Thursday, August 21, 2025
Google search engine
HomeASTROLOGYಸಂಭ್ರಮಚರಣೆ ವೇಳೆ ಕಾಲ್ತುಳಿತ; ಮೆಟ್ರೋ ನಿಲ್ದಾಣಕ್ಕೆ ನುಗ್ಗಿದ ಅಭಿಮಾನಿಗಳು, ಸಂಚಾರದಲ್ಲಿ ವ್ಯತ್ಯಯ

ಸಂಭ್ರಮಚರಣೆ ವೇಳೆ ಕಾಲ್ತುಳಿತ; ಮೆಟ್ರೋ ನಿಲ್ದಾಣಕ್ಕೆ ನುಗ್ಗಿದ ಅಭಿಮಾನಿಗಳು, ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು: ಆರ್​​ಸಿಬಿ ಅಭಿಮಾನಿಗಳ ಸಂಭ್ರಮಚರಣೆ ವೇಳೆ ಕಾಲ್ತುಳಿತ ಸಂಭವಿಸಿ 10ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು. ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ವಾಹನ ಸಂಚಾರವನ್ನು ನಿಷೇಧಿಸಿರುವ ಹಿನ್ನಲೆ ಜನರು ಮೆಟ್ರೋ ನಿಲ್ದಾಣದತ್ತ ನುಗ್ಗಿದ್ದಾರೆ. ಜನ ಸಂಖ್ಯೆ ಹೆಚ್ಚಳವಾದ ಬೆನ್ನಲೆ 2 ಗಂಟೆಗಳ ಕಾಲ ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಿದ್ದು. ಮೆಟ್ರೋ ನಿಲ್ದಾಣ ಜಾತ್ರೆಯಂತಾಗಿದೆ. ಇದನ್ನೂ ಓದಿ :ಕಾಲ್ತುಳಿತದಲ್ಲಿ 10ಕ್ಕೂ ಹೆಚ್ಚು ಮಂದಿ ಸಾ*ವು; ರಾಜ್ಯ ಸರ್ಕಾರದ ಮೇಲೆ ಬಿಜೆಪಿ ಆಕ್ರೋಶ

ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ವಾಹನಗಳ ಪ್ರವೇಶ ನಿಷೇಧಿಸಿರುವುದರಿಂದ ಬಹುತೇಕ ಅಭಿಮಾನಿಗಳು ಮೆಟ್ರೋ ನಿಲ್ದಾಣಕ್ಕೆ ನುಗ್ಗಿದ್ದಾರೆ. ಇದರಿಂದಾಗಿ ಇಂದು ಮಧ್ಯಾಹ್ನದಿಂದ ಎಂಜಿ ರಸ್ತೆ, ಕಬ್ಬನ್ ಪಾರ್ಕ್ ಮೆಟ್ರೋ ಸ್ಟೇಷನ್​ಗಳು ಜಾತ್ರೆಯಂತಾಗಿವೆ. ಈ ಮಾರ್ಗದ ಮೆಟ್ರೋ ರೈಲುಗಳಲ್ಲಿ ಕಾಲು ಹಾಕಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ:RCB ಸಂಭ್ರಮೋತ್ಸವದ ವೇಳೆ ಭಾರೀ ದುರಂತ; ಇಬ್ಬರು ಸಾವು, 20ಕ್ಕೂ ಹೆಚ್ಚು ಜನರು ಅಸ್ವಸ್ಥ

ಈ ನಡುವೆ ವಿಜಯ ಯಾತ್ರೆಗೂ ಮುನ್ನವೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಂಟಾದ ಕಾಲ್ತುಳಿತದಲ್ಲಿ 10 ಅಭಿಮಾನಿಗಳು ಸಾವನ್ನಪ್ಪಿದ್ದಾರೆ. ಬ್ಯಾರಿಕೇಡ್ ಬಿದ್ದು ಮೂವರ ಕಾಲು ಕಟ್ ಆಗಿದೆ. ನೂಕುನುಗ್ಗಲು ಹೆಚ್ಚಾಗುತ್ತಲೇ ಇದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.

ಗಾಯಾಳುಗಳನ್ನು ಮಾತನಾಡಿಸಲು ಸಿಎಂ ಸಿದ್ದರಾಮಯ್ಯ ಮತ್ತು ಬಿವೈ ವಿಜಯೇಂದ್ರ ಬೌರಿಂಗ್​ ಆಸ್ಪತ್ರೆಗೆ ಭೇಟಿ ನೀಡಿದ್ದು, ಸಿಎಂ ತುರ್ತು ಸಭೆ ಕರೆದಿದ್ದಾರೆ. ವಿಪಕ್ಷಗಳು ಕಾಂಗ್ರೆಸ್​ ಸರ್ಕಾರದ ನಿರ್ಲಕ್ಷದಿಂದ ದುರಂತ ಸಂಭವಿಸಿದೆ ಎಂದು ಆರೋಪಿಸಿದ್ದು. ರಾಜ್ಯ ಸರ್ಕಾರದ ಕೈಗೆ ಅಮಾಯಕ ಅಭಿಮಾನಿಗಳ ರಕ್ತ ಅಂಟಿಕೊಂಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ :ಇಂದು ಸಂಜೆ ಬೆಂಗಳೂರಿನಲ್ಲಿ RCB ವಿಜಯಯಾತ್ರೆ; ಅಭಿಮಾನಿಗಳಲ್ಲಿ ಸಂತಸ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments