ಬೆಂಗಳೂರು: ಸಚಿವ ರಾಜಣ್ಣ ಹನಿಟ್ರ್ಯಾಪ್ ಪ್ರಕರಣದಲ್ಲಿ ಎಸ್ಐಟಿ ಚಾರ್ಜಶೀಟ್ ಸಲ್ಲಿಕೆ ಮಾಡಿದ್ದು. ಹನಿಟ್ರ್ಯಾಪ್ ನಡೆಸಿರುವುದಕ್ಕೆ ಯಾವುದೇ ಸಾಕ್ಷಿ ದೊರಕದ ಹಿನ್ನಲೆ ಪ್ರಕರಣವನ್ನು ರದ್ದುಗೊಳಿಸಲಾಗಿದೆ.
ವಿಧಾನಸಭೆಯಲ್ಲಿ ಸಚಿವ ರಾಜಣ್ಣ ಹೇಳಿದ್ದ ಹನಿಟ್ರಾಪ್ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿತ್ತು. ಇದನ್ನ ಗಂಭೀರವಾಗಿ ಪರಗಣಿಸಿದ ಸರ್ಕಾರ ಎಸ್ಐಟಿ ರಚನೆ ಮಾಡಿ ತನಿಖೆ ನಡೆಸುವಂತೆ ಸೂಚಿಸಿತ್ತು. ಇದೀಗ ತನಿಖೆ ಪೂರ್ಣಗೊಳಿಸಿರುವ ಎಸ್ಐಟಿ ಚಾರ್ಜಶೀಟ್ ಸಲ್ಲಿಕೆ ಮಾಡಿದ್ದಾರೆ. ಇದನ್ನೂ ಓದಿ:POK ಜನರು ಸ್ವಯಂ ಪ್ರೇರಿತರಾಗಿ ಭಾರತಕ್ಕೆ ಸೇರುವ ದಿನ ದೂರವಿಲ್ಲ; ರಾಜನಾಥ್ ಸಿಂಗ್
ಸಚಿವ ರಾಜಣ್ಣ ಕಳೆದ ವಿಧಾನಸಭೆ ಅಧಿವೇಶನದಲ್ಲಿ ರಾಜಕಾರಣಿಗಳ ವಿರುದ್ಧ ಹನಿಟ್ರಾಪ್ ಅಸ್ತ್ರವನ್ನು ಬಳಸಲಾಗುತ್ತಿದೆ. ನನ್ನ ಮೇಲೆ ಕೂಡ ಪ್ರಯೋಗ ಮಾಡಿದ್ದಾರೆ ಎಂದು ಸೌಂಡ್ ಮಾಡಿದ್ದರು ಇದಕ್ಕೆ ಪಕ್ಷ ಬೇದ ಮರೆತು ಜನ ಪ್ರತಿನಿಧಿಗಳು ಧ್ವನಿ ಗೂಡಿಸಿದ್ದರು.ಇಂತಹ ಗಂಭೀರ ಆರೋಪವನ್ನು ಸರ್ಕಾರ ಸೀರಿಯಸ್ಸಾಗೆ ತೆಗೆದುಕೊಂಡು ಸಿಐಡಿ ಅಧಿಕಾರಿಗಳು ತನಿಖೆ ನಡೆಸುವಂತೆ ಆದೇಶಿಸಲಾಗಿತ್ತು. ಇದನ್ನೂ ಓದಿ :ದಕ್ಷಿಣೆ ರೂಪದಲ್ಲಿ ಪಿಒಕೆ ಕೇಳಿದ್ದೇನೆ; ಸೇನಾ ಮುಖ್ಯಸ್ಥರಿಗೆ ಜಗದ್ಗುರು ರಾಮಭದ್ರಾಚಾರ್ಯರ ಮನವಿ
ತನಿಖೆ ಶುರು ಮಾಡಿದ ಅಧಿಕಾರಿಗಳಿಗೆ ಯಾವುದೇ ಸಾಕ್ಷಿಗಳು ಲಭ್ಯವಾಗಲಿಲ್ಲ. ದೂರು ನೀಡಿದ ಸಚಿವರು ಒಂದೆರಡು ಬಾರಿ ನನ್ನ ಕಚೇರಿಗೆ ಯುವತಿಯೋರ್ವಳು ಬಂದಿದ್ದಳು. ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಳು ಇದರಿಂದ ನಾನು ಆಕೆಯ ಕೆನ್ನೆಗೆ ಹೊಡೆದು ಕಳಿಸಿದ್ದೆ. ಅವಳ ಜೊತೆಯಲ್ಲಿ ಗಡ್ಡಧಾರಿ ಯುವಕ ಕೂಡ ಬಂದಿದ್ದ ಎಂದು ಹೇಳಿದ್ರು. ಇದರ ಆಧಾರದ ಮೇಲೆ ತನಿಖೆಗೆ ಮುಂದಾದ ಅಧಿಕಾರಿಗಳಿಗೆ ಯಾವುದೇ ಸಾಕ್ಷಿಗಳು ಸಿಗಲಿಲ್ಲ.
ಜೊತೆಗೆ ಸಚಿವ ರಾಜಣ್ಣ ಕೂಡ ಯಾವುದೇ ಮಾಹಿತಿಯನ್ನು ನೀಡಿದೆ, ಕೇವಲ ಹೇಳಿಕೆ ನೀಡಿದ್ದಾರೆ. ಇನ್ನು ಸಚಿವರ ಆಪ್ತರು, ಗನ್ಮ್ಯಾನ್ಗಳು, ಸೆಕ್ಯುರಿಟಿಗಳು, ಅವರ ಪಿಎಗಳನ್ನ ವಿಚಾರಣೆ ನಡೆಸಿದ್ದರು ಯಾವುದೇ ಸಾಕ್ಷಿ ದೊರಕದ ಹಿನ್ನಲೆ. ಅಧಿಕಾರಿಗಳು ತನಿಖೆ ಪೂರ್ಣಗೊಳಿಸಿ ಅಂತಿಮ ವರದಿಯನ್ನು ಡಿಜಿ ಐಜಿಪಿಗೆ ಸಲ್ಲಿಸಿದ್ದು ಪರಿಶೀಲನೆ ನಂತರ ಗೃಹ ಮಂತ್ರಿ,ಹಾಗೂ ಗೃಹಿಲಾಖೆಯ ಕಾರ್ಯದರ್ಶಿಗೆ ಸಲ್ಲಿಕೆಯಾಗಲಿದೆ.
ಇದನ್ನೂ ಓದಿ :ರಾಜ್ಯ ಸರ್ಕಾರಕ್ಕೆ ಮುಖಭಂಗ: ಹುಬ್ಬಳ್ಳಿ ಗಲಭೆ ಸೇರಿ 43 ಕೇಸ್ ವಾಪಸ್ ಆದೇಶ ರದ್ದುಗೊಳಿಸಿದ ಹೈಕೋರ್ಟ್
ಒಟ್ಟಾರೆ ದೂರುಕೊಟ್ಟ ಸಚಿವರು ತನಿಖೆಯ ಬಗ್ಗೆ ಯಾವುದೇ ಆಸಕ್ತಿ ತೋರದ ಹಿನ್ನೆಲೆ ಅಧಿಕಾರಿಗಳು ಅಂತಿಮ ವರದಿಯನ್ನು ಸಲ್ಲಿಸಿ ಕೈ ತೊಳೆದುಕೊಂಡಿದ್ದಾರೆ.ಇದರಿಂದ ನಿಜವಾಗಿಯೂ ಸಚಿವರ ವಿರುದ್ಧ ಹನಿಟ್ರಾಪ್ ಪ್ರಕರಣ ನಡೆಸಲು ಯತ್ನಿಸಿದ್ರಾ ? ಅಥವಾ ಬೇರೆ ಯಾರನ್ನಾದರೂ ಉಳಿಸಲು ಈ ದಾಳ ಉರುಳಿಸಿದ್ದರು ಅನ್ನೋದಕ್ಕೆ ಸಚಿವರೇ ಉತ್ತರ ನೀಡಬೇಕು.