Saturday, August 23, 2025
Google search engine
HomeUncategorizedಊಟಕ್ಕೆ ಕರೆದ್ರೆ ಹೋಗೋದ್ರಲ್ಲಿ ತಪ್ಪೇನಿದೆ? ನಾನೇನು ಮನುಷ್ಯನಲ್ವಾ? : ಯು.ಟಿ ಖಾದರ್

ಊಟಕ್ಕೆ ಕರೆದ್ರೆ ಹೋಗೋದ್ರಲ್ಲಿ ತಪ್ಪೇನಿದೆ? ನಾನೇನು ಮನುಷ್ಯನಲ್ವಾ? : ಯು.ಟಿ ಖಾದರ್

ಬೆಂಗಳೂರು : ಔತಣ ಕೂಟಕ್ಕೆ ಹೋಗೋಕೆ ನಾನು ಏನು ಮನುಷ್ಯನಲ್ವಾ? ಎಂದು ಸ್ಪೀಕರ್ ಯು.ಟಿ ಖಾದರ್ ತಮ್ಮ ನಡೆಯನ್ನು ಸಮರ್ಥನೆ ಮಾಡಿಕೊಂಡರು.

ವಿಧಾನಸಭೆಯಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ನೀವು ಸೋನಿಯಾ ಗಾಂಧಿಯನ್ನು ಭೇಟಿ ಮಾಡಿದ್ದು ಹೌದೆ? ಎಂದು ಯು.ಟಿ ಖಾದರ್ ಅವರಿಗೆ ಪ್ರಶ್ನೆ ಮಾಡಿದರು.

ಮಾಧ್ಯಮಗಳಲ್ಲಿ ಬಂದಿದೆ ಅದು ನಿಜವೇ? ನೀವು ಎಲ್ಲವನ್ನೂ ಕಡಿದುಕೊಂಡು ಆ ಪೀಠದಲ್ಲಿ ಕುಳಿತವರು. ನೀವು ಒಬ್ಬರು ಸ್ಪೀಕರ್ ಆಗಿರುವಂತವರು, ನೀವು ಸೋನಿಯಾ, ರಾಹುಲ್ ಭೇಟಿಗೆ ಹೋಗಿರೋದು ಸರೀನಾ?ಎಂದು ಸೋನಿಯಾ, ರಾಹುಲ್ ಭೇಟಿ ಮಾಡಿದ್ದಕ್ಕೆ ಸದನದಲ್ಲಿ ಆರಗ ಜ್ಞಾನೇಂದ್ರ ಪ್ರಶ್ನಿಸಿದರು.

ಇದನ್ನೂ ಓದಿ : ಐಎಎಸ್ ಅಧಿಕಾರಿಗಳ ಬಳಕೆ ಬೇಕಿರಲಿಲ್ಲ : ಟಿ.ಬಿ ಜಯಚಂದ್ರ

ನೀವು ಕರೆದ್ರೂ ಬರುತ್ತೇನೆ

ಇದಕ್ಕೆ ಉತ್ತರಿಸಿದ ಯು.ಟಿ ಖಾದರ್ ಅವರು, ಮುಖ್ಯಮಂತ್ರಿಗಳು ಊಟಕ್ಕೆ ಕರೆದಿದ್ರು. ನಾನು ಊಟಕ್ಕೆ ಹೋಗಬಾರದಾ? ನಾನು ಮನುಷ್ಯ ಅಲ್ಲವೇ? ನಮ್ಮನ್ನು ಸಿಎಂ ಔತಣಕೂಟಕ್ಕೆ ಕರೆದಾಗ ಹೋಗಬೇಕು. ಔತಣ ಕೂಟಕ್ಕೆ ಹೋಗೋಕೆ ನಾನು ಏನು ಮನುಷ್ಯನಲ್ವಾ? ನಾಳೆ‌ ನೀವು ಆಹ್ವಾನ ಮಾಡಿದ್ರು ನಿಮ್ಮ ಊಟಕ್ಕೆ ಬರುತ್ತೇನೆ. ಊಟಕ್ಕೆ ಕರೆದ್ರೆ ಹೋಗೋದ್ರಲ್ಲಿ ತಪ್ಪೇನಿದೆ?ಎಂದು ಸಮರ್ಥಿಸಿಕೊಂಡರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments