ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಆದಿವಾಸಿಗಳ ಸಮಸ್ಯೆಗಳನ್ನ ಸಂಗ್ರಹಿಸಿದ್ದು ಕೂಡಲೇ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.
ಇದು ಪವರ್ ಟಿವಿ ವರದಿ ಫಲಶೃತಿಯಾಗಿದೆ…