Monday, September 8, 2025
HomeUncategorizedಈ ಫಲಿತಾಂಶಗಳು ಕಾಂಗ್ರೆಸ್ ಮತ್ತು ಆ ದುರಹಂಕಾರದ ಮೈತ್ರಿಗೆ ದೊಡ್ಡ ಪಾಠ : ಪ್ರಧಾನಿ ಮೋದಿ...

ಈ ಫಲಿತಾಂಶಗಳು ಕಾಂಗ್ರೆಸ್ ಮತ್ತು ಆ ದುರಹಂಕಾರದ ಮೈತ್ರಿಗೆ ದೊಡ್ಡ ಪಾಠ : ಪ್ರಧಾನಿ ಮೋದಿ ಗುಡುಗು

ನವದೆಹಲಿ : ಈ ಚುನಾವಣಾ ಫಲಿತಾಂಶಗಳು ಕಾಂಗ್ರೆಸ್ ಮತ್ತು ಅದರ ದುರಹಂಕಾರದ ಮೈತ್ರಿ(I.N.D.I.A)ಗೆ ದೊಡ್ಡ ಪಾಠ ಎಂದು ವಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗುಡುಗಿದರು.

ರಾಜಸ್ಥಾನ, ಮಧ್ಯ ಪ್ರದೇಶ ಹಾಗೂ ಛತ್ತೀಸ್​ಗಢದಲ್ಲಿ ಬಿಜೆಪಿ ಜಯ ಗಳಿಸಿದ ಹಿನ್ನೆಲೆ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು. ಕೆಲವೇ ಕೆಲವು ಕುಟುಂಬಸ್ಥರು ವೇದಿಕೆಯ ಮೇಲೆ ಒಗ್ಗೂಡುವುದರಿಂದ ದೇಶದ ವಿಶ್ವಾಸ ಗಳಿಸಲು ಸಾಧ್ಯವಿಲ್ಲ ಎಂದು ಕುಟುಕಿದರು.

ನಾಡಿನ ಜನರ ಮನ ಗೆಲ್ಲಲು ಇರಬೇಕಾದದ್ದು ದೇಶಸೇವೆಯ ಮನೋಭಾವ, ದುರಹಂಕಾರಿ ಮೈತ್ರಿಯಲ್ಲ. ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ನಾನು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಗೆ ಒಂದು ಸಲಹೆಯನ್ನು ನೀಡುತ್ತೇನೆ. ದಯವಿಟ್ಟು ದೇಶವನ್ನು ವಿಭಜಿಸುವ ಮತ್ತು ದೇಶವನ್ನು ದುರ್ಬಲಗೊಳಿಸುವ ಕೆಲಸ ಮಾಡುವ ರಾಷ್ಟ್ರವಿರೋಧಿ ರಾಜಕೀಯ ಮಾಡಬೇಡಿ ಎಂದು ಛೇಡಿಸಿದರು.

ಭರವಸೆಗಳನ್ನು 100 ಪರ್ಸೆಂಟ್ ಈಡೇರಿಸುತ್ತೇನೆ

ಮಹಿಳಾ ಶಕ್ತಿಯ ಅಭಿವೃದ್ಧಿಯೇ ಬಿಜೆಪಿಯ ಅಭಿವೃದ್ಧಿ ಮಾದರಿಯ ಮುಖ್ಯ ಧ್ಯೇಯ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಮಹಿಳೆಯರು, ಸಹೋದರಿಯರು, ಹೆಣ್ಣುಮಕ್ಕಳು ಹೆಚ್ಚಿನ ಆಶೀರ್ವಾದ ನೀಡಿದ್ದಾರೆ. ಇಂದು ನಾನು ದೇಶದ ಪ್ರತಿಯೊಬ್ಬ ಸಹೋದರಿ ಮತ್ತು ಮಗಳಿಗೆ ವಿನಮ್ರವಾಗಿ ಹೇಳುತ್ತೇನೆ. ಬಿಜೆಪಿಯು ನಿಮಗೆ ನೀಡಿದ ಭರವಸೆಗಳನ್ನು 100 ಪರ್ಸೆಂಟ್ ಈಡೇರಿಸುತ್ತೇನೆ. ಇದು ಮೋದಿಯವರ ಭರವಸೆ ಎಂದು ಹೇಳಿದರು.

ಬಿಜೆಪಿ ನಿಮ್ಮ ಸೇವೆಗೆ ಅಡ್ಡಿಯಾಗುವುದಿಲ್ಲ

ತೆಲಂಗಾಣ ಜನತೆಗೆ ಮತ್ತು ತೆಲಂಗಾಣದ ಬಿಜೆಪಿ ಕಾರ್ಯಕರ್ತರಿಗೆ ನಾನು ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ತೆಲಂಗಾಣದಲ್ಲಿ ಪ್ರತಿ ಚುನಾವಣೆಯಲ್ಲೂ ಬಿಜೆಪಿ ಗ್ರಾಫ್ ಹೆಚ್ಚುತ್ತಲೇ ಇದೆ. ತೆಲಂಗಾಣ ಜನತೆಗೆ ನಾನು ಭರವಸೆ ನೀಡುತ್ತೇನೆ. ಬಿಜೆಪಿ ನಿಮ್ಮ ಸೇವೆಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಪ್ರಧಾನಿ ಮೋದಿ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments