ಮೈಸೂರು: ಐಪಿಎಲ್ 2025 ಕೊನೆ ಹಂತಕ್ಕೆ ಬಂದು ತಲುಪಿದ್ದು. ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಉಳಿದೆಲ್ಲಾ ತಂಡಗಳನ್ನು ಮಣಿಸಿ ಫಿನಾಲೆ ತಲುಪಿದೆ. ಆರ್ಸಿಬಿ ಮೊದಲ ಭಾರಿಗೆ ಕಪ್ ಗೆಲ್ಲುವ ಉತ್ಸಾಹದಲ್ಲಿದ್ದು. ರಾಜಕೀಯ ನಾಯಕರು, ಸಿನಿಮಾ ನಾಯಕರು ಸೇರಿದಂತೆ ಎಲ್ಲರು ಆರ್ಸಿಬಿ ಗೆಲುವಿಗಾಗಿ ವಿಶ್ ಮಾಡುತ್ತಿದ್ದಾರೆ. ಇದರ ನಡುವೆ ಪರಿಷತ್ ಸದಸ್ಯ ಸಿ,ಟಿ ರವಿ ಆರ್ಸಿಬಿಗೆ ವಿಶ್ ಮಾಡಲು ನಿರಾಕರಿಸಿದ್ದಾರೆ.
ಇದನ್ನೂ ಓದಿ :ಭಾರೀ ಮಳೆಗೆ ಸೇನಾ ಶಿಬಿರದ ಮೇಲೆ ಗುಡ್ಡ ಕುಸಿತ; ಮೂವರು ಸಾವು, 6 ಮಂದಿ ಕಣ್ಮರೆ
ಮೈಸೂರಿನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಪರಿಷತ್ ಸದಸ್ಯ ಸಿ.ಟಿ ರವಿ ” ಈ ಹಿಂದೆ ಕ್ರಿಕೆಟ್ ಮ್ಯಾಚ್ ಗಳು ನಡೆಯುತ್ತಿದ್ದವು. ರಣಜಿ ಮೇಲೆ ಪ್ರಾದೇಶಿಕ ಪ್ರೀತಿ ಇತ್ತು, ಆದರೆ ಐಪಿಎಲ್ನಿಂದ ರಾಷ್ಟ್ರೀಯತೆ ಬರಲ್ಲ. ಈ ಕ್ರಿಕೆಟ್ ದುಡ್ಡಿಗಾಗಿ ನಡೆಯತ್ತೆ. ಇಂದು ಆರ್ಸಿಬಿಯಲ್ಲಿ ಇರೋ ಆಟಗಾರ ದುಡ್ಡು ಕೊಟ್ರೆ ನಾಳೆ ಜೆಸಿಬಿ ಕಡೆ ಹೋಗುತ್ತಾನೆ. ಈ ಆಟಗಳೆಲ್ಲಾ ದುಡ್ಡಿಗಾಗಿ ನಡೆಯುತ್ತವೆ. ಆರ್ಸಿಬಿ ತಂಡದಲ್ಲಿ ಎಷ್ಟು ಕನ್ನಡಿಗರು ಇದ್ದಾರೆ ಹೇಳಿ..? ಎಂದು ಪ್ರಶ್ನಿಸಿದರು. ಇದನ್ನೂ ಓದಿ :ಮಂಗಳೂರು ಕ್ಲಾಕ್ ಟವರ್ ಮುಂಭಾಗ ಪೊಲೀಸರಿಂದ ಲಾಠಿ ಡ್ರಿಲ್; ಗಲಭೆಕೋರರಿಗೆ ನೇರ ಎಚ್ಚರಿಕೆ
ಕಮಲ್ ಹಾಸನ್ ವಿರುದ್ದ ಸಿ,ಟಿ ರವಿ ವಾಗ್ದಾಳಿ..!
ಕನ್ನಡ ಭಾಷೆಯ ಬಗ್ಗೆ ಹಿರಿಯ ನಟ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಸಿ.ಟಿ ರವಿ ” ಕಮಲ ಹಾಸನ್ ಹೇಳಿದ ತಕ್ಷಣ ಅಪ್ಪ, ಮಗ ಆಗಲ್ಲ ಮಗ ಅಪ್ಪ ಆಗಲ್ಲ. ಕನ್ನಡಕ್ಕೆ ಸಾವಿರಾರು ವರ್ಷದ ಇತಿಹಾಸ ಇದೆ. ಕೆಲವರಿಗೆ ವಿಷಯಾಂತರ ಮಾಡಿ ಕೆಲ ವಿಚಾರವನ್ನು ಮುನ್ನಲೆಗೆ ಬಿಡುತ್ತಾರೆ. ಇದನ್ನು ರಾಜಕೀಯವಾಗಿ ಮುನ್ನಲೆಗೆ ಬಿಡುತ್ತಾರೆ. ಇದನ್ನೂ ಓದಿ :ಅಣ್ಣಾ ವಿವಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ; ಅಪರಾಧಿಗೆ 30 ವರ್ಷ ಜೈಲು ಶಿಕ್ಷೆ
ಪಹಾಲ್ಗಮ್ ವಿಚಾರ, ಅಪರೇಷನ್ ಸಿಂಧೂರ ಚರ್ಚೆ ಆಗಬಾರದು ಅಂತ ಕೆಲವರು ಪ್ಲಾನ್ ಮಾಡಿದ್ದಾರೆ. ಕನ್ನಡ, ತಮಿಳು ಅಕ್ಕ ತಂಗಿಯರು. ಕಮಲ ಹಾಸನ್ ನೀವು ನಟ, ರಾಜಕಾರಣಿ. ಆದರೆ ನೀವು ಭಾಷಾ ತಜ್ಞ ಅಲ್ಲ
ಕನ್ನಡದ ಬಗ್ಗೆ ತಿಳಿದು ಮಾತನಾಡಿ ಎಂದು ಸಿ,ಟಿ ರವಿ ಮಾಧ್ಯಮಕ್ಕೆ ಹೇಳಿಕೆ ನೀಡಿದರು.