Saturday, August 23, 2025
Google search engine
HomeUncategorizedಮಳೆ ಅವಾಂತರ: ಇಂದು ಸಂಜೆ ಸಿಎಂ, ಡಿಸಿಎಂ ಸಿಟಿ ರೌಂಡ್ಸ್​

ಮಳೆ ಅವಾಂತರ: ಇಂದು ಸಂಜೆ ಸಿಎಂ, ಡಿಸಿಎಂ ಸಿಟಿ ರೌಂಡ್ಸ್​

ಬೆಂಗಳೂರು : ನಿನ್ನೆ(ಮೇ.18) ರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರು ಅಕ್ಷರಶಃ ತತ್ತರಿಸಿದ್ದು. ಮಳೆಯಿಂದ ಹಾನಿಗೊಳಗಾದ ಸ್ಥಳಗಳಿಗೆ ಇಂದು ಸಂಜೆ ಸಿಎಂ, ಡಿಸಿಎಂ ಸಿಟಿ ರೌಂಡ್ಸ್​ ಕೈಗೊಂಡಿದ್ದಾರೆ. ವಿಪಕ್ಷಗಳ ಟೀಕೆಯ ಮಧ್ಯ ಈ ನಿರ್ಧಾರ ಮಾಡಿದ್ದಾರೆ.

ಭಾರೀ ಮಳೆಗೆ ಬೆಂಗಳೂರಿನ ಅನೇಕ ಪ್ರದೇಶಗಳು ನೀರಿನಿಂದ ಆವೃತ್ತವಾಗಿದ್ದು. ಸಾಯಿ ಲೇಔಟ್​, ಸಿಲ್ಕ್​ಬೋರ್ಡ್​, ಈಜೀಪುರ, ಶಾಂತಿನಗರ, ಬೊಮ್ಮನಹಳ್ಳಿ, ನಂದಗೋಕುಲ ಸೇರಿಂದತೆ ಅನೇಕ ಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗಿವೆ. ಇದರ ನಡುವೆ ವಿಪಕ್ಷಗಳು ಸರ್ಕಾರದ ಮೇಲೆ ಮುಗಿಬಿದ್ದಿದ್ದು. ಸಿಎಂ, ಡಿಸಿಎಂ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ:ಪ್ರಾಧ್ಯಪಕನೊಂದಿಗೆ ಪ್ರೇಮ ವೈಪಲ್ಯ: ಕಾಲೇಜು ಕಟ್ಟಡದಿಂದ ಜಿಗಿದು ಯುವತಿ ಸಾ*ವು..!

ಇದರ ಮಧ್ಯ ಇಂದು ಸಂಜೆ ಸಿಎಂ ಸಿದ್ದರಾಮಯ್ಯ ಸಿಟಿ ರೌಂಡ್ಸ್​ ಕೈಗೊಂಡಿದ್ದು. ಇವರಿಗೆ ಡಿಸಿಎಂ ಡಿಕೆ. ಶಿವಕುಮಾರ್​ ಸಾಥ್​ ನೀಡಲಿದ್ದಾರೆ. ಮಳೆಯಿಂದ ಹಾನಿಯಾಗಿರುವ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ನಾನು ಕೂಡ ನಿಮ್ಮಲ್ಲಿ ಒಬ್ಬ: ಡಿಕೆಶಿ ಟ್ವಿಟ್​..!

ರಾಜಧಾನಿಯಲ್ಲಿ ಮಳೆಯಿಂದ ಉಂಟಾಗಿರುವ ಹಾನಿಯ ಬಗ್ಗೆ ಡಿಸಿಎಂ ಡಿಕೆಶಿ ತೀವ್ರ ಕಳವಳ ವ್ಯಕ್ತಪಡಿಸಿ ಟ್ವಿಟ್​ ಮಾಡಿದ್ದು. “ಮಳೆಯಿಂದ ಹಾನಿಯಾಗಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ ಮತ್ತು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಬೆಂಗಳೂರಿನ ಸಮಸ್ಯೆ ನಿವಾರಿಸಲು ಮತ್ತು ಇದಕ್ಕೆ ಪರಿಹಾರ ಹುಡಕಲು ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದೇನೆ. ನಾನು ಬಿಬಿಎಂಪಿ ವಾರ್ ರೂಮ್ ಮತ್ತು ಪ್ರವಾಹ ಪೀಡಿತ ಪ್ರದೇಶಗಳಿಗೆ ವೈಯಕ್ತಿಕವಾಗಿ ಭೇಟಿ ನೀಡಿ ವಾಸ್ತವಿಕವಾಗಿ ಮಾಹಿತಿ ಪಡೆಯುತ್ತೇನೆ ಎಂದು ಬರೆದಿದ್ದಾರೆ. ಇದನ್ನೂ ಓದಿ :ಭೀಕರ ಅಪಘಾತ: KSRTC ಬಸ್ ಉರುಳಿ ಬಿದ್ದು ಸಬ್​ ಇನ್ಸ್​ಪೆಕ್ಟರ್​ ಸಾ*ವು, ಹಲವರಿಗೆ ಗಾಯ

ಮುಂದುವರಿದು ಬರೆದಿರುವ ಡಿಕೆಶಿ “ಇಂದು ನಾವು ಎದುರಿಸುತ್ತಿರುವ ಸಮಸ್ಯೆಗಳು ಹೊಸದಲ್ಲ. ಸರ್ಕಾರಗಳು ಮತ್ತು ಆಡಳಿತಗಳಲ್ಲಿ ಅವುಗಳನ್ನು ವರ್ಷಗಳಿಂದ ನಿರ್ಲಕ್ಷಿಸಲಾಗಿದೆ. ಈಗ ಒಂದೇ ವ್ಯತ್ಯಾಸವೆಂದರೆ – ನಾವು ಅವುಗಳನ್ನು ಪರಿಹರಿಸಲು ಕೆಲಸ ಮಾಡುತ್ತಿದ್ದೇವೆ. ತಾತ್ಕಾಲಿಕ ಪರಿಹಾರಗಳೊಂದಿಗೆ ಅಲ್ಲ, ಆದರೆ ದೀರ್ಘಕಾಲೀನ, ಸುಸ್ಥಿರ ಪರಿಹಾರಗಳೊಂದಿಗೆ.

ನನ್ನ ಸಹ ಬೆಂಗಳೂರಿಗರಿಗೆ – ನಾನು ನಿಮ್ಮಲ್ಲಿ ಒಬ್ಬ. ನಿಮ್ಮ ಕಾಳಜಿಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ, ನಿಮ್ಮ ಹತಾಶೆಯನ್ನು ನಾನು ಹಂಚಿಕೊಳ್ಳುತ್ತೇನೆ ಮತ್ತು ಅವುಗಳನ್ನು ಪರಿಹರಿಸಲು ನನ್ನ ಬದ್ಧತೆಯ ಬಗ್ಗೆ ನಾನು ನಿಮಗೆ ಭರವಸೆ ನೀಡುತ್ತೇನೆ.

ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ ಎಂದು ಡಿಸಿಎಂ ಡಿಕೆಶಿ ಟ್ವಿಟ್​ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments