ಬೆಂಗಳೂರು: ಹುಬ್ಬಳ್ಳಿ ಗಲಭೆ ಪ್ರಕರಣ ಸೇರಿದಂತೆ 43 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದ ಕರ್ನಾಟಕ ರಾಜ್ಯ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಕಳೆದ ವರ್ಷ ಅಕ್ಟೋಬರ್ 10ರಂದು ವಾಪಾಸ್ ಪಡೆದಿತ್ತು. ಸರ್ಕಾರದ ಈ ಕ್ರಮವನ್ನ ಪ್ರಶ್ನಿಸಿಕೊಂಡು ಗಿರೀಶ್ ಭಾರಧ್ವಜ್ ಎಂಬುವವರು ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಸರ್ಕಾರದ ಆದೇಶವನ್ನು ರದ್ದುಗೊಳಿಸಿದೆ. ಇದನ್ನೂ ಓದಿ :ಕಮಲ್ ಬಳಿ ಕ್ಷಮೆ ಕೇಳಿಸುವ ಪ್ರಯತ್ನ ಮಾಡುತ್ತೇವೆ, ಇಲ್ಲದಿದ್ದರೆ ಸಿನಿಮಾ ಬ್ಯಾನ್; ನರಸಿಂಹಲು
ವಿವಿಧ ಸಂಘಟನೆಗಳು, ಹೋರಾಟಗಾರರು, ರಾಜಕಾರಣಿಗಳು ಸೇರಿದಂತೆ ಸುಮಾರು 43 ಪ್ರಕರಣಗಳನ್ನ ರಾಜ್ಯ ಸರ್ಕಾರ ರದ್ದುಗೊಳಿಸಿತ್ತು. ಇದನ್ನ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡು ನ್ಯಾಯಾಪೀಠ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಿದೆ. ಸಿಜೆ ಎನ್.ವಿ.ಅಂಜಾರಿಯಾ, ನ್ಯಾ.ಕೆ.ವಿ.ಅರವಿಂದ್ ಅವರಿದ್ದ ದ್ವಿಸದಸ್ಯ ಪೀಠ ಇಂದು ಸರ್ಕಾರದ ಆದೇಶವನ್ನು ರದ್ದುಗೊಳಿಸಿದೆ.
ಏನಿದು ಹುಬ್ಬಳ್ಳಿ ಗಲಗೆ ಪ್ರಕರಣ..!
ಏಪ್ರಿಲ್ 16, 2022ರ ಸಂಜೆ ಹಳೇ ಹುಬ್ಬಳ್ಳಿಯಲ್ಲಿ ಮುಸ್ಲಿಮರ ವಿರುದ್ಧ ಯುವಕನೊಬ್ಬಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಸ್ಟೇಟಸ್ ಹಾಕಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತು. ಮುಸಲ್ಮಾನರ
ಪ್ರಾಬಲ್ಯವಿರುವ ಈ ಭಾಗದ ಸಮುದಾಯದ ಜನರು ಆಕ್ರೋಶಗೊಂಡು ಹಳೇ ಹುಬ್ಬಳ್ಳಿ ಠಾಣೆಗೆ ತೆರಳಿ ದೂರು ನೀಡಿ ಯುವಕನನ್ನು ಬಂಧಿಸುವಂತೆ ಕೋರಿದ್ದರು. ಇದನ್ನೂ ಓದಿ:
ದಕ್ಷಿಣೆ ರೂಪದಲ್ಲಿ ಪಿಒಕೆ ಕೇಳಿದ್ದೇನೆ; ಸೇನಾ ಮುಖ್ಯಸ್ಥರಿಗೆ ಜಗದ್ಗುರು ರಾಮಭದ್ರಾಚಾರ್ಯರ ಮನವಿ
ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಯುವಕನನ್ನು ಬಂಧಿಸಿದ್ದರು. ಆದರೆ ಪೊಲೀಸ್ ಠಾಣೆಯ ಹೊರಗೆ
ಜಮಾಯಿಸಿದ ಆಕ್ರೋಶಗೊಂಡ ಜನರು ಆತನನ್ನು ತಮಗೆ ಒಪ್ಪಿಸುವಂತೆ ಒತ್ತಾಯಿಸಿದರು. ಪೊಲೀಸ್ ಅಧಿಕಾರಿಗಳು ಸಮುದಾಯದ ಮುಖಂಡರೊಂದಿಗೆ ಮಾತನಾಡುತ್ತಿರುವಾಗ, ಗುಂಪಿನಿಂದ ಕೆಲವು ಕಿಡಿಗೇಡಿಗಳು ಪೊಲೀಸರ ವಾಹನಗಳು ಮತ್ತು ಠಾಣೆಯ ಮೇಲೆ ಕಲ್ಲು ತೂರಿದರು. ಈ ವೇಳೆ ಕಿಡಿಗೇಡಿಗಳ ಆರ್ಭಟ ನಿಯಂತ್ರಣ ತಪ್ಪಿದಾಗ, ಪೊಲೀಸರು ಲಾಠಿ ಚಾರ್ಜ್ ಮಾಡಿದರು ಮತ್ತು ಗುಂಪನ್ನು ನಿಯಂತ್ರಿಸಲು ರಬ್ಬರ್ ಗುಂಡುಗಳನ್ನು ಹಾರಿಸಿದರು. ಇದನ್ನೂ ಓದಿ :ತಮಿಳಿನಿಂದ ಕನ್ನಡ ಹುಟ್ಟಿದೆ ಅನ್ನೋದು ಸುಳ್ಳು; ಕಮಲ್ ಹಾಸನ್ ವಿರುದ್ದ ಚೇತನ್ ಅಹಿಂಸಾ ವಾಗ್ದಾಳಿ
ಈ ವೇಳೆ ಸಮುದಾಯವು ಸಾರ್ವಜನಿಕರು ಮತ್ತು ಹತ್ತಿರದ ದೇವಾಲಯಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿದಾಗ, ಪೊಲೀಸರು ಅಶ್ರುವಾಯು ಶೆಲ್ಗಳನ್ನು ಸಿಡಿಸಿ 13 ಸುತ್ತು ಗುಂಡು ಹಾರಿಸಿದರು, ಇದರಿಂದ ಪರಿಸ್ಥಿತಿ ಹತೋಟಿಗೆ ಬಂತು. ಆ ರಾತ್ರಿ ನಡೆದ ಹಿಂಸಾಚಾರದಲ್ಲಿ ಇನ್ಸ್ಪೆಕ್ಟರ್ ಸೇರಿದಂತೆ 12 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ನಂತರ ಪೊಲೀಸರು ಘಟನೆಯ ವೀಡಿಯೊ ರೆಕಾರ್ಡಿಂಗ್ಗಳನ್ನು ಪರಿಶೀಲಿಸಿ ಮುಂದಿನ ಕೆಲವು ದಿನಗಳಲ್ಲಿ 150 ಕ್ಕೂಹೆಚ್ಚು ಜನರನ್ನು ಬಂಧಿಸಿದ್ದರು.