ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಅರೋಪಿಯಾಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಜಾಮೀನನ್ನು ಸುಪ್ರೀಮ್ ಕೋರ್ಟ್ ರದ್ದು ಮಾಡಿರುವ ಕಾರಣ ಅವರು ಪುನಃ ಜೈಲು ಸೇರಬೇಕಿದೆ.
ಇಂದು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ ವಿನಯ್ ಕುಲಕರ್ಣಿ, ನಂತರ ಮಾಧ್ಯಮಗಳೊಂದೊಗೆ ಮಾತನಾಡಿದರು. “ಸುಪ್ರೀಂ ಕೋರ್ಟ್ ಜಾಮಿನು ರದ್ದು ಪಡಿಸಿರುವುದರಿಂದ ವಾಪಸ್ಸು ಜೈಲಿಗೆ ಹೋಗಲೇಬೇಕಿದೆ, ನ್ಯಾಯಲಯದ ಆದೇಶವನ್ನ ಪಾಲಿಸಲೇಬೇಕು ಎಂದು ಹೇಳಿದರು. ಮುಂದಿನ ಕಾನೂನು ಪ್ರಕ್ರಿಯೆ ಬಗ್ಗೆ ಸದ್ಯಕ್ಕೆ ಏನನ್ನೂ ನಿರ್ಧರಿಸಿಲ್ಲ, ಎರಡು ವಾರ ಕಳೆದ ಬಳಿಕ ಅದರ ಬಗ್ಗೆ ಯೋಚಿಸುವುದಾಗಿ ಕುಲಕರ್ಣಿ ಹೇಳಿದರು. ಇದನ್ನೂ ಓದಿ : ಬ್ಲಾಕ್ಮೇಲ್ ಮಾಡಿ ಅಪ್ರಾಪ್ತ ಬಾಲಕಿ ಮೇಲೆ ಮೂವರಿಂದ ಅತ್ಯಾಚಾರ
ಮುಂದುವರಿದು ಮಾತನಾಡಿದ ವಿನಯ್ ಕುಲಕರ್ಣಿ “ಈ ವಿಚಾರವನ್ನ ಡಿಕೆ ಶಿವಕುಮಾರ್ ಅವರಿಗೆ ತಿಳಿಸಲು ಬಂದಿದ್ದೆ. ಯಾವ ಸಣ್ಣ ಹುಡುಗನನ್ನ ಕೇಳಿದರೂ ಕೊಲೆ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ ಅಂತ ಹೇಳ್ತಾರೆ. ರಾಜಕೀಯಕ್ಕಾಗಿ ನನ್ನ ಮೇಲೆ ಷಡ್ಯಂತ್ರ ರೂಪಿಸಿದ್ದಾರೆ. ಇದರಲ್ಲಿ ಅನೇಕ ರಾಜಕಾರಣಿಗಳ ಕೈವಾಡವಿದೆ. ಇದರಲ್ಲಿ ಯಾರ ಕೈವಾಡ ಇದೆ ಅಂತ ಮೇಲಿರುವ ದೇವರು ನೋಡುತ್ತಿದ್ದಾನೆ, ಅವನೇ ಎಲ್ಲಾ ನೋಡಿಕೊಳ್ಳುತ್ತಾನೆ ಎಂದು ಹೇಳಿದರು.