ಕಮಲ್ ಹಾಸನ್ ಅವರು ಕನ್ನಡ ಭಾಷೆಯ ಉಗಮದ ಬಗ್ಗೆ ಆಡಿರುವ ಮಾತುಗಳು ರಾಜ್ಯದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿವೆ. ಕಮಲ್ ಅವರ ಹೇಳಿಕೆಗೆ ಕರ್ನಾಟಕದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಹಲವು ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು ಹಾಗೂ ಕನ್ನಡ ಪರ ಸಂಘಟನೆಗಳು ಕಮಲ್ ಹಾಸನ್ ಅವರ ಹೇಳಿಕೆಯನ್ನು ವಿರೋಧಿಸಿವೆ. ಇದೀಗ ನಟಿ, ಮಾಜಿ ಸಂಸದೆ ರಮ್ಯಾ ಅವರು ಕಮಲ್ ಹಾಸನ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:‘ವಿರಾಟ್ ಅಂಕಲ್ ನಿವೃತ್ತಿ ಯಾಕೆ’; ಕೊಹ್ಲಿಗೆ ಪತ್ರ ಬರೆದ ಹರ್ಭಜನ್ ಸಿಂಗ್ ಪುತ್ರಿ
ಕಮಲ್ ಹಾಸನ್ ಸೃಷ್ಟಿಸಿದ ಭಾಷಾ ವಿವಾದಕ್ಕೆ ನಟಿ ರಮ್ಯಾ ಇದೀಗ ಎಂಟ್ರಿ ಕೊಟ್ಟಿದ್ದಾರೆ. ಕಮಲ್ ಪರ ಬ್ಯಾಟ್ ಬೀಸಿದ ಸ್ಯಾಂಡಲ್ವುಡ್ ಕ್ವೀನ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದನ್ನು ಹಾಕಿದ್ದಾರೆ. ಎಲ್ಲಾ ದ್ರಾವಿಡ ಭಾಷೆಗಳಿಗೆ ಒಂದೇ ಬೇರು ಅನ್ನೋದು ಅವರ ಮಾತಿನ ಅರ್ಥ. ಇದಕ್ಕಾಗಿ ಅವರ ಸಿನಿಮಾ ಥಗ್ ಲೈಫ್ ಬ್ಯಾನ್ ಮಾಡೋದು ತಪ್ಪು..’ ಎಂದಿದ್ದಾರೆ. ಆದರೆ, ರಮ್ಯಾ ಬಳಸಿದ ‘ಬಹುಶಃ’ ಪದದ ಅರ್ಥವೇನು ಎಂಬುದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣ ಇನ್ಸ್ಟಗ್ರಾಂನಲ್ಲಿ ಚಾರ್ಟ್ವೊಂದನ್ನು ಹಾಕಿರುವ ನಟಿ ರಮ್ಯ, ಅದರ ಜೊತೆಗೆ ಸಂದೇಶವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ “ದ್ರಾವಿಡ ಭಾಷೆಗಳ ಅಡಿಯಲ್ಲಿಯೇ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳು ಬರುತ್ತವೆ. ನಮ್ಮ ಭಾಷೆಗಳು ಪರಸ್ಪರ ಸಾಮ್ಯತೆಗಳನ್ನು ಹೊಂದಿವೆ ಆದರೆ ಯಾವ ಭಾಷೆಯೂ ಇನ್ನೊಂದು ಭಾಷೆಗಿಂತಲೂ ಶ್ರೇಷ್ಠ ಎಂದಿಲ್ಲ. ಇನ್ನು ಕೆಲವರು ಸಂಸ್ಕೃತ ಎಲ್ಲ ಭಾಷೆಗಳ ತಾಯಿ ಎಂದುಕೊಂಡಿರುವವರು ಇದ್ದಾರೆ. ಇದನ್ನೂ ಓದಿ :ರಾಜಣ್ಣ ಹನಿಟ್ರ್ಯಾಪ್ ಪ್ರಕರಣ; ಸಾಕ್ಷಿ ಸಿಗಲಿಲ್ಲ ಎಂದು ಕೇಸ್ ಕ್ಲೋಸ್ ಮಾಡಿದ SIT
ಆದರೆ ಅದೂ ಸಹ ನಿಜವಲ್ಲ. ಏಕೆಂದರೆ ಸಂಸ್ಕೃತ ಇಂಡೋ-ಆರ್ಯನ್ ಭಾಷೆ. ಆದರೆ ನಾವು ದ್ರಾವಿಡರು. ಇಂಡೋ ಆರ್ಯನ್ನರು ಇಲ್ಲಿಗೆ ವಲಸೆ ಬರುವುದಕ್ಕೆ ಬಹಳ ವರ್ಷಗಳ ಮುಂಚೆಯೇ ನಾವು ಇಲ್ಲಿದ್ದೀವಿ’ ಎಂದಿದ್ದಾರೆ. ಇದನ್ನೂ ಓದಿ :POK ಜನರು ಸ್ವಯಂ ಪ್ರೇರಿತರಾಗಿ ಭಾರತಕ್ಕೆ ಸೇರುವ ದಿನ ದೂರವಿಲ್ಲ; ರಾಜನಾಥ್ ಸಿಂಗ್
‘ಕಮಲ್ ಹಾಸನ್ ಅವರು ಒಂದು ಬಿಡು ಬೀಸು ಹೇಳಿಕೆಯನ್ನು ನೀಡಿದ್ದಾರೆ. ಆದರೆ ಆ ಮಾತ್ರಕ್ಕೆ ಅವರ ಸಿನಿಮಾ ಅನ್ನು ನಿಷೇಧ ಮಾಡಲು ಮುಂದಾಗಿರುವುದು ತುಸು ಅತಿರೇಕ ಅನಿಸುವುದಿಲ್ಲವೆ? ನಾವುಗಳು ಒಟ್ಟಾಗಿ ಹಿಂದಿ ಹೇರಿಕೆ ವಿರುದ್ಧ ಹೋರಾಡಬೇಕು ಆದರೆ ಅದಕ್ಕೂ ಮುನ್ನ ನಾವು ಪರಸ್ಪರರಿಗೆ ಗೌರವ ಕೊಡುವುದನ್ನು ಕಲಿಯಬೇಕಿದೆ’ ಎಂದಿದ್ದಾರೆ ರಮ್ಯಾ.