Saturday, August 23, 2025
Google search engine
HomeUncategorizedಇಂದು ವಿಪಕ್ಷ ನಾಯಕನ ಘೋಷಣೆ ಆಗಬಹುದು : ಬಿ.ಎಸ್.ಯಡಿಯೂರಪ್ಪ

ಇಂದು ವಿಪಕ್ಷ ನಾಯಕನ ಘೋಷಣೆ ಆಗಬಹುದು : ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ವಿಪಕ್ಷ ನಾಯಕ,ರಾಜ್ಯಾಧ್ಯಕ್ಷ ಯಾರಾಗಬೇಕು ಅಂತಾ ಕೇಂದ್ರದ ನಾಯಕರು ಬಂದು ಅಭಿಪ್ರಾಯ ತೆಗೆದುಕೊಂಡು  ಹೋಗಿದ್ದಾರೆ. ಬಹುಶಃ ಇವತ್ತು ಅಮಿತ್ ಷಾ, ಪ್ರಧಾನಿ ಜೊತೆ ಚರ್ಚೆ ನಡೆಸಿ ತೀರ್ಮಾನಕ್ಕೆ ಬರಬಹುದು ಅಂತಾ ನಾವೆಲ್ಲಾ ಭಾವಿಸಿದ್ದೇವೆ ಎಂದರು.

ಹೌದು, ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾಡನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಈಗಲೇ ಕೇಂದ್ರದ ವೀಕ್ಷಕರು  ಬಂದು ಅಭಿಪ್ರಾಯ ತೆಗೆದುಕೊಂಡು ಹೋಗಿದ್ದಾರೆ. ಬಹುಶಃ ಇವತ್ತು ಅಮಿತ್ ಷಾ, ಪ್ರಧಾನಿ ಜೊತೆ ಚರ್ಚೆ ನಡೆಸಿ ತೀರ್ಮಾನಕ್ಕೆ ಬರಬಹುದು ಅಂತಾ ನಾವೆಲ್ಲಾ ಭಾವಿಸಿದ್ದೇವೆ. ಇನ್ನು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ನೋಡೋಣ ಅವರ ತೀರ್ಮಾನವನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಗ್ಯಾರಂಟಿ ಕದನ : ಸದನದಲ್ಲಿ ಸರ್ಕಾರದ​​ ವಿರುದ್ಧ ಹೋರಾಟಕ್ಕೆ ಬಿಜೆಪಿ ಪ್ಲ್ಯಾನ್​​​

ಬಿಜೆಪಿಯಿಂದ ಮೊಂಡಾಟ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತು ಮಾತನಾಡಿದ ಅವರು ಸಿದ್ದರಾಮಯ್ಯ ಬೇಜವಾಬ್ದಾರಿಯಿಂದ ಮಾತಾಡುವುದು ನಿಲ್ಲಿಸಬೇಕು. ಗ್ಯಾರಂಟಿ ಕಾರ್ಡ್ ಕೊಟ್ಟಿರಿವುದನ್ನು ಜಾರಿ ಮಾಡಿ ಅಂತಾ ಹೇಳುತ್ತಿದ್ದೇವೆ
ಅವರು ಮನಬಂದಂತೆ ಮಾತಾಡುತ್ತಿರುವುದು ಬೇಜವಾಬ್ದಾರಿತನದ ಪರಮಾವಧಿ.

ನಾವು ಹೊಸದಾಗಿ ಏನೂ ಕೇಳುತ್ತಾ ಇಲ್ಲ ಕೊಟ್ಟಿರುವ ಭರವಸೆ ಈಡೇರಿಸಬೇಕು ಅಂತಾ ಒತ್ತಾಯಿಸುತ್ತಿದ್ದೇವೆ. ಇನ್ನೂ ನಾವು ಈ ವಿಚಾರವನ್ನು ಇಲ್ಲಿಗೇ ಬಿಡುವುದಿಲ್ಲ ಜಿಲ್ಲೆ ಜಿಲ್ಲೆಗಳಿಗೆ ಹೋಗಿ ಹೋರಾಟ ಮಾಡುತ್ತೇವೆ.

ಲಿಂಗಾಯತ ಸಮುದಾಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಒತ್ತಾಯ ವಿಚಾರ ಮಾತನಾಡಿದ ಅವರು ನಮ್ಮ ಮೇಲೆ ಯಾವುದೇ ಒತ್ತಾಯ ಯಾರು ಮಾಡುತ್ತಿದ್ದಾರೋ ಗೊತ್ತಿಲ್ಲ, ಅದು ಅವರಿಗೆ ಬಿಟ್ಟ ವಿಚಾರ ಯಾರನ್ನು ರಾಜ್ಯಾಧ್ಯಕ್ಷನಾಗಿ ಮಾಡಿದರೂ ಸಹ ನಾವು ಸ್ವಾಗತಿಸುತ್ತೇವೆ ಎಂದರು.

 

 

 

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments