Thursday, August 21, 2025
Google search engine
HomeUncategorizedಈ ಸಲ ಕಪ್​ ನಮ್ದೇ; ಹರಕೆ ತೀರಿಸಿದ ಬಾಲಕಿ, ವಿಜಯ ದುರ್ಗ ಹೋಮ ಮಾಡಿಸಿದ ಶಾಸಕ

ಈ ಸಲ ಕಪ್​ ನಮ್ದೇ; ಹರಕೆ ತೀರಿಸಿದ ಬಾಲಕಿ, ವಿಜಯ ದುರ್ಗ ಹೋಮ ಮಾಡಿಸಿದ ಶಾಸಕ

ಮೈಸೂರು: ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ 9 ವರ್ಷಗಳ ನಂತರ ಐಪಿಎಲ್ ಫೈನಲ್ ತಲುಪಿದೆ. ನಾಳೆ ಗುಜರಾತ್​ ಅಹಮ್ಮದಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಪಂಜಾಬ್​ ಮತ್ತು ಆರ್​ಸಿಬಿ ತಂಡಗಳು ಸೆಣಸಾಡಲಿದ್ದು. ಎರಡು ತಂಡಗಳು ಕಪ್ ಗೆಲ್ಲುವ ಉತ್ಸಾಹದಲ್ಲಿವೆ. ಇದರ ನಡುವೆ ಆರ್​ಸಿಬಿ ಕಪ್ ಗೆಲ್ಲಲಿ ಎಂದು ರಾಜ್ಯದೆಲ್ಲಡೆ ಪೂಜೆ-ಪುನಸ್ಕಾರಗಳು ನಡೆಯುತ್ತಿದ್ದು. ಬಾಲಕಿಯೊಬ್ಬಳು ಅಂಜನಾದ್ರಿ ಬೆಟ್ಟದಲ್ಲಿ ಹರಕೆ ತೀರಿಸಿ ಆರ್​ಸಿಬಿ ಕಪ್​ ಗೆಲ್ಲಲಿ ಎಂದು ಪ್ರಾರ್ಥಿಸಿದ್ದಾಳೆ. ಇದನ್ನೂ ಓದಿ :ರಾಮನಗರಕ್ಕೆ ನೀರು ಬೇಕಿಲ್ಲ, ಕುಣಿಗಲ್​ಗೆ ಅನ್ಯಾಯ ಆಗಿದೆ, ಅದನ್ನ ಸರಿಪಡಿಸಬೇಕು ; ಡಿ.ಕೆ ಶಿವಕುಮಾರ್​

ಮೈಸೂರಿನಲ್ಲಿ ಶಾಸಕರಿಂದ ವಿಜಯ ದುರ್ಗಾ ಹೋಮ..!

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಫಿನಾಲೆಯಲ್ಲಿ ಪಂಜಾಬ್​ ತಂಡವನ್ನು ಮಣಿಸಿ ಕಪ್​ ಗೆಲ್ಲಲಿ ಎಂದು ಆರ್​ಸಿಬಿ ಅಭಿಮಾನಿಗಳು ಪೂಜೆ-ಪುನಸ್ಕಾರದಲ್ಲಿ ತೊಡಗಿದ್ದಾರೆ. ಇದರ ನಡುವೆ ಶಾಸಕ ಹರೀಶ್​ ಗೌಡ ಮೈಸೂರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಮೃತೇಶ್ವರ ದೇವಾಸ್ಥಾನದಲ್ಲಿ ವಿಜಯ ದುರ್ಗಾ ಹೋಮ ಮಾಡಿಸಿದ್ದಾರೆ. ಇದನ್ನೂ ಓದಿ :ಧೂಮಪಾನಕ್ಕೆ ಪ್ರತ್ಯೇಕ ಸ್ಥಳವಿಲ್ಲದ ಆರೋಪ; ವಿರಾಟ್​ ಮಾಲಿಕತ್ವದ ಪಬ್​ ವಿರುದ್ದ ಕೇಸ್ ದಾಖಲು

ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಹರೀಶ್​ ಗೌಡ ಆರ್​ಸಿಬಿ ಕಪ್​ ಗೆಲ್ಲಲಿ ಎಂದು ವಿಶೇಷ ಪೂಜೆ ಸಲ್ಲಿಸಿದ್ದು. ಪಂಜಾಬ್ ವಿರುದ್ಧ ಆರ್​ಸಿಬಿ ಗೆಲ್ಲಬೇಕು, ಪ್ರತಿಬಾರಿ ಕೂಡ ಕಪ್ ನಮ್ಮದೇ ಅಂತಿದ್ವೀ, ಆದರೆ ಈ ಬಾರಿ ಕಪ್​ ನಮ್ಮದೇ. ಅದಕ್ಕಾಗಿ ವಿಜಯ ದುರ್ಗಾ ಹೋಮ ಮಾಡಿಸಿದ್ದೇವೆ. ಈ ಭಾರಿ ಅನುಮಾನ ಬೇಡ, ಕಪ್​ ಗೆದ್ದೇ ಗೆಲ್ಲುತ್ತೇವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಅಂಜನಾದ್ರಿ ಬೆಟ್ಟದಲ್ಲಿ ಹರಕೆ ತೀರಿಸಿದ ಪುಟ್ಟ ಬಾಲಕಿ..!

ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ಪುಟ್ಟ ಬಾಲಕಿಯೊಬ್ಬಳು ಆರ್​ಸಿಬಿ ಗೆಲುವಿಗಾಗಿ ಹರಕೆ ತೀರಿಸಿದ್ದು.ರಾಯಚೂರು ತಾಲ್ಲೂಕಿನ ದಿನ್ನಿ ಗ್ರಾಮದ ಬಾಲಕಿ ಕೆ.ಸಮೃದ್ಧಿ ತನ್ನ ಕುಟುಂಬದ ಜೊತೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾಳೆ. ದೇವರಿಗೆ ಹೂ-ಹಣ್ಣು ಅರ್ಪಿಸಿ, ಆರ್​ಸಿಬಿ ಬಾವುಟ ಹಿಡಿದು ಪ್ರದಕ್ಷಿಣೆ ಹಾಕಿ ಹರಕೆ ತೀರಿಸಿದ್ದು. ಈ ಸಲ ಕಪ್​ ನಮ್ದೇ ಎಂದು ಬಾಲಕಿ ಹರ್ಷ ವ್ಯಕ್ತಪಡಿಸಿದ್ದಾಳೆ. ಇದನ್ನೂ ಓದಿ :ಹಿಂದೂ ಮುಖಂಡರಿಗೆ ಜೈಷ್​​ ಉಗ್ರ ಸಂಘಟನೆಯಿಂದ ಜೀವ ಬೆದರಿಕೆ; ತಲೆ ಕಡಿಯುವುದಾಗಿ ಬೆದರಿಕೆ

ಡಿಸಿಎಂ ಡಿಕೆ ಶಿವಕುಮಾರ್​ ಕೂಡ ಆರ್​ಸಿಬಿ ಗೆಲುವಿಗಾಗಿ ವಿಶ್​ ಮಾಡಿದ್ದು. ನಮಗೆ ವಿಶ್ವಾಸ ಇದೆ, ಬೆಂಗಳೂರು ಈ ಭಾರಿ ಕಪ್ ಗೆಲ್ಲುತೆ ಎಂದು ಸುದ್ದಿಗೋಷ್ಟಿಯಲ್ಲಿ ಹೇಳಿದರು. https://whatsapp.com/channel/0029Va5cjRY9Gv7Tls4bhb1n

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments