ಬೆಂಗಳೂರು : ನೂತನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ವಿಶ್ವಾಸಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶುಕ್ರವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಬಿಎಸ್ವೈ ಇಂದು ವಿಶ್ವಾಸ ಮತ ಸಾಬೀತು ಪಡಿಸ್ತೀನಿ ಅಂತ ಹೇಳಿದ್ದರು. ನಿರೀಕ್ಷೆಯಂತೆಯೇ ಸಿಎಂ ‘ವಿಶ್ವಾಸ’ದಲ್ಲಿ ಗೆದ್ದಿದ್ದಾರೆ. ವಿಶ್ವಾಸಮತ ಧ್ವನಿಮತದಿಂದ ಅಂಗೀಕಾರವಾಗಿದ್ದು, ಸಿಎಂ ವಿಶ್ವಾಸಮತದಲ್ಲಿ ಗೆದ್ದಿದ್ದಾರೆ ಅಂತ ಸ್ಪೀಕರ್ ರಮೇಶ್ ಕುಮಾರ್ ಘೋಷಣೆ ಮಾಡಿದರು.
ಮತಕ್ಕೆ ಹಾಕುವುದು ಅಗತ್ಯವಿಲ್ಲ ಅಂತ ಸ್ಪೀಕರ್ ಭಾವಿಸಿದರು. ವಿಶ್ವಾಸಮತದ ಬಳಿಕ ಸಿಎಂ ಹಣಕಾಸು ಬಿಲ್ ಮಂಡನೆ ಮಾಡಿದರು. ಸದನದಲ್ಲಿ ಹಣಕಾಸು ಮಸೂದೆ ಅಂಗೀಕಾರವಾಯಿತು.
ವಿಶ್ವಾಸ ಮತಕ್ಕೂ ಮುನ್ನ ಮಾತನಾಡಿದ ಅವರು, ಹೋರಾಟದಿಂದಲೇ ಬಂದವು ನಾನು. ನಿಮ್ಮೆಲ್ಲರ ವಿಶ್ವಾಸಕ್ಕೆ ಧಕ್ಕೆ ಬರದಂತೆ, ನಾಡಿನ ಜನರ ಆಶಯಕ್ಕೆ ತಕ್ಕಂತೆ ಆಡಳಿತ ನಡೆಸುವೆ. ಎಂದೂ ದ್ವೇಷದ ರಾಜಕಾರಣ ಮಾಡಲ್ಲ ಅಂತ ಹೇಳಿದ್ರು.
‘ವಿಶ್ವಾಸ’ ಗೆದ್ದ ಸಿಎಂ ಬಿಎಸ್ವೈ
RELATED ARTICLES
Recent Comments
on ಜೈಲಿನಲ್ಲಿ ಖೈದಿಗಳ ಎಡವಟ್ಟು : ಕೇಕ್ ತಯಾರಿಸಲು ತಂದಿದ್ದ ಎಸೆನ್ಸ್ ಕುಡಿದು ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ !
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on ಅಭಿವೃದ್ಧಿ ಮಾಡ್ತೀನಿ ಅನ್ನೋದು ಓಕೆ, ಮಗನನ್ನು ಗೆಲ್ಲಿಸಿದ್ರೆ ಅಭಿವೃದ್ಧಿ ಅನ್ನೋದೇಕೆ? : ಸಿಎಂಗೆ ಸುಮಲತಾ ಪ್ರಶ್ನೆ..!


