Monday, August 25, 2025
Google search engine
HomeUncategorizedಕಣ್ಣು ಕಾಣದ ಬಡ ಮಗುವಿನ ಬಾಳಿಗೆ ಬೆಳಕಾದ ಧ್ರುವ ಸರ್ಜಾ..!

ಕಣ್ಣು ಕಾಣದ ಬಡ ಮಗುವಿನ ಬಾಳಿಗೆ ಬೆಳಕಾದ ಧ್ರುವ ಸರ್ಜಾ..!

ನಟ ಧ್ರುವ ಸರ್ಜಾ ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲ, ನಿಜ ಜೀವನದಲ್ಲೂ ಹೀರೋ ಎಂಬುದನ್ನು ಪ್ರೂವ್ ಮಾಡಿದ್ದಾರೆ. ಕೇವಲ ತೆರೆ ಮೇಲೆ ಅಲ್ಲದೆ, ನಿಜ ಜೀವನದಲ್ಲೂ ಸಾಕಷ್ಟು ಜನರಿಗೆ ಸಹಾಯ ಹಸ್ತ ಚಾಚಿರುವ ನಟ ಧ್ರುವ, ಇದೀಗ ಕಣ್ಣಿನ ಸಮಸ್ಯೆಯಿದ್ದ ಬಾಲಕನೊಬ್ಬನಿಗೆ ಶಸ್ತ್ರಚಿಕಿತ್ಸೆ ಮಾಡಿಸಿ, ಆ ಬಾಲಕನ ಬಾಳಿಗೆ ಬೆಳಕಾಗಿದ್ದಾರೆ.

ಧ್ರುವ ಸರ್ಜಾ ಅವರು ಕಣ್ಣಿನ ಸಮಸ್ಯೆಯಿದ್ದ ಬಾಲಕನೊಬ್ಬನಿಗೆ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಆ ಮೂಲಕ ಆ ಬಾಲಕನ ಕಣ್ಣು ದೃಷ್ಟಿ ಸರಿ ಹೋಗುವಂತೆ ಮಾಡಿದ್ದಲ್ಲದೆ, ಆ ಬಾಲಕನ ಹಾಗೂ ಅವರ ಕುಟುಂಬಕ್ಕೆ ಬೆಳಕಾಗಿದ್ದಾರೆ. ತಾವೇ ಮುಂದೆ ನಿಂತು ಮಂಜುನಾಥ ದೃಷ್ಟಿ ಆಸ್ಪತ್ರೆಯಲ್ಲಿ ಆ ಪುಟ್ಟ ಬಾಲಕನಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಆ ಬಾಲಕನ ದೃಷ್ಟಿದೋಷ ನಿವಾರಣೆ ಆಗಿದೆ.

ಇದನ್ನೂ ಓದಿ : ಯತ್ನಾಳ ಹೊಸ ಪಕ್ಷ ಕಟ್ಟಲ್ಲ ಬಿಜೆಪಿಯಲ್ಲೇ ಇರ್ತಾರೆ : ರಮೇಶ್​ ಜಾರಕಿಹೊಳಿ

ಈ ಕುರಿತು ಬಾಲಕ ತಂದೆ ವಿಡಿಯೋದಲ್ಲಿ ವಿವರಣೆ ನೀಡಿದ್ದು. ‘ನನ್ನ ಮಗನಿಗೆ ಕಣ್ಣಿನ ಸಮಸ್ಯೆ ಇತ್ತು. ಅದನ್ನು ಧ್ರುವ ಸರ್ಜಾ ಅಣ್ಣನ ಬಳಿ ಹೇಳಿಕೊಂಡೆವು. ಕೂಡಲೇ ಅವರು ಆಸ್ಪತ್ರೆಗೆ ಹೇಳಿದರು. ಅವರಿಂದ ಮಗನ ಕಣ್ಣು ದೃಷ್ಟಿ ಸರಿಹೋಗಿದೆ. ಅವನು ಪ್ರಪಂಚ ನೋಡುವಂತಾಗಿದೆ’ ಎಂದಿದ್ದಾರೆ. ಇನ್ನು ಈ ಕುರಿತು ಮಂಜುನಾಥ ಕಣ್ಣಿನ ಆಸ್ಪತ್ರೆ ವೈದ್ಯರು ಮಾತನಾಡಿದ್ದು. ಧ್ರುವ ಸರ್ಜಾ ಅವರು ನಮಗೆ ಈ ಬಾಲಕನನ್ನು ರೆಫರ್​ ಮಾಡಿದ್ದರು. ಈ ಕಾರ್ಯವನ್ನು ನಾನು ಮಾಡಿದೆ ಎಂದು ಹೇಳುವುದು ಬೇಡ, ಪ್ರಚಾರ ಮಾಡುವುದು ಬೇಡ ಎಂದು ಧ್ರುವ ಸರ್ಜಾ ಹೇಳಿದ್ದರು’ ಎಂದು ವೈದ್ಯರು ಹೇಳಿದ್ದಾರೆ.

ಶಸ್ತ್ರ ಚಿಕಿತ್ಸೆ ಬಳಿಕ ನಟ ಧ್ರುವಸರ್ಜಾ ಬಾಲಕನೊಟ್ಟಿಗೆ ಮತ್ತು ಅವರ ಪೋಷಕರೊಟ್ಟಿಗೆ ಮಾತನಾಡಿದ್ದು.  ಪೋಷಕರಿಬ್ಬರೂ ಸಹ ಧ್ರುವ ಸರ್ಜಾ ಅವರ ಸಹಾಯಕ್ಕೆ ಧನ್ಯವಾದ ಸಹ ಹೇಳಿದ್ದಾರೆ. ‘ಧ್ರುವ ಸರ್ಜಾ ಅಣ್ಣ ಬೈಯ್ಯುತ್ತಾರೆ, ಆದರೆ ಮಾಡಿದ ಸಹಾಯವನ್ನು ಹೇಳಿಕೊಳ್ಳದೇ ಇರಲು ಆಗುವುದಿಲ್ಲ’ ಎಂದಿದ್ದಾರೆ ಬಾಲಕನ ಪೋಷಕರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments