Thursday, August 21, 2025
Google search engine
HomeUncategorizedRCB ಫೈನಲ್​ ಪಂದ್ಯಕ್ಕೆ ರಜೆ ಘೋಷಿಸಲು ಸಿಎಂಗೆ ಮನವಿ; ವೈರಲ್​ ಆಯ್ತು ಪತ್ರ

RCB ಫೈನಲ್​ ಪಂದ್ಯಕ್ಕೆ ರಜೆ ಘೋಷಿಸಲು ಸಿಎಂಗೆ ಮನವಿ; ವೈರಲ್​ ಆಯ್ತು ಪತ್ರ

ಬೆಂಗಳೂರು : ಪಂಜಾಬ್​ ಕಿಂಗ್ಸ್‌ ವಿರುದ್ಧ ನಿನ್ನೆ ನಡೆದ ಕ್ವಾಲಿಫೈಯರ್​-01ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸಿದ್ದು. ನಾಲ್ಕನೇ ಭಾರಿ ಫೈನಲ್​ಗೆ ಲಗ್ಗೆಯಿಟ್ಟಿದೆ. ಇದರ ನಡುವೆ ಆರ್​ಸಿಬಿ ಫ್ಯಾನ್ಸ್​ಗಳು ಮುಖ್ಯಮಂತ್ರಿಗಳಿಗೆ ವಿಶೇಷ ಪತ್ರವೊಂದನ್ನು ಬರೆದಿದ್ದು. ಫೈನಲ್ ಪಂದ್ಯ ನಡೆಯುವ ದಿನವನ್ನು ಸಾರ್ವತ್ರಿಕ ರಜಾ ಘೋಷಿಸುವಂತೆ ಮನವಿ ಮಾಡಲಾಗಿದೆ.

ಇದನ್ನೂ ಓದಿ :‘ಹಿಂದಿ ಹೇರಿಕೆ ವಿರುದ್ದ ನಾವೆಲ್ಲ ಹೋರಾಡಬೇಕಿದೆ’; ಕಮಲ್​ ಪರ ಬ್ಯಾಟ್​ ಬೀಸಿದ ನಟಿ ರಮ್ಯ

ನಿನ್ನೆ ಪಂಜಾಬ್​ ವಿರುದ್ದ ನಡೆದ ಕ್ವಾಲಿಫೈಯರ್​ ಪಂದ್ಯದಲ್ಲಿ ಆರ್​ಸಿಬಿ ತಂಡ ಸಂಘಟಿತ ಪ್ರದರ್ಶನ ತೋರಿಸಿದ್ದು. ಇದರ ಪರಿಣಾಮವಾಗಿ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. 2009, 2011, 2016ರ ಬಳಿಕ ನಾಲ್ಕನೇ ಬಾರಿ ಐಪಿಎಲ್‌ ಫೈನಲ್‌ ತಲುಪಿದ್ದು, ಟ್ರೋಫಿ ಗೆಲ್ಲುವ ನಿರೀಕ್ಷೆ ಮೂಡಿಸಿದೆ. ಹೀಗಾಗಿ ಆರ್‌ಸಿಬಿ ಫ್ಯಾನ್ಸ್‌ ವತಿಯಿಂದ ರಾಜ್ಯದ ಮುಖ್ಯಮಂತ್ರಿಗಳಿಗೆ ವಿಶೇಷ ಪತ್ರ ಬರೆಯಲಾಗಿದೆ. ಇದನ್ನೂ ಓದಿ :‘ವಿರಾಟ್​ ಅಂಕಲ್​ ನಿವೃತ್ತಿ ಯಾಕೆ’; ಕೊಹ್ಲಿಗೆ ಪತ್ರ ಬರೆದ ಹರ್ಭಜನ್​ ಸಿಂಗ್​ ಪುತ್ರಿ

ಈ ಪತ್ರದಲ್ಲಿ ಆರ್‌ಸಿಬಿ ಕಪ್‌ ಗೆದ್ದರೆ ಆ ದಿನವನ್ನ ʻಆರ್‌ಸಿಬಿ ಫ್ಯಾನ್ಸ್‌ ಹಬ್ಬʼದ  ದಿನನ್ನಾಗಿ ಘೋಷಿಸಿ. ಜೊತೆಗೆ ಒಂದು ದಿನ ಸಾರ್ವತ್ರಿಕ ರಜೆ ಘೋಷಣೆ ಮಾಡುವಂತೆ ಸಿಎಂಗೆ ಪತ್ರದಲ್ಲಿ ಮನವಿ ಮಾಡಲಾಗಿದೆ. ಗೋಕಾಕ ಮೂಲದ ಯುವಕ ಶಿವಾನಂದ ಮಲ್ಲನ್ನವರ್ ಎಂಬ ಯುವಕ ಸಿಎಂಗೆ ಪತ್ರ ಬರೆದಿದ್ದು ರಾಜ್ಯೋತ್ಸವದ ರೀತಿಯಲ್ಲಿ ಆರ್‌ಸಿಬಿ ಫ್ಯಾನ್ಸ್ ಹಬ್ಬದ ರೀತಿಯಲ್ಲಿ ಆಚರಣೆಗೆ ಅವಕಾಶ ನೀಡಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ಈ ಪತ್ರ ಸೋಷಿಯಲ್‌ ಮೀಡಿಯಾದಲ್ಲೂ ವೈರಲ್‌ ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments