Saturday, August 23, 2025
Google search engine
HomeUncategorizedಆಪರೇಷನ್​ ಸಿಂಧೂರ್ ಕಾರ್ಯಚರಣೆ: 17 ನವಜಾತ ಶಿಶುಗಳಿಗೆ 'ಸಿಂಧೂರ' ಎಂದು ನಾಮಕರಣ

ಆಪರೇಷನ್​ ಸಿಂಧೂರ್ ಕಾರ್ಯಚರಣೆ: 17 ನವಜಾತ ಶಿಶುಗಳಿಗೆ ‘ಸಿಂಧೂರ’ ಎಂದು ನಾಮಕರಣ

ಕುಶಿನಗರ: ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನದ ಉಗ್ರರ ವಿರುದ್ಧ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ಮೂಲಕ ತಿರುಗೇಟು ನೀಡಿದೆ. ಆಪರೇಷನ್​ ಸಿಂಧೂರದಿಂದ ಪ್ರೇರಿತರಾಗಿರುವ ಪೋಷಕರು ತಮ್ಮ ಮಕ್ಕಳಿಗೆ ಸಿಂಧೂರ್​ ಎಂದು ನಾಮಕಾರಣ ಮಾಡುತ್ತಿದ್ದು. ಉತ್ತರಪ್ರದೇಶದ ಖುಷಿನಗರದ ವೈದ್ಯಕೀಯ ಆಸ್ಪತ್ರೆಯಲ್ಲಿ 48 ಗಂಟೆಯಲ್ಲಿ ಜನಿಸಿದ 17 ಮಕ್ಕಳಿಗೆ ಸಿಂಧೂರ ಎಂದು ನಾಮಕಾರಣ ಮಾಡಲಾಗಿದೆ.

ಇದನ್ನೂ ಓದಿ:ರಾಕೇಶ್​ನ ಅಗಲಿಕೆ ದೇವರ ಮೇಲಿದ್ದ ಸ್ವಲ್ಪ ನಂಬಿಕೆಯನ್ನು ಸಾಯುವಂತೆ ಮಾಡಿದೆ: ನಯನಾ

ಉತ್ತರ ಪ್ರದೇಶದ ಕುಶಿನಗರದಲ್ಲಿ ಹಲವು ಕುಟುಂಬಗಳು ತಮ್ಮ ಮಕ್ಕಳಿಗೆ ‘ಸಿಂಧೂರ್’ ಎಂದು ನಾಮಕರಣ ಮಾಡಿವೆ. ಮೇ 10 ಮತ್ತು 11ರಂದು ಕುಶಿನಗರದ ವೈದ್ಯಕೀಯ ಕಾಲೇಜಿನಲ್ಲಿ ಜನಿಸಿದ 17 ಹೆಣ್ಣುಮಕ್ಕಳಿಗೆ ಪೋಷಕರು ‘ಸಿಂಧೂರ್’ ಎಂದು ಹೆಸರಿಟ್ಟಿದ್ದಾರೆ. ಈ ಬಗ್ಗೆ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಆರ್.ಕೆ.ಶಾಹಿ ತಿಳಿಸಿದ್ದಾರೆ.

ಸಿಂಧೂರ ಕೇವಲ ಹೆಸರಲ್ಲ, ಅದೊಂದು ಭಾವನೆ..!

ಮಕ್ಕಳಿಗೆ ಸಿಂಧೂರ ಎಂದು ಹೆಸರಿಟ್ಟಿರುವ ಪೋಷಕರು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದು . ಖುಷಿನಗರದ ಭೇಡಿಹರಿ ಗ್ರಾಮದ ನಿವಾಸಿ ಅರ್ಚನಾ ಶಾಹಿ ಮತ್ತು ಅಜಿತ್​ ಶಾಹಿ ಈ ಕುರಿತು ಮಾತನಾಡಿದ್ದಾರೆ. ಮಗಳ ಬಗ್ಗೆ ಮಾತನಾಡಿದ ಅಜಿತ್ ಶಾಹಿ “ಸಿಂಧೂರ್​ ನಮಗೆ ಸ್ಪೋರ್ತಿಯಾಗಿದೆ. ಈ ಕಾರ್ಯಚರಣೆಯಲ್ಲಿ ಹಲವು ಮಹಿಳೆಯರು ತಮ್ಮ ಗಂಡಂದಿರನ್ನು ಕಳೆದುಕೊಂಡರು. ಆಪರೇಷನ್ ಸಿಂದೂರ್ ಅನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದ್ದು ನಮ್ಮೆಲ್ಲರಿಗೂ ಹೆಮ್ಮೆ ತಂದಿತು. ಅದಕ್ಕಾಗಿಯೇ ನಾವು ನಮ್ಮ ಮಗಳಿಗೆ ‘ಸಿಂದೂರ್’ ಎಂದು ಹೆಸರಿಸಿದ್ದೇವೆ. ಅದು ಈಗ ಕೇವಲ ಹೆಸರಲ್ಲ, ಭಾವನೆಯಾಗಿದೆ” ಎಂದು ಅವರು ಹೇಳಿದರು.

ಇದನ್ನೂ ಓದಿ :International Taekwon Competition : ಎರಡು ಚಿನ್ನ ಗೆದ್ದ ಕನ್ನಡಿಗ ‘ದಕ್ಷಿಣ್ ಸೂರ್ಯ’

ಏಪ್ರಿಲ್ 22ರಂದು ಜಮ್ಮು-ಕಾಶ್ಮೀರದ ಪಹಲ್ಯಾಮ್ ನಲ್ಲಿ ಉಗ್ರರು ಪ್ರವಾಸಿಗರನ್ನು ಗುರಿಯಾಗಿಸಿ ನಡೆಸಿದ್ದ ಗುಂಡಿನ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಪಹಲ್ಯಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಮೇ 7ರಂದು ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಉಗ್ರರ 9 ನೆಲೆಗಳನ್ನು ಧ್ವಂಸಗೊಳಿಸಿತ್ತು. ನೂರಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments