ಮುಂಬೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣ ಆಯೋಗದ ಮೇಲೆ ಮತ್ತೊಮ್ಮೆ ಗಂಭೀರ ಆರೋಪ ಮಾಡಿದ್ದು. ಮಹರಾಷ್ಟ್ರ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಬಿಜೆಪಿ ಅಧಿಕಾರ ಹಿಡಿದಿದೆ. ಈಗ ಬಿಹಾರದಲ್ಲಿಯೂ ಇದು ನಡೆಯಬಹುದು. ಹಾಗೂ ಬಿಜೆಪಿ ಸೋಲುವಲ್ಲೆಲ್ಲಾ ಮ್ಯಾಚ್ ಫಿಕ್ಸಿಂಗ್ ನಡೆಯಬಹುದು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲು ಐದು ಹಂತದ ಮ್ಯಾಚ್ ಫಿಕ್ಸಿಂಗ್ ಮಾದರಿಯನ್ನು ಬಳಸಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಬರೆದ ಲೇಖನದಲ್ಲಿ ರಾಹುಲ್ ಗಾಂಧಿ ಇದನ್ನು ಉಲ್ಲೇಖಿಸಿದ್ದು. ಕಳೆದ ವರ್ಷ ಮಹಾರಾಷ್ಟ್ರ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ. ಇದು ಬಿಹಾರಕ್ಕೂ ಬರಬಹುದು. ಈ ರೀತಿ ಮ್ಯಾಚ್ ಫಿಕ್ಸಿಂಗ್ ಚಟುವಟಿಕೆ ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ :ನಾನು ಶಿವಣ್ಣ, ದರ್ಶನ್ ಮತ್ತು ಧ್ರುವ ಬಗ್ಗೆ ಮಾತನಾಡಿಲ್ಲ; ಜೈಲಿನಿಂದ ಹೊರಬರುತ್ತಲೆ ಸ್ಪಷ್ಟನೆ ಕೊಟ್ಟ ಮನು
How to steal an election?
Maharashtra assembly elections in 2024 were a blueprint for rigging democracy.
My article shows how this happened, step by step:
Step 1: Rig the panel for appointing the Election Commission
Step 2: Add fake voters to the roll
Step 3: Inflate voter… pic.twitter.com/ntCwtPVXTu— Rahul Gandhi (@RahulGandhi) June 7, 2025
ರಾಹುಲ್ ಗಾಂಧಿ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಐದು ರೀತಿಯ ಹಂತಗಳನ್ನು ವಿವರಿಸಿದ್ದು. ಈ ಕುರಿತು ಪ್ರಕಟವಾಗಿರುವ ಪತ್ರಿಕೆಯ ಪುಟವನ್ನು ತಮ್ಮ ಸೋಷಿಯಲ್ ಮಿಡಿಯಾ ಅಕೌಂಟ್ನಲ್ಲಿ ಹಂಚಿಕೊಂಡಿದ್ದಾರೆ. ಇದರ ಕೆಳಗೆ ರಾಹುಲ್ ಗಾಂಧಿ ಮ್ಯಾಚ್ ಫಿಕ್ಸಿಂಗ್ ಹೇಗೆ ನಡೆಯುತ್ತದೆ ಎಂಬುದನ್ನು ಹಂತ ಹಂತವಾಗಿ ವಿವರಿಸಿದ್ದಾರೆ. ಇದನ್ನೂ ಓದಿ:ಸಿದ್ದರಾಮಯ್ಯ ಒಬ್ಬ ಹೇಡಿ, ಅಸಹಾಯಕ ಮುಖ್ಯಮಂತ್ರಿ; ಭಾಸ್ಕರ್ ರಾವ್ ಆಕ್ರೋಶ
- ಒಂದನೇ ಹಂತ: ಎಲೆಕ್ಷನ್ ಕಮೀಷನ್ ಅಧಿಕಾರಿಗಳನ್ನು ರಿಗ್ಗಿಂಗ್ ಮಾಡಿದ್ದಾರೆ
- ಎರಡನೇ ಹಂತ : ಮತದಾರರ ಪಟ್ಟಿಗೆ ನಕಲಿ ಹೆಸರುಗಳನ್ನು ಸೇರಿಸುವುದು.
- ಮೂರನೇ ಹಂತ: ಶೇಕಡಾವಾರು ಮತದಾನವನ್ನು ಹೆಚ್ಚಿಸಿದ್ದಾರೆ.
- ನಾಲ್ಕನೇ ಹಂತ: ಗೆಲುವ ಅವಶ್ಯಕತೆ ಇರುವ ಕಡೆ ಬಿಜೆಪಿ ಬೋಗಸ್ ವೋಟಿಂಗ್ ನಡೆದಿದೆ.
- ಐದನೇ ಹಂತ: ಸಾಕ್ಷ್ಯಗಳನ್ನು ಮುಚ್ಚಿಡುವ ಕೆಲಸಗಳನ್ನು ಮಾಡಿದ್ದಾರೆ ಎಂದು ವಿವರಿಸಿದ್ದಾರೆ.
ಘಟನೆ ಕುರಿತು ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದು. “ರಾಹುಲ್ ಗಾಂಧಿ ಅವರ ಈ ಹೇಳಿಕೆಯನ್ನು ಬಿಜೆಪಿ ನಾಚಿಕೆಗೇಡು ಇದು ಎಂದು ಹೇಳಿದೆ. ರಾಹುಲ್ ಗಾಂಧಿ ದೇಶದ ಸಂಸ್ಥೆಗಳನ್ನು ಕೀಳಾಗಿ ನೋಡುತ್ತಿದ್ದಾರೆ, ಇದೀಗ ಅವರ ಮನಸ್ಸಿನಲ್ಲಿ ಮತ್ತೆ ಅನುಮಾನದ ವರ್ತನೆ ಶುರುವಾಗಿದೆ ಎಂದು ಹೇಳಿದೆ. ಈ ವಿಷಯಗಳನ್ನು ಚುನಾವಣಾ ಆಯೋಗವು ಪದೇ ಪದೇ ಸಂಪೂರ್ಣ ವಿವರವನ್ನು ನೀಡಿದೆ ಎಂದು ಬಿಜೆಪಿಯ ತುಹಿನ್ ಸಿನ್ಹಾ ಹೇಳಿದ್ದಾರೆ.