Thursday, August 21, 2025
Google search engine
HomeASTROLOGYರಸ್ತೆ ದಾಟುತ್ತಿದ್ದ ಬಾಲಕನ ಮೇಲೆ ಹರಿದ ಲಾರಿ; ಅಜ್ಜಿಯ ಕಣ್ಣೆದುರೆ ಸಾವನ್ನಪ್ಪಿದ ಬಾಲಕ

ರಸ್ತೆ ದಾಟುತ್ತಿದ್ದ ಬಾಲಕನ ಮೇಲೆ ಹರಿದ ಲಾರಿ; ಅಜ್ಜಿಯ ಕಣ್ಣೆದುರೆ ಸಾವನ್ನಪ್ಪಿದ ಬಾಲಕ

ಶಿವಮೊಗ್ಗ: ರಸ್ತೆ ದಾಟುವಾಗ ಲಾರಿಯೊಂದು ಬಾಲಕನ ಮೇಲೆ ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕೆರೆಕೊಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಶಿರಸಿಯ ಅತಾವುಲ್ಲಾ ಖಾನ್ ಹಾಗೂ ಫರೀನಾ ಬೇಗಂ ಪುತ್ರ ಮುಹಮ್ಮದ್ ಆಹಿಲ್‌ ಖಾನ್ (3) ಮೃತ ಬಾಲಕನಾಗಿದ್ದಾನೆ. ಇದನ್ನೂ ಓದಿ :‘ಲಕ್ಷಾಂತರ ಜನರ ಕನಸನ್ನ ನನಸು ಮಾಡಿ’; RCB ಜರ್ಸಿ ತೊಟ್ಟು ವಿಶ್​ ಮಾಡಿದ ಡಿಕೆಶಿ

ಅಂಗನವಾಡಿಯಲ್ಲಿದ್ದ ಬಾಲಕ ಅಜ್ಜಿಯನ್ನು ಕಂಡು ರಸ್ತೆ ದಾಟುತ್ತಿರುವ ವೇಳೆ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಚಾಲಕನ ಅಜಾಗರೂಕತೆ ಮತ್ತು ಅತಿವೇಗವೇ ಬಾಲಕನ ಸಾವಿಗೆ ಕಾರಣ ಎಂದು ಮೃತ ಬಾಲಕನ ಅಜ್ಜಿ ನಸೀಮಾ ಬಾನು ನೀಡಿದ ದೂರಿನ ಅನ್ವಯ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ನಿಶ್ಚಿತಾರ್ಥ ಮಾಡಿಕೊಳ್ಳಲು ಚಿನ್ನದ ಸರ ಕದ್ದ ಲಾಡ್ಜ್​ ಮ್ಯಾನೇಜರ್​ ಬರ್ಬರ ಕೊ*ಲೆ

ಇನ್ನು ಘಟನಾ ಸ್ಥಳದಲ್ಲಿ ಮೃತ ಬಾಲಕನ ಸಂಬಂಧಿಗಳು ಹಾಗೂ ಊರ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು. ಇಡೀ ಗ್ರಾಮಸ್ಥರು ಸ್ಥಳಕ್ಕೆ ಜಮಾಯಿಸಿ ಆಕ್ರಂದನ ವ್ಯಕ್ತಪಡಿಸಿದರು. ಮತ್ತೊಂದೆಡೆ ಮೃತ ಬಾಲಕ ತಂದೆ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಗ್ರಾಮದಲ್ಲಿ ರಸ್ತೆ ಅಗಲೀಕರಣವಾಗುತ್ತಿದ್ದು, ಅಂಗನವಾಡಿ ಕೇಂದ್ರವು ರಸ್ತೆಯ ಪಕ್ಕದಲ್ಲಿರುವುದೇ ಘಟನೆಗೆ ಕಾರಣ. ಅದನ್ನು ಸ್ಥಳಾಂತರ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments