ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಸಾಕಷ್ಟು ಅನಾಹುತಗಳು ಸಂಭವಿಸುತ್ತಿದ್ದು. ಇದರ ನಡುವೆ ಉಳ್ಳಾಲದ, ದೇರಳಕಟ್ಟೆಯ ಮೊಂಟೆದ ಪಂಬದ ಹಿತ್ಲುವಿನಲ್ಲಿ ಮನೆ ಮೇಲೆ ಗುಡ್ಡ ಕುಸಿದ ಪರಿಣಾಮ ಘೋರ ದುರಂತ ಸಂಭವಿಸಿದೆ. ಗುಡ್ಡ ಕುಸಿದು ಮನೆ ಉರುಳಿ ಬಿದ್ದ ಪರಿಣಾಮ ತಾಯಿ-ಇಬ್ಬರು ಮಕ್ಕಳು ಅವಶೇಷಗಳ ಅಡಿ ಸಿಲುಕಿಕೊಂಡಿದ್ದು. ರಕ್ಷಣಾಕಾರ್ಯ ಆರಂಭಿಸಲಾಗಿದೆ.
ಇದನ್ನೂ ಓದಿ :RCB ಫೈನಲ್ ಪಂದ್ಯಕ್ಕೆ ರಜೆ ಘೋಷಿಸಲು ಸಿಎಂಗೆ ಮನವಿ; ವೈರಲ್ ಆಯ್ತು ಪತ್ರ
ಕಾಂತಪ್ಪ ಪೂಜಾರಿ ಎಂಬವರ ಮನೆ ಮೇಲೆ ಗುಡ್ಡ ಬಿದ್ದಿದೆ. ದುರ್ಘಟನೆಯಲ್ಲಿ ಕಾಂತಪ್ಪ ಪೂಜಾರಿ ಪತ್ನಿ ಪ್ರೇಮಾ ಪೂಜಾರಿ ಜೀವ ಕಳೆದುಕೊಂಡಿದ್ದಾರೆ. ಮನೆಯಡಿ ಸಿಲುಕಿರುವ ಮಹಿಳೆ ಮತ್ತು ಇಬ್ಬರು ಮಕ್ಕಳ ರಕ್ಷಣಾಕಾರ್ಯ ನಡೆಯುತ್ತಿದೆ. ಸ್ಥಳದಲ್ಲಿ NDRF, SDRF ನಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅವಶೇಷಗಳ ಅಡಿಯಲ್ಲಿ ತಾಯಿ ಮಗುವನ್ನು ತಬ್ಬಿಕೊಂಡಿದ್ದು, ಮಗು ತನ್ನ ಕೈಯನ್ನು ಅಲ್ಲಾಡಿಸುತ್ತಿದೆ. ಈ ವಿಡಿಯೋ ಹೃದಯ ವಿದ್ರಾವಕವಾಗಿದ್ದು. ನೋಡುಗರ ಕರುಳು ಚುರುಕ್ ಅನ್ನುವಂತಿದೆ. ಇದನ್ನೂ ಓದಿ:ಸನಾತನ ಧರ್ಮವೇ ಇಸ್ಲಾಂ ಧರ್ಮಕ್ಕೆ ಅಡಿಪಾಯ , ಮುಸ್ಲಿಂರು ರಾಮನ ವಂಶಸ್ಥರು; ಜಮಾಲ್ ಸಿದ್ದಿಕಿ, ಬಿಜೆಪಿ ನಾಯಕ
ಕಾಂಪೌಂಡ್ ಗೋಡೆ ಕುಸಿದು ಬಾಲಕಿ ಸಾ*ವು..!
ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಉಳ್ಳಾಲದಲ್ಲಿ ಜಲಪ್ರಳಯ ಉಂಟಾಗಿದ್ದು. ಉಳ್ಳಾಲದಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳ್ಮ ಎಂಬಲ್ಲಿ ಮನೆಯ ಕಂಪೌಂಡ್ ಗೋಡೆ ಕುಸಿದು ಬಾಲಕಿಯೊಬ್ಬಳು ಮೃತಪಟ್ಟಿದ್ದು. ಬೆಳ್ಮದಲ್ಲಿ ನೌಶಾದ್ ಎಂಬವರ ಪುತ್ರಿ ಫಾತಿಮ ನಯೀಮ (10) ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ :‘ತಂದೆ ಸಮಾನರಾದ ಅಂಬಿ ಅಪ್ಪಾಜಿ ಎಂದಿಗೂ ಜೀವಂತ’; ರೆಬಲ್ ಸ್ಟಾರ್ ನೆನೆದು ದರ್ಶನ್ ಟ್ವಿಟ್