Thursday, August 21, 2025
Google search engine
HomeUncategorizedಸನಾತನ ಧರ್ಮವೇ ಇಸ್ಲಾಂ ಧರ್ಮಕ್ಕೆ ಅಡಿಪಾಯ , ಮುಸ್ಲಿಂರು ರಾಮನ ವಂಶಸ್ಥರು; ಜಮಾಲ್​ ಸಿದ್ದಿಕಿ, ಬಿಜೆಪಿ...

ಸನಾತನ ಧರ್ಮವೇ ಇಸ್ಲಾಂ ಧರ್ಮಕ್ಕೆ ಅಡಿಪಾಯ , ಮುಸ್ಲಿಂರು ರಾಮನ ವಂಶಸ್ಥರು; ಜಮಾಲ್​ ಸಿದ್ದಿಕಿ, ಬಿಜೆಪಿ ನಾಯಕ

ಇಸ್ಲಾಂಗಿಂತ ಮೊದಲೇ ಸನಾತನ ಧರ್ಮ ಹುಟ್ಟಿದೆ. ರಾಮ, ಕೃಷ್ಣನನ್ನು ನಂಬದ ಮುಸ್ಲಿಂರನ್ನು, ಮುಸ್ಲೀಮರು ಎಂದು ಕರೆಯಲಾಗುವುದಿಲ್ಲ ಎಂದು ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚದಾ ರಾಷ್ಟ್ರೀಯ ಅಧ್ಯಕ್ಷ ಜಮಾಲ್​ ಸಿದ್ದಿಕಿ ಹೇಳಿದ್ದಾರೆ.

ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸಿದ್ದಿಕಿ, ‘ಸನಾತನ ಧರ್ಮ ಮತ್ತು ಇಸ್ಲಾಮಿಕ್​ ಧರ್ಮಗಳ ನಡುವೆ ಹೆಣೆದುಕೊಂಡಿರುವ ಪರಂಪರೆಯ ಬಗ್ಗೆ ಗಮನಾರ್ಹ ಹೇಳಿಕೆ ನೀಡಿದ್ದಾರೆ. ಸನಾತಾನ ಧರ್ಮವು ಇಸ್ಲಾಂ ಧರ್ಮಕ್ಕಿಂತ ಬಹಳ ಹಿಂದೆಯೇ ಬಂದಿತು. ಸನಾತನ ಧರ್ಮವು ನಾಗರಿಕತೆಯ ಅಡಿಪಾಯ. ಎಲ್ಲಾ ಮುಸ್ಲಿಮರು ಭಗವಾನ್ ರಾಮನ ವಂಶಸ್ಥರು ಎಂದು ಜಮಾಲ್ ಸಿದ್ಧಿಕಿ ಹೇಳಿದ್ದಾರೆ. ಇದನ್ನೂ ಓದಿ :‘ತಂದೆ ಸಮಾನರಾದ ಅಂಬಿ ಅಪ್ಪಾಜಿ ಎಂದಿಗೂ ಜೀವಂತ’; ರೆಬಲ್​ ಸ್ಟಾರ್ ನೆನೆದು ದರ್ಶನ್​ ಟ್ವಿಟ್

ಅಲ್ಲದೆ, ರಾಮ ಮತ್ತು ಕೃಷ್ಣರಲ್ಲಿ ನಂಬಿಕೆಯಿಲ್ಲದ ಮುಸ್ಲಿಮರನ್ನು ಮುಸ್ಲಿಮರು ಎಂದು ಕರೆಯಲಾಗುವುದಿಲ್ಲ. ಈ ಪೂಜ್ಯ ವ್ಯಕ್ತಿಗಳು ಇಸ್ಲಾಮಿಕ್ ಆಧ್ಯಾತ್ಮಿಕ ಪರಂಪರೆಯಲ್ಲಿ ಸ್ಥಾನ ಹೊಂದಿರಬಹುದು ಎಂದು ಸಿದ್ಧಿಕಿ ಪ್ರತಿಪಾದಿಸಿದ್ದಾರೆ.

ಮುಂದುವರಿದು ಮಾತನಾಡಿರುವ ಜಮಾಲ್​ ಸಿದ್ದಿಕಿ ‘ಕುರಾನ್‌ನಲ್ಲಿ 25 ಪ್ರವಾದಿಗಳ ಬಗ್ಗೆ ಉಲ್ಲೇಖಿಸಲಾಗಿದೆ ಆದರೆ, ಹದೀಸ್ ಮತ್ತು ಸಂಪ್ರದಾಯದ ಪ್ರಕಾರ, ಪ್ರಪಂಚದಾದ್ಯಂತ 1,24,000 ಪ್ರವಾದಿಗಳನ್ನು ಕಳುಹಿಸಲಾಗಿದೆ. ಭಗವಾನ್ ರಾಮ ಮತ್ತು ಶ್ರೀಕೃಷ್ಣ ಕೂಡ ಅವರಲ್ಲಿ ಇರಲಿಲ್ಲ ಎಂದು ನಾವು ಹೇಗೆ ಹೇಳಬಹುದು ಎಂದರು. ಅವರು ದೇವರ ಸಂದೇಶ ವಾಹಕರಾಗಿರಬಹುದು ಎಂದು ಹೇಳಿದರು.

ಇದನ್ನೂ ಓದಿ:ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಲಿಗಳ ಕಾಟ; ಬಾಳೆಹಣ್ಣು ತಿನ್ನುವ ವಿಡಿಯೋ ವೈರಲ್

ಎಲ್ಲಾ ಮುಸ್ಲಿಮರು ಭಗವಾನ್ ರಾಮನ ವಂಶಸ್ಥರು ಎಂದು ಹೇಳುವ ಮೂಲಕ ವಂಶಾವಳಿಯನ್ನು ಸಹ ಪ್ರತಿವಾದಿಸಿದರು. ಭಾರತದಲ್ಲಿ ಮುಸ್ಲಿಂ ಸಮುದಾಯದ ಬೇರುಗಳು ಪ್ರಾಚೀನ ಹಿಂದೂ ಸಂಪ್ರದಾಯದೊಂದಿಗೆ ಹೆಣೆದುಕೊಂಡಿವೆ ಎಂಬುದನ್ನು ಇದು ಸೂಚಿಸುತ್ತದೆ. ಪೂಜಾ ವಿಧಾನಗಳು ಬದಲಾಗಿರಬಹುದು ಆದರೆ, ಆಧಾರವಾಗಿರುವ ಸಂಸ್ಕೃತಿ ಸ್ಥಿರವಾಗಿ ಉಳಿದಿದೆ. ನಮ್ಮ ಗುರುತು ಇನ್ನೂ ಸನಾತನ ಎಂದು ಸಿದ್ಧಿಕಿ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments