ಬೆಂಗಳೂರು: ಐಪಿಎಲ್ 2025ರ ಫೈನಲ್ ಪಂದ್ಯ ಗೆದ್ದು ಆರ್ಸಿಬಿ ತಂಡ ವಿಜಯೋತ್ಸವ ಆಚರಿಸಲು ಬೆಂಗಳೂರಿಗೆ ಬಂದಿದೆ. ಹೆಚ್ಎಎಲ್ಗೆ ವಿಶೇಷ ವಿಮಾನದ ಮೂಲಕ ಆರ್ಸಿಬಿ ತಂಡ ಆಗಮಿಸಿದ್ದು. ಡಿಸಿಎಂ ಡಿಕೆ ಶಿವಕುಮಾರ್ ಆರ್ಸಿಬಿ ಆಟಗಾರರನ್ನು ಸ್ವಾಗತಿಸಿದ್ದಾರೆ. ಈ ವೇಳೆ ಕಿಂಗ್ ಕೊಹ್ಲಿಗೆ ಕರ್ನಾಟಕದ ಧ್ವಜ ನೀಡಿ ಅಭಿನಂದಿಸಿದ್ದಾರೆ. ಇದನ್ನೂ ಓದಿ :‘ಕನ್ನಡದ ನಟರು ತಮಿಳಿನಲ್ಲಿ ನಟಿಸುತ್ತಿದ್ದಾರೆ’; ಪರೋಕ್ಷವಾಗಿ ಬೆದರಿಕೆ ಹಾಕಿದ ತಮಿಳು ನಿರ್ಮಾಪಕರು
ಆರ್ಸಿಬಿ ತಂಡ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಬಂದಿಳಿದಿದ್ದು. ಆರ್ಸಿಬಿ ಆಟಗಾರರ ಜೊತೆ ಮಾಜಿ ಆಟಗಾರರಾದ ಕ್ರಿಸ್ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಆಗಮಿಸಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಆರ್ಸಿಬಿ ಆಟಗಾರರನ್ನು ಸ್ವಾಗತಿಸಿದ್ದು. ಇಲ್ಲಿಂದ ಆರ್ಸಿಬಿ ತಂಡ ತಾಜ್ ವೆಸ್ಟೆಂಡ್ ಹೋಟೆಲ್ಗೆ ತೆರಳಲಿದೆ. ಇಲ್ಲಿ ವಿಶ್ರಾಂತಿ ಪಡೆದ ಬಳಿಕ ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಟ್ರೋಫಿ ನೀಡಲಿದೆ. ಇದನ್ನೂ ಓದಿ :RCB ವಿಜಯೋತ್ಸವಕ್ಕೆ ಬ್ರೇಕ್ ಹಾಕಿದ ರಾಜ್ಯ ಸರ್ಕಾರ; ತೆರೆದ ಬಸ್ ಪರೇಡ್ಗೆ ಇಲ್ಲ ಅವಕಾಶ
ಸಿಎಂ ಭೇಟಿ ಬಳಿಕ 5 ಗಂಟೆಗೆ ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳಿ, ಆರ್ಸಿಬಿ ತಂಡದ ಪರೇಡ್ ನಡೆಯಲಿದೆ. 6 ಗಂಟೆಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭ್ರಮಾಚರಣೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಆರ್ಸಿಬಿ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ.