12ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನವೇ ತಂಡದ ಪ್ರಮುಖ ವೇಗಿಯನ್ನ ಕಿಂಗ್ಖಾನ್ ಒಡೆತನದ ಕೆಕೆಆರ್ ಟೀಮ್ ನಿಂದ ರಿಲೀಸ್ ಮಾಡಲಾಗಿದೆ. ಇದು ಕೆಕೆಆರ್ ಪಾಳಯಕ್ಕೆ ನಿಜಕ್ಕೂ ಆಘಾತಕಾರಿ ನ್ಯೂಸ್..!
ಕೋಲ್ಕತ್ತಾ ನೈಟ್ ರೈಡರ್ಸ್ ನ ಬೌಲಿಂಗ್ ಶಕ್ತಿಯಾಗಿದ್ದ ಫಾಸ್ಟ್ ಬೌಲರ್ ಮಿಚೆಲ್ ಸ್ಟಾರ್ಕ್ 2019ರ ಐಪಿಎಲ್ ಆಡುತ್ತಿಲ್ಲ. ಸದ್ಯದಲ್ಲೇ ಆರಂಭವಾಗಲಿರೋ ಭಾರತ ಹಾಗೂ ಸೌತ್ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಅಲಭ್ಯರಾಗಿದ್ದ ಇವರು ಈ ಬಾರಿಯ ಐಪಿಎಲ್ ಆಡ್ತಿಲ್ಲ ಅನ್ನೋ ವಿಷಯವನ್ನ ಕೋಲ್ಕತ್ತಾ ನೈಟ್ ರೈಡರ್ಸ್ ಸ್ಪಷ್ಟಪಡಿಸಿದೆ.
ಇಂಜುರಿ ಸಮಸ್ಯೆಯನ್ನ ಎದುರಿಸುತ್ತಿರೋ ಮಿಚೆಲ್ ಸ್ಟಾರ್ಕ್ರನ್ನ ಟೀಮ್ ನಿಂದ ರಿಲೀಸ್ ಮಾಡಿರೋ ಕೆಕೆಆರ್ ಟೆಕ್ಸ್ಟ್ ಮೆಸೆಜ್ ಮೂಲಕ ಸ್ಟಾರ್ಕ್ಗೂ ತಿಳಿಸಿರೋದಾಗಿ ಪ್ರಕಟಿಸಿದೆ.
ಕಳೆದ ಆವೃತ್ತಿಗೂ ಮೊದಲು ನಡೆದ ಹರಾಜಿನಲ್ಲಿ 2 ಕೋಟಿ ರೂ ಮೂಲ ಬೆಲೆಯ ಸ್ಟಾರ್ಕ್ರನ್ನ 9.4 ಕೋಟಿಗೆ ಕೆಕೆಆರ್ ಬಳಗ ಖರೀದಿಸಿತ್ತು. ಆದ್ರೆ, ಬಲಗಾಲ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಸ್ಟಾರ್ಕ್ ಟೂರ್ನಮೆಂಟ್ನಿಂದ ಹೊರಗುಳಿದಿದ್ರು. ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಹಾಗೂ 2019ರ ವಿಶ್ವಕಪ್ನ ಸಿದ್ಧತೆ ಉದ್ದೇಶದಿಂದ ಸ್ಟಾರ್ಕ್ 2019ರ ಐಪಿಎಲ್ನಲ್ಲಿ ಆಡುವುದು ಅನುಮಾನ ಎಂಬ ಸುದ್ದಿ ಮೊದಲೇ ಚಾಲ್ತಿಯಲ್ಲಿತ್ತು. ಇದೀಗ ಕೆಕೆಆರ್ ಸ್ಟಾರ್ಕ್ರನ್ನ ರಿಲೀಸ್ ಮಾಡಿ ಇದನ್ನ ಅಧಿಕೃತವಾಗಿಸಿದೆ. ಬಿಸಿಸಿಐ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಇದಕ್ಕೆ ಸಮ್ಮತಿ ನೀಡಿದ್ದು, ಸ್ಟಾರ್ಕ್ ಅವರನ್ನು ತಂಡದಿಂದ ಕೈಬಿಟ್ಟಿದ್ದಾಗಿ ಕೆಕೆಆರ್ ತಂಡ ಅಧಿಕೃತವಾಗಿ ಪ್ರಕಟಿಸಿದೆ.
ಈ ಬಾರಿ ಐಪಿಎಲ್ ಆಡಲ್ಲ ಮಿಚೆಲ್ ಸ್ಟಾರ್ಕ್..! ಕಾರಣ ಏನ್ ಗೊತ್ತಾ..?
RELATED ARTICLES
Recent Comments
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on ಅಷ್ಟಕ್ಕೂ ಕಲಂ 370, 35(ಎ)ರ ಅಡಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ಸಿಕ್ಕಿದ್ದ ವಿಶೇಷ ಸವಲತ್ತುಗಳೇನು? ಅದರ ಇತಿಹಾಸವೇನು?
on ಜೈಲಿನಲ್ಲಿ ಖೈದಿಗಳ ಎಡವಟ್ಟು : ಕೇಕ್ ತಯಾರಿಸಲು ತಂದಿದ್ದ ಎಸೆನ್ಸ್ ಕುಡಿದು ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ !
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on ಅಭಿವೃದ್ಧಿ ಮಾಡ್ತೀನಿ ಅನ್ನೋದು ಓಕೆ, ಮಗನನ್ನು ಗೆಲ್ಲಿಸಿದ್ರೆ ಅಭಿವೃದ್ಧಿ ಅನ್ನೋದೇಕೆ? : ಸಿಎಂಗೆ ಸುಮಲತಾ ಪ್ರಶ್ನೆ..!


