Thursday, August 21, 2025
Google search engine
HomeUncategorizedಪೋರ್ಸ್​ ಮಾಡಿ ಫೈನ್​ ಹಾಕ್ಬೇಡಿ; ಮಂಡ್ಯ ಪೊಲೀಸರಿಗೆ ಉಪಲೋಕಾಯುಕ್ತ ಬಿ. ವೀರಪ್ಪರಿಂದ ಎಚ್ಚರಿಕೆ

ಪೋರ್ಸ್​ ಮಾಡಿ ಫೈನ್​ ಹಾಕ್ಬೇಡಿ; ಮಂಡ್ಯ ಪೊಲೀಸರಿಗೆ ಉಪಲೋಕಾಯುಕ್ತ ಬಿ. ವೀರಪ್ಪರಿಂದ ಎಚ್ಚರಿಕೆ

ಮಂಡ್ಯ : ಟ್ರಾಫಿಕ್​ ಪೊಲೀಸರ ಯಡವಟ್ಟಿಗೆ 3 ವರ್ಷದ ಮಗು ಸಾವನ್ನಪ್ಪಿದ ಬೆನ್ನಲ್ಲೇ ಉಪ ಲೋಕಾಯುಕ್ತ ಬಿ. ವೀರಪ್ಪ ಮಂಡ್ಯ ಟ್ರಾಫಿಕ್​ ಪೊಲೀಸ್ ಠಾಣೆಗೆ ಭೇಟಿ ನೀಡಿ, ಪೊಲೀಸರಿಗೆ ರಸ್ತೆ ಸುರಕ್ಷತೆ ಮತ್ತು ವಾಹನ ತಪಾಸಣೆ ಕುರಿತು ಪಾಠ ಮಾಡಿದ್ದು. ಏಕಾಏಕಿ ಜನರನ್ನು ತಡೆದು ದಂಡ ಹಾಕದಂತೆ ಎಚ್ಚರಿಕೆ ನೀಡಿದ್ದಾರೆ.

ಟ್ರಾಫಿಕ್​ ಪೊಲೀಸರ ಯಡವಟ್ಟಿಗೆ 3 ವರ್ಷದ ಮಗುವೊಂದು ಸಾವನ್ನಪ್ಪಿದ ಪ್ರಕರಣ ರಾಜ್ಯಾಧ್ಯಂತ ಸಂಚಲನ ಸೃಷ್ಟಿಸಿತ್ತು. ಈ ಘಟನೆ ಪೊಲೀಸರ ವಿರುದ್ದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಉಪ ಲೋಕಾಯುಕ್ತ ಬಿ. ವೀರಪ್ಪ ಮಂಡ್ಯ ಟ್ರಾಫಿಕ್ ಪೊಲೀಸ್​ ಠಾಣೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಪೊಲೀಸರಿಗೆ ಕಾನೂನು ಸುವ್ಯವಸ್ಥೆಯನ್ನು ಸರಿಯಾಗಿ ಪಾಲನೆ ಮಾಡಿ ಎಂದು ಹೇಳಿದ್ದು. ಸುಖಾ ಸುಮ್ಮನೆ ಸಾರ್ವಜನಿಕರನ್ನು ತಡೆದು ಫೈನ್ ಹಾಕಬೇಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ :‘ಯಾರ್​ ಮನೆ ಹಾಳು ಮಾಡಲು ಈ ರೀತಿ ತೆರಿಗೆ ಹಾಕ್ತಿದ್ದೀರಾ’; ಸರ್ಕಾರದ ವಿರುದ್ದ ಆರ್​.ಅಶೋಕ್​ ಆಕ್ರೋಶ

ಈ ವೇಳೆ ಟ್ರಾಫಿಕ್​ ಇನ್ಸ್​ಪೆಕ್ಟರ್​ ಸಂತೋಶ್​ ಅವರು ಸಸ್ಪೆಂಡ್​ ಆಗಿರುವ 3 ಪೊಲೀಸರು ವಾಹನ ತಡೆಯುವ ವೇಳೆ ಬಾಡಿ ಕ್ಯಾಮರ ಧರಿಸಿರಲಿಲ್ಲ ಎಂದು ಉಪ ಲೋಕಾಯುಕ್ತರಿಗೆ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಉಪಲೋಕಾಯುಕ್ತರು ‘ಕ್ಯಾಮರಾ ಇದ್ದರೆ ಎಲ್ಲವೂ ತಿಳಿಯುತ್ತದೆ. ಫೋರ್ಸ್ ಮಾಡಿ ಯಾಕೆ ಫೈನ್ ಹಾಕ್ತಿರಾ? ಕೆಲವರು ಗಾಬರಿಯಾಗಿ ಸುಮ್ಮನೆ ಅತಾಚುರ್ಯಗಳು ನಡೆಯುತ್ತವೆ. ಇದನ್ನೂ ಓದಿ :ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಕಮಲ್​ ಹಾಸನ್​ ವಿವಾದ; ಕ್ಷಮೆ ಕೇಳಲು ಕನ್ನಡಿಗರಿಂದ ಒತ್ತಾಯ

ನಮ್ಮಿಂದ ಜನರು ಸಾಯಬಾರದು, ಗಡಿಯಲ್ಲಿ ಸೈನಿಕರು ದೇಶವನ್ನು ಕಾಪಾಡುತ್ತಾರೆ. ನಾವು ಪೊಲೀಸರು ಜನರನ್ನು ಕಾಯಬೇಕು. ಕಳ್ಳರನ್ನ ಬೇಕಾದರೆ ಸದೆಬಡೆಯಿರಿ. ಮಗು ಏನು ಮಾಡಿತ್ತು? ನಾಯಿ ಕಚ್ಚಿತ್ಥು ಬರ್ತಿದ್ರು. ಸುಮ್ಮನೆ ಬಿಟ್ಟು ಕಳಿಸಿದ್ರೆ ಏನು ಆಗ್ತಿರಲಿಲ್ಲ ಪಾಪಾ. ಗಾಬರಿಯಿಂದ ಬಂದಿದ್ದಾರೆ ಅನ್ಸುತ್ತೆ.
ಸಿಸಿಟಿವಿ ಇರುವ ಕಡೆ ಪರಿಶೀಲನೆ ಮಾಡಿ. ಕ್ರಾಸ್​ಗಳಲ್ಲಿ ನೀವು ನಿಲ್ಲಬೇಡಿ. ಕದ್ದು ಮುಚ್ಚಿ ಜನರಿಗೆ ಫೈನ್ ಹಾಕುವ ಕೆಲಸ ಮಾಡಬೇಡಿ ಎಂದು ಉಪಲೋಕಾಯುಕ್ತ ಬಿ. ವೀರಪ್ಪ ಪೊಲೀಸರಿಗೆ ಎಚ್ಚರಿಕೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments