ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತೊಮ್ಮೆ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದು. ಸರ್ಕಾರ ಸನ್ಮಾನ ಮಾಡೋ ಅಗತ್ಯತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಆಟಗಾರರಿಗೆ ಸನ್ಮಾನ ಮಾಡುವ ಬದಲು, ಅವಮಾನ ಮಾಡಿ ಕಳ್ಸಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ :ಮಗನನ್ನು ಕಳೆದುಕೊಂಡ ಭೂಮಿಕ್ ತಂದೆ ಆಕ್ರಂದನ; ಸಮಾಧಿ ಮೇಲೆ ಬಿದ್ದು ಗೋಳಾಟ
ಬೆಂಗಳೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಹೆಚ್ಡಿಕೆ ” ಕಾಲ್ತುಳಿತ ಘಟನೆಯ ಜವಬ್ದಾರಿಯನ್ನ ಸಿಎಂ, ಡಿಸಿಎಂ, ಗೃಹ ಸಚಿವರು ತೆಗೆದುಕೊಳ್ಬೇಕು. ಇದರಲ್ಲಿ ಮೂವರದ್ದೂ ತಪ್ಪಿದೆೆೆೆ, ಪಂದ್ಯ ಮುಗಿದ ಮಾರನೇ ದಿನವೇ ಸನ್ಮಾನ ಮಾಡಬೇಕಾದ ಅವಶ್ಯಕತೆ ಇತ್ತಾ. ಅಷ್ಟೇ ಅಲ್ಲದೇ ನೀವು ಆಟಗಾರರಿಗೆ ಬೇಕಾಬಿಟ್ಟಿ ಸನ್ಮಾನ ಮಾಡಿದ್ರಿ. ಇಂತಾ ಸನ್ಮಾನದ ಅವಶ್ಯಕತೆ ಇತ್ತ, ನೀವು ಕೊಟ್ಟ ಶಲ್ಯ, 50 ರೂಪಾಯಿ ಪೇಟವನ್ನ ಮನೆಗೆ ತೆಗೆದುಕೊಂಡು ಹೋದ್ರಾ, ಅಥವಾ ಎಲ್ಲಿಯಾದರೂ ಬಿಸಾಕಿ ಹೋದ್ರ ಎಂಬುದು ದೇವರೆ ಬಲ್ಲಾ ಎಂದು ಪ್ರಶ್ನಿಸಿದರು.
ಮುಂದುವರಿದು ಮಾತನಾಡಿದ ಕುಮಾರಸ್ವಾಮಿ ” ಮಂತ್ರಿಗಳಿಗೆ ನೈತಿಕತೆ ಅನ್ನೋದು ಇದ್ದರೆ ರಾಜೀನಾಮೆ ಕೊಡಬೇಕು. ರಾಜಕಾರಣಿಗಳದ್ದೇ ತಲೆದಂಡ ಆಗಬೇಕಿದೆ. ನಾವು ರಾಜಕಾರಣಿಗಳು ಭಂಡರು ಅನ್ನೋದನ್ನ ಹಲವಾರು ರೀತಿಯಲ್ಲಿ ತೋರಿಸಿಕೊಂಡಿದ್ದೇವೆ. ಅವರಿಂದ ಅದನ್ನು ನಿರೀಕ್ಷೆ ಮಾಡೋಕೆ ಆಗಲ್ಲ
ಆದ್ರೆ ನಾವು ವಿರೋಧ ಪಕ್ಷದಲ್ಲಿ ಇದ್ದುಕೊಂಡು ಡಿಮ್ಯಾಂಡ್ ಮಾಡ್ತೀವಿ. ನಮಗೆ ಹೆಣದ ಮೇಲೆ ರಾಜಕೀಯ ಮಾಡೋ ದುರ್ಗತಿ ಇನ್ನು ಬಂದಿಲ್ಲ ಎಂದು ಹೇಳಿದರು. ಇದನ್ನೂ ಓದಿ :ಭೀಕರ ಕಾಲ್ತುಳಿತ ಪ್ರಕರಣ; ಕೆಎಸ್ಸಿಎ ಕಾರ್ಯದರ್ಶಿ, ಖಜಾಂಜಿ ರಾಜೀನಾಮೆ
ಗೋವಿಂದ್ ರಾಜು ಅಮಾನತು ವಿಚಾರದ ಬಗ್ಗೆ ಹೆಚ್ಡಿಕೆ ಮಾತು..!
ಸಿಎಂ ಕಾರ್ಯದರ್ಶಿ ಗೋವಿಂದರಾಜು ಅಮಾನತು ವಿಚಾರವಾಗಿ ಮಾತನಾಡಿದ ಹೆಚ್ಡಿಕೆ “ನಾನು ಹೇಳಿದ್ಮೇಲೆ ಸರ್ಕಾರಕ್ಕೆ ಜ್ಞಾನೋದಯ ಆಗಿದೆ. ಇದಕ್ಕೆ ನಾನು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಪೊಲೀಸ್ ಇಲಾಖೆ ಅಧಿಕಾರಿಗಳಿಂದ ತಪ್ಪಾಗಿದೆ ಅಂತಾ 5 ಜನ ಅಧಿಕಾರಿಗಳ ಸಸ್ಪೆಂಡ್ ಮಾಡೋ ಅವಶ್ಯಕತೆ ಇರಲಿಲ್ಲ. ಸರ್ಕಾರ ಮಾಡಿರುವ ತಪ್ಪಿಗೆ ಅಧಿಕಾರಿಗಳ ತಲೆ ದಂಡ ಆಗಿದೆ. ಈ ರೀತಿ ಮಾಡುರುವುದರಿಂದ ಎಷ್ಟರ ಮಟ್ಟಿಗೆ ಅಧಿಕಾರಿಗಳು ಶ್ರದ್ದೆಯಿಂದ ಕೆಲಸ ಮಾಡಲು ಸಾಧ್ಯ?. ಇದನ್ನೂ ಓದಿ :ಅನೈತಿಕ ಸಂಬಂಧಕ್ಕೆ ಅಡ್ಡಿ; ವಿಷ ಹಾಕಿ ಕುಟುಂಬವನ್ನೇ ಮುಗಿಸಲು ಪ್ಲಾನ್ ರೂಪಿಸಿದ ಖತರ್ನಾಕ್ ಪತ್ನಿ
ಸರ್ಕಾರ ಇದರ ಬಗ್ಗೆ ಯೋಚನೆ ಮಾಡ್ಬೇಕಿತ್ತು. ಇಲ್ಲಿ ನಡೆದಿರುವ ವಾಸ್ತವಾಂಶವೇ ಬೇರೆ. ಸರ್ಕಾರ ಪಾರದರ್ಶಕ ಆಡಳಿತ ಕೊಡ್ತೀವಿ ಅಂತಿದ್ದಾರೆ. ಸತ್ಯನಿಷ್ಟೆಯಿಂದ ಅಧಿಕಾರ ನಡೆಸ್ತೀವಿ ಅಂತಾರೆ. ಆದರೆ ಈ ಸನ್ನಿವೇಶದಲ್ಲಿ ಸರ್ಕಾರದ ನಿರ್ಧಾರಕ್ಕೆ ಜನಾಭಿಪ್ರಾಯ ಏನಿದೆ ಅಂತಾ ಅರ್ಥ ಮಾಡಿಸಬೇಕಿದೆ ಎಂದು ಹೆಚ್ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.