Site icon PowerTV

ಬೆಂಗಳೂರಿಗೆ ಬಂದಿಳಿದ ‘ರೆಡ್​ ಆರ್ಮಿ’; ಕನ್ನಡ ಧ್ವಜ ಕೊಟ್ಟು ಸ್ವಾಗತಿಸಿದ ಡಿಕೆಶಿ

ಬೆಂಗಳೂರು: ಐಪಿಎಲ್ 2025ರ ಫೈನಲ್ ಪಂದ್ಯ ಗೆದ್ದು ಆರ್​​ಸಿಬಿ ತಂಡ ವಿಜಯೋತ್ಸವ ಆಚರಿಸಲು ಬೆಂಗಳೂರಿಗೆ ಬಂದಿದೆ. ಹೆಚ್​ಎಎಲ್​ಗೆ ವಿಶೇಷ ವಿಮಾನದ ಮೂಲಕ ಆರ್​ಸಿಬಿ ತಂಡ ಆಗಮಿಸಿದ್ದು. ಡಿಸಿಎಂ ಡಿಕೆ ಶಿವಕುಮಾರ್​ ಆರ್​ಸಿಬಿ ಆಟಗಾರರನ್ನು ಸ್ವಾಗತಿಸಿದ್ದಾರೆ. ಈ ವೇಳೆ ಕಿಂಗ್​​ ಕೊಹ್ಲಿಗೆ ಕರ್ನಾಟಕದ ಧ್ವಜ ನೀಡಿ ಅಭಿನಂದಿಸಿದ್ದಾರೆ. ಇದನ್ನೂ ಓದಿ :‘ಕನ್ನಡದ ನಟರು ತಮಿಳಿನಲ್ಲಿ ನಟಿಸುತ್ತಿದ್ದಾರೆ’; ಪರೋಕ್ಷವಾಗಿ ಬೆದರಿಕೆ ಹಾಕಿದ ತಮಿಳು ನಿರ್ಮಾಪಕರು

ಆರ್​ಸಿಬಿ ತಂಡ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಬಂದಿಳಿದಿದ್ದು. ಆರ್​ಸಿಬಿ ಆಟಗಾರರ ಜೊತೆ ಮಾಜಿ ಆಟಗಾರರಾದ ಕ್ರಿಸ್​​ಗೇಲ್​ ಮತ್ತು ಎಬಿ ಡಿವಿಲಿಯರ್ಸ್​ ಆಗಮಿಸಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್​ ಆರ್​ಸಿಬಿ ಆಟಗಾರರನ್ನು ಸ್ವಾಗತಿಸಿದ್ದು. ಇಲ್ಲಿಂದ ಆರ್‌ಸಿಬಿ ತಂಡ ತಾಜ್ ವೆಸ್ಟೆಂಡ್ ಹೋಟೆಲ್‌ಗೆ ತೆರಳಲಿದೆ. ಇಲ್ಲಿ ವಿಶ್ರಾಂತಿ ಪಡೆದ ಬಳಿಕ ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಟ್ರೋಫಿ ನೀಡಲಿದೆ. ಇದನ್ನೂ ಓದಿ :RCB ವಿಜಯೋತ್ಸವಕ್ಕೆ ಬ್ರೇಕ್​ ಹಾಕಿದ ರಾಜ್ಯ ಸರ್ಕಾರ; ತೆರೆದ ಬಸ್​ ಪರೇಡ್​ಗೆ ಇಲ್ಲ ಅವಕಾಶ

ಸಿಎಂ ಭೇಟಿ ಬಳಿಕ 5 ಗಂಟೆಗೆ ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳಿ, ಆರ್‌ಸಿಬಿ ತಂಡದ ಪರೇಡ್ ನಡೆಯಲಿದೆ. 6 ಗಂಟೆಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭ್ರಮಾಚರಣೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಆರ್‌ಸಿಬಿ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ.

ಅಧಿಕೃತ ಟಿಕೆಟ್‌ ಮತ್ತು ಪಾಸ್‌ ಹೊಂದಿದವರಿಗೆ ಮಾತ್ರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಲು ಅನುಮತಿ ನೀಡಲಾಗುತ್ತದೆ. ಚಿನ್ನಸ್ವಾಮಿ ಕ್ರೀಡಾಂಗಣದತ್ತ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: RCB ಅಭಿಮಾನಿಗಳಿಗೆ ಕೊಟ್ಟಿದ್ದ ಮಾತು ಈಡೇರಿಸಿದ ಕೃನಾಲ್​ ಪಾಂಡ್ಯ

Exit mobile version