Thursday, August 28, 2025
HomeUncategorizedHoroscope Today : ಇಂದು ಕೊನೆಯ ಕಾರ್ತಿಕ ಸೋಮವಾರ ; ಯಾವ ರಾಶಿಯವರಿಗೆ ಶಿವ ಕೃಪೆ

Horoscope Today : ಇಂದು ಕೊನೆಯ ಕಾರ್ತಿಕ ಸೋಮವಾರ ; ಯಾವ ರಾಶಿಯವರಿಗೆ ಶಿವ ಕೃಪೆ

ಬೆಂಗಳೂರು: ಇಂದು ಕೊನೆಯ ಕಾರ್ತಿಕ ಸೋಮವಾರ.ಈ ದಿನ ಯಾವ ರಾಶಿಯವರೆಗೆ ಸಿಗಲಿದೆ ಶಿವಕೃಪೆ, ರಾಶಿ ಭವಿಷ್ಯ ಹೇಗಿರಲಿದೆ? ರಾಶಿಯವರು ಎಚ್ಚರದಿಂದಿರಬೇಕು ಎನ್ನುವುದನ್ನು ತಿಳಿದುಕೊಳ್ಳಿ. 

ಮೇಷ: ಈ ದಿನ ವಸ್ತ್ರಾಭರಣ ಪ್ರಾಪ್ತಿ, ಅಧಿಕಾರಿಗಳಿಂದ ಪ್ರಶಂಸೆ, ಅನಾರೋಗ್ಯ, ಉದ್ಯೋಗದಲ್ಲಿ ಬಡ್ತಿ, ಕಾರ್ಯ ಬದಲಾವಣೆ.ಪೋಷಕರ ಆಶೀರ್ವಾದ ಪಡೆಯಿರಿ ಒಳಿತು ಆಗುತ್ತಾದೆ.

ವೃಷಭ: ಈ ದಿನ ದ್ರವ್ಯ ಲಾಭ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮನಃಶಾಂತಿ, ಸೇವಕರಿಂದ ಸಹಾಯ, ಗಣ್ಯ ವ್ಯಕ್ತಿಗಳ ಭೇಟಿ.ಇಂದು ನಿಮ್ಮ ಮಕ್ಕಳು ಸಮಾಜಸೇವೆ ಮಾಡುವುದನ್ನು ನೋಡಿ ಸಂತೋಷಪಡುತ್ತೀರಿ. ಹಸುವಿಗೆ ಹಸಿರು ಮೇವನ್ನು ನೀಡಿ.

ಮಿಥುನ: ಈ ದಿನ ಕೃಷಿಕರಿಗೆ ಲಾಭ, ಶತ್ರು ನಾಶ, ವಾಹನ ಅಪಘಾತ ಅಲ್ಪ ಕಾರ್ಯ ಸಿದ್ದಿ, ಮನಕ್ಲೇಶ, ಅಧಿಕ ಖರ್ಚು.ಇಂದು ನೀವು ನಿಮ್ಮ ಕುಟುಂಬದ ಕಿರಿಯ ಮಕ್ಕಳ ಮಹತ್ವಾಕಾಂಕ್ಷೆಗಳನ್ನು ಪೂರೈಸಲು ಸ್ವಲ್ಪ ಹಣವನ್ನು ಖರ್ಚು ಮಾಡುತ್ತೀರಿ. ಲಕ್ಷ್ಮಿ ದೇವಿಯನ್ನು ಆರಾಧಿಸಿ.

ಕಟಕ: ಈ ದಿನ ತೀರ್ಥಯಾತ್ರ ದರ್ಶನ, ಮನಸ್ಸಿಗೆ ನೆಮ್ಮದಿ, ಧನ ಲಾಭ, ದೂರ ಪ್ರಯಾಣ, ಸಾಲದಿಂದ ಮುಕ್ತಿ, ಋಣವಿಮೋಚನೆ. ಸಂಜೆ ಸಮಯ ಇಂದು ನೀವು ನಿಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಲು ಮತ್ತು ಶಾಪಿಂಗ್ ಮಾಡಲು ಯೋಚಿಸಬಹುದು, ಆದರೆ ಅದರಲ್ಲಿ ನೀವು ವಿಫಲರಾಗುತ್ತೀರಿ. ಅರಳಿ ಮರಕ್ಕೆ ಹಾಲು ಬೆರೆಸಿದ ನೀರನ್ನು ಅರ್ಪಿಸಿ.

ಸಿಂಹ: ಈ ದಿನ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಾಡುವ ಕೆಲಸದಲ್ಲಿ ತೊಂದರೆ, ಮಾನಹಾನಿ, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ.ನಿಮ್ಮ ಸ್ನೇಹಿತರಲ್ಲಿ ಒಬ್ಬರು ಇಂದು ಸಂಜೆ ನಿಮ್ಮನ್ನು ಭೇಟಿಯಾಗಲು ಬರಬಹುದು. ಮೀನುಗಳಿಗೆ ಆಹಾರ ನೀಡಿ

ಕನ್ಯಾ: ಈ ದಿನ ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಆಸ್ತಿ ವಿಚಾರದಲ್ಲಿ ವಾದ, ರೋಗ್ಯದಲ್ಲಿ ಏರುಪೇರು, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.ಗಾಯತ್ರಿ ಚಾಲೀಸಾ ಪಠಿಸಿ.

ತುಲಾ: ಈ ದಿನ ಶಿಕ್ಷಕ ವರ್ಗದವರಿಗೆ ಹೆಚ್ಚಿನ ಕೆಲಸ, ವಾಹನ ಚಾಲಕರಿಗೆ ತೊಂದರೆ, ಹಿತ ಶತ್ರು ಬಾದೆ, ವಿಪರೀತ ವ್ಯಾಸನ.ಈ ಸಂಜೆ ನೀವು ಸ್ವಲ್ಪ ಒತ್ತಡವನ್ನು ಅನುಭವಿಸುವಿರಿ. ಹನುಮಂತನಿಗೆ ಸಿಂಧೂರವನ್ನು ಅರ್ಪಿಸಿ.

ವೃಶ್ಚಿಕ: ಈ ದಿನ ಪತಿ-ಪತ್ನಿರಲ್ಲಿ ಪ್ರೀತಿ, ಧನ ಸಹಾಯ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಮಾತಿನ ಚಕಮುಕಿ, ಅಧಿಕ ತಿರುಗಾಟ.ವಿಷ್ಣುವನ್ನು ಆರಾಧಿಸಿ.

ಧನಸ್ಸು: ಈ ದಿನ ಪ್ರೀತಿ ಪಾತ್ರರೊಬ್ಬರ ಆಗಮನ, ವಿದ್ಯಾರ್ಥಿಗಳಿಗೆ ಯಶಸ್ಸು, ಯತ್ನ ಕಾರ್ಯದಲ್ಲಿ ಜಯ, ಮಂಗಳ ಕಾರ್ಯಗಳಲ್ಲಿ ಭಾಗಿ.ವಿಷ್ಣು ಸಹಸ್ತ್ರವನ್ನು ಪಠಿಸಿ

ಮಕರ: ಈ ದಿನ ಮಾನಸಿಕ ಒತ್ತಡ, ದುಃಖಕ್ಕೆ ಗುರಿಯಾಗುವುದು, ದಾಯಾದಿ ಕಲಹ, ಶರೀರದಲ್ಲಿ ಆಲಸ್ಯ, ಇಲ್ಲಸಲ್ಲದ ಅಪವಾದ.ಅರಳಿ ಮರದ ಕೆಳಗೆ ದೀಪವನ್ನು ಬೆಳಗಿಸಿ.

ಕುಂಭ : ಈ ದಿನ ಉದ್ಯೋಗದಲ್ಲಿ ಪ್ರಗತಿ, ಮಿತ್ರರಿಂದ ತೊಂದರೆ, ಸಂತಾನ ಪ್ರಾಪ್ತಿ, ಕುಟುಂಬ ಸೌಖ್ಯ, ಯಾರನ್ನು ಹೆಚ್ಚಾಗಿ ನಂಬಬೇಡಿ.ಇಂದು ನಿರ್ಗತಿಕರಿಗೆ ಸಹಾಯ ಮಾಡಿ.

ಮೀನ: ಈ ದಿನ ಸ್ಥಿರಾಸ್ತಿ ಮಾರಾಟ, ಮನಸ್ಸು ಪಾಪದ ಕೆಲಸಗಳಿಗೆ ಪ್ರಚೋದಿಸುವುದು, ಮಹಿಳೆಯರಿಗೆ ಉತ್ತಮ ಪ್ರಗತಿ, ವಿವಾದಗಳಿಗೆ ಆಸ್ಪದ ಕೊಡಬೇಡಿ.ಶಿವಲಿಂಗಕ್ಕೆ ಹಾಲನ್ನು ಅರ್ಪಿಸಿ.

ರಾಹುಕಾಲ :7.58 ರಿಂದ 9.24

ಗುಳಿಕಕಾಲ :1.42 ರಿಂದ 3.08
ಯಮಗಂಡಕಾಲ :12.16 ರಿಂದ 1.42
ವಾರ : ಸೋಮವಾರ, ತಿಥಿ : ತ್ರಯೋದಶಿ
ನಕ್ಷತ್ರ : ವಿಶಾಖ
ಯೋಗ : ಸುಕನ್ಯ
ಕರಣ : ವಾಣಿಜ
ಶ್ರೀ ಶೋಭಕೃತ್‌ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು
ಕಾರ್ತಿಕ ಮಾಸ, ಕೃಷ್ಣ ಪಕ್ಷ

 

 

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments