Thursday, August 21, 2025
Google search engine
HomeUncategorizedರಾಮನಗರಕ್ಕೆ ನೀರು ಬೇಕಿಲ್ಲ, ಕುಣಿಗಲ್​ಗೆ ಅನ್ಯಾಯ ಆಗಿದೆ, ಅದನ್ನ ಸರಿಪಡಿಸಬೇಕು ; ಡಿ.ಕೆ ಶಿವಕುಮಾರ್​

ರಾಮನಗರಕ್ಕೆ ನೀರು ಬೇಕಿಲ್ಲ, ಕುಣಿಗಲ್​ಗೆ ಅನ್ಯಾಯ ಆಗಿದೆ, ಅದನ್ನ ಸರಿಪಡಿಸಬೇಕು ; ಡಿ.ಕೆ ಶಿವಕುಮಾರ್​

ಬೆಂಗಳೂರು: ಹೇಮಾವತಿ ಕೆನಲ್​ ಕಾಮಗಾರಿ ಕುರಿತು ಡಿ.ಕೆ ಶಿವಕುಮಾರ್​ ಮಾತನಾಡಿದ್ದು. ‘ರಾಜಕೀಯಕ್ಕಾಗಿ ಅಸೂಯಯಿಂದ ಗಲಾಟೆ ಮಾಡ್ತಿದ್ದಾರೆ. ಆದರೆ ಕುಣಿಗಲ್​ಗೆ ಕಳೆದ 10 ವರ್ಷದಿಂದ ಅನ್ಯಾಯ ಆಗಿದೆ. ಅದನ್ನ ಸರಿಪಡಿಸಲು ಹೊರಟ್ಟಿದ್ದೇವೆ ಎಂದು ಡಿಕೆ ಶಿವಕುಮಾರ್​ ಹೇಳಿದರು.

ಇದನ್ನೂ ಓದಿ :ಧೂಮಪಾನಕ್ಕೆ ಪ್ರತ್ಯೇಕ ಸ್ಥಳವಿಲ್ಲದ ಆರೋಪ; ವಿರಾಟ್​ ಮಾಲಿಕತ್ವದ ಪಬ್​ ವಿರುದ್ದ ಕೇಸ್ ದಾಖಲು

ತುಮಕೂರಿನಿಂದ ರಾಮನಗರಕ್ಕೆ ನೀರು ಒದಗಿಸುವ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ವಿರೋಧಿಸಿ ನಿಷೇಧಾಜ್ಞೆಯ ನಡುವೆಯೂ ರೈತರು, ರಾಜಕೀಯ ಮುಖಂಡರು ಶನಿವಾರ ಪ್ರತಿಭಟನೆ ನಡೆಸಿದ್ದರು. ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದರು. ನೀರಿಗಾಗಿ ಪ್ರತಿಭಟನೆ ನಡೆಸಿದವರ ವಿರುದ್ಧ ಪೊಲೀಸರು ಗುಬ್ಬಿ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿದ್ದಾರೆ.

ಈ ಕುರಿತು ಬೆಂಗಳೂರನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಡಿಸಿಎಂ ಡಿಕೆ. ಶಿವಕುಮಾರ್​​ ” ಈ ಯೋಜನೆಯನ್ನ ರಾಜಕೀಯ ಮಾಡ್ತಾ ಇದ್ದಾರೆ. ಅಸೂಯೆಯಿಂದ ಕುಣಿಗಲ್​ಗೆ ಹೋಗಬೇಕಾದ ನೀರನ್ನ ತಡೆದಿದ್ದಾರೆ. 10 ವರ್ಷ ಕುಣಿಗಲ್​ಗೆ ಅನ್ಯಾಯ ಆಗ್ತಿದೆ. ಈ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ.  ರಾಮನಗರಕ್ಕೆ ಈ ನೀರಿನ ಅವಶ್ಯಕತೆ ಇಲ್ಲ. ಬೆಂಗಳೂರಿಗೂ ನೀರಿನ ಸಮಸ್ಯೆ ಇಲ್ಲ. ಇದನ್ನೂ ಓದಿ :ಹಿಂದೂ ಮುಖಂಡನಿಂದ ಯುವತಿಗೆ ಕಿರುಕುಳ; 7 ಮದುವೆ ಕ್ಯಾನ್ಸಲ್​ ಮಾಡಿ ಜೀವ ಬೆದರಿಕೆ

ಕುಣಿಗಲ್​ಗೆ ಆಗಿರೋ ಅನ್ಯಾಯವನ್ನ ಸರಿ ಮಾಡಲು ಹೊರಟ್ಟಿದ್ದೇವೆ. ಮಾಗಡಿಗೂ ನೀರು ಕಡಿಮೆ ಆಗಿತ್ತು. ಇದೇನೂ ರಾಜ್ಯ ರಾಜ್ಯದ ನಡುವಿನ ಗಲಾಟೆ ಅಲ್ಲ. ಕೆಲವೊಂದು ವಿಚಾರಗಳನ್ನ ಬಿಚ್ಚಿ ಮಾತನಾಡಲ್ಲ. ಈ ಕುರಿತು ಹಿಂದೆಯೂ ವಿಧಾನಸೌದದಲ್ಲಿ ಮೀಟಿಂಗ್ ಮಾಡಲಾಗದೆ. ಇದರಲ್ಲಿ ರಾಜಕೀಯ ಮಾಡೋದು ಬೇಡ. ನೀವೇನೂ ಮಾತನಾಡಿದ್ದೀರಾ, ಅದಕ್ಕಿಂತ ಹೆಚ್ಚು ನಾನು ಮಾತನಾಡಬಹುದು. ರೈತರನ್ನ ಇದರ ವಿರುದ್ದ ಎತ್ತಿಕಟ್ಟಿದ್ದಾರೆ, ಅದಕ್ಕೆ ಪೊಲೀಸರು ಕೇಸ್​ ಹಾಕಿದ್ದಾರೆ. ಹಾಗಾದರೆ ಕುಣಿಗಲ್​ ರೈತರು ಬೇರೆನಾ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ. https://whatsapp.com/channel/0029Va5cjRY9Gv7Tls4bhb1n

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments