ರಾಮನಗರ: ಕೊರೋನಾ ಮಹಾಮಾರಿ ಅಬ್ಬರದ ನಡುವೆ ಮಾಗಡಿ ಜೆಡಿಎಸ್ ಶಾಸಕ ಎ.ಮಂಜು ಅಂಧ ದರ್ಬಾರ್. ಕೋವಿಡ್ ನಿಯಮ ಉಲ್ಲಂಘಿಸಿ ಬಿಡದಿಯಲ್ಲಿ ಬೆಂಬಲಿಗನ ಬರ್ತ್ ಡೇ ಪಾರ್ಟಿಯಲ್ಲಿ ಮೋಜುಮಸ್ತಿ
ಬಿಡದಿಯ ಹೊಸದೊಡ್ಡಿ ಗ್ರಾಮದಲ್ಲಿ ನಡೆದ ಬರ್ತ್ ಡೆ ಪಾರ್ಟಿಯಲ್ಲಿ ಶಾಸಕರ ಬೆಂಬಲಿಗರಾದ ಶೇಷಪ್ಪ ಎಂಬುವರ 60 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಎ.ಮಂಜುನಾಥ್ ಭಾಗಿಯಾಗಿದ್ರು. ಜಿಲ್ಲೆಯಲ್ಲಿ ಕರೋನ ದಿನದಿಂದ ದಿನಕ್ಕೆ ಹೆಚ್ಚಾಗ್ತನೆ ಇದ್ರೂ ಕೂಡ ಯಾಕೆ ಈ ರೀತಿ ನಿರ್ಲಕ್ಷ್ಯ, ಬರ್ತ್ ಡೇ ಪಾರ್ಟಿಯಲ್ಲಿ ಯಾವುದೇ ಸಾಮಾಜಿಕ ಅಂತರ ಇಲ್ಲದೇ ಮಾಸ್ಕ್ ಧರಿಸದೇ ಬೇರೆ ಬೇರೆ ಜಿಲ್ಲೆಯಿಂದ ಅನೇಕರು ಪಾರ್ಟಿಯಲ್ಲಿ ಭಾಗಿಯಾಗಿದ್ರು. ಜನಸಾಮಾನ್ಯರಿಗೆ ಅರಿವು ಮೂಡಿಸಿ ಜನರಿಗೆ ತಿಳಿಹೇಳಬೇಕಿದ್ದ ಶಾಸಕರೇ ಈ ರೀತಿ ಮಾಡಿದ್ರೆ ಹೇಗೆ ಎಂದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗ್ತಿದೆ. ಇನ್ನೂ ಕಳೆದ ಒಂದು ವಾರದ ಹಿಂದೆ ಶಾಸಕರ ಆಪ್ತ ಕಾರ್ಯದರ್ಶಿಗೆ ಕರೋನ ಪಾಸಿಟಿವ್ ಬಂದಿತ್ತು, ಆ ಹಿನ್ನಲೆಯಲ್ಲಿ ಶಾಸಕರು ಕೂಡ ಹೋಂ ಕ್ವಾರಂಟೈನ್ ನಲ್ಲಿ ಇದ್ರೂ, ಎರಡು ದಿನಗಳ ಹಿಂದೆ ಶಾಸಕರ ವರದಿ ನೆಗೆಟಿವ್ ಬಂದಿದೆ. ಇಷ್ಟೆಲ್ಲಾ ಗೊತ್ತಿದ್ರು ಶಾಸಕರು ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾಗಿ ತಮ್ಮ ಬೆಂಬಲಿಗನ ಅದ್ದೂರಿ ಬರ್ತ್ ಡೇಯಲ್ಲಿ ಭಾಗಿಯಾಗುವ ಅವಶ್ಯಕತೆ ಇತ್ತಾ..? ಇದೆಲ್ಲಾ ಗೊತ್ತಿದ್ರೂ ಯಾಕೆ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಜನಸಾಮಾನ್ಯರಿಗೆ ಒಂದು ಕಾನೂನು ಜನಪ್ರತಿನಿಧಿಗಳಿಗೆ ಒಂದು ಕಾನೂನಾ..? ಎಂಬ ಪ್ರಶ್ನೆ ಇದೀಗ ಮೂಡಿದೆ.


