ತುಮಕೂರು: ಅಭಿಮಾನಿಗಳು ಚಲನಚಿತ್ರ ನಟರನ್ನ ಹಚ್ಚಿಕೊಳ್ಳೋದು ಸರ್ವೆ ಸಾಮಾನ್ಯ ಆದ್ರೆ ಇಲ್ಲಿನ ಚಿತ್ರಣವೇ ಬೇರೆ ಇದೆ. ಮಾನಸಿಕ ಅಸ್ವಸ್ಥೆಯಾಗಿರೋ ಈಕೆಗೆ ನಟ ಪುನೀತ್ ರಾಜ್ ಕುಮಾರ್ ನವಚೈತನ್ಯ.. ಮಾತೇ ಬಾರದ ಈಕೆಗೆ ಅಪ್ಪ ಅಮ್ಮ ಬಿಟ್ರೆ ಅಪ್ಪುನೇ ಜೀವ.
ಹೌದು ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ದಲಿತ ಕಾಲೋನಿಯ ಸುರೇಶ್ ಅನುಸೂಯಮ್ಮ ದಂಪತಿಯ ಮೊದಲ ಪುತ್ರಿ ಮಾನಸಿಕ ಅಸ್ವಸ್ಥೆ ದೇವಿಪ್ರಿಯಾ ಅಪ್ಪು ಅಂದ್ರೆ ನವಚೈತನ್ಯ. ಅದ್ರಲ್ಲೂ ಕಳೆದ ಮೂರು ತಿಂಗಳಿಂದ ಅಪ್ಪುನ ನೋಡಬೇಕೆಂಬ ಈಕೆಯ ಹಂಬಲ ಮತ್ತಷ್ಟು ಹೆಚ್ಚಾಗಿದ್ದು, ಹಠ ತೋರಿದ್ದಾಳೆ. ಸದ್ಯ ಈಕೆಗೆ ಅಪ್ಪು ಫೋಟೋ ಟಿವಿಯಲ್ಲಿ ಅಪ್ಪುವಿನ ಸಿನಿಮಾ ಕಾಮಿಡಿ ಸೀನ್ ಗಳು ಬಂದಾಗ ಬನ್ ಮತ್ತು ಹಾಲು ಕೊಟ್ಟು ತಂದೆ ತಾಯಿ ಪೋಷಿಸುತ್ತಿದ್ದು, ಅಪ್ಪು ಭೇಟಿಗೆ ಆಕೆಯ ಪೋಷಕರು ಮನವಿ ಮಾಡಿಕೊಂಡಿದ್ದಾರೆ.
-ಹೇಮಂತ್ ಕುಮಾರ್



What’s up, I want to subscribe for this weblog to get newest updates, therefore where can i do it please help out.
escort Brasilia