Thursday, August 28, 2025
HomeUncategorizedಏನೂ ಅರಿಯದ ಕಂದಮ್ಮನನ್ನು ಕೊ*ಲೆ ಮಾಡಿ, ಫಿಟ್ಸ್​ ನಾಟಕವಾಡಿದ್ದ ಮಲತಾಯಿ ಅಂದರ್​ !

ಏನೂ ಅರಿಯದ ಕಂದಮ್ಮನನ್ನು ಕೊ*ಲೆ ಮಾಡಿ, ಫಿಟ್ಸ್​ ನಾಟಕವಾಡಿದ್ದ ಮಲತಾಯಿ ಅಂದರ್​ !

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ 4 ವರ್ಷದ ಹೆಣ್ಣು ಮಗು ಸಮೃದ್ಧಿ ರಾಯಣ್ಣ ನಾವಿ ಸಾವನಪ್ಪಿದ ಪ್ರಕರಣದಲ್ಲಿ ಪೊಲೀಸರು ಮಲತಾಯಿಯನ್ನು ಬಂಧಿಸಿದ್ದು. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಮಗುವನ್ನು ಕೊಲೆ ಮಾಡಿರುವ ಸತ್ಯ ಹೊರಬಂದಿದೆ.

2024ರ ಮೇನಲ್ಲಿ ಮಗು ಸಮೃದ್ದಿ ರಾಯಣ್ಣನಾವಿ ಎಂಬ ಪುಟ್ಟ ಮಗು ಸಾವನ್ನಪ್ಪಿತ್ತು. ಇದೇ ತಿಂಗಳಲ್ಲಿ ಪೊಲೀಸರು ಮೊದಲಿಗೆ ಅಸಹಜ ಸಾವು ಅಂತಾ ದಾಖಲಿಸಿಕೊಂಡ್ರು, ಜೊತೆಗೆ ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೂ ಒಳಪಸಿದ್ದರು. 2024ರ ಸೆಪ್ಟೆಂಬರ್ ತಿಂಗಳಲ್ಲಿ ಮರಣೋತ್ತರ ಪರೀಕ್ಷೆ ವರದಿ ಪೊಲೀಸರ ಕೈ ಸೇರುತ್ತದೆ. ಆಗ ಪೊಲೀಸರಿಗೆ ಮಲತಾಯಿಯ ಅಸಲಿ ಬಣ್ಣ ಗೊತ್ತಾಗುತ್ತದೆ. ‌ಅಷ್ಟರೊಳಗಾಗಿ ಆರೋಪಿ ಸಪ್ನಾ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಳು. ಹೀಗಾಗಿ ಪೊಲೀಸರು ಮತ್ತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರಿಂದ ಅವಳ ಜಾಮೀನು ಅರ್ಜಿಯನ್ನ ರದ್ದು ಪಡಿಸಿತ್ತು.‌ಜಾಮೀನು ರದ್ದಾಗುತ್ತಿದ್ದಂತೆ ಮಲತಾಯಿ ಸಪ್ನಾಳನ್ನ‌ ಅರೇಸ್ಟ್ ಮಾಡಿ ಹಿಂಡಲಗಾ ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ:ಮಸಾಜ್​ ಪಾರ್ಲರ್​ ಮೇಲೆ ನೈತಿಕ ಪೊಲೀಸ್​ಗಿರಿ :ಕ್ರಮ ಕೈಗೊಳ್ಳುತ್ತೇನೆ ಎಂದ ಸಚಿವ ಪರಮೇಶ್ವರ್

ಏನಿದು ಘಟನೆ ?

ಸಮೃದ್ಧಿ ಎರಡು ವರ್ಷದ ಮಗುವಿದ್ದಾಗಲೇ ತಾಯಿ ತೀರಿಕೊಂಡಿದ್ದಳು. ಹೀಗಾಗಿ ಸಮೃದ್ಧಿ ತಂದೆ ರಾಯಣ್ಣ ಸಪ್ನಾಳನ್ನ ಎರಡನೇ ಮದುವೆ ಆಗಿದ್ದನು. ಆಳಕ್ಕೆ ಹೋಗಿ ತನಿಖೆ ನಡೆಸಿದಾಗ ಸಮೃದ್ಧಿಯನ್ನ ಪತಿ ರಾಯಣ್ಣ ಕೊಲೆ ಮಾಡಿದ್ದಾನೆ ಅಂತಾ ಆತನ ಪೋಷಕರು ಆರೋಪಿಸಿದ್ದರು. ಸಮೃದ್ಧಿ ತಂದೆ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ‌. ಇತ್ತ ಮಲತಾಯಿ ಕೆಎಸ್​​ಆರ್​ಪಿ ಪೊಲೀಸ್ ಪೇದೆಯಾಗಿದ್ದಳು. ಎರಡನೇ ಮದುವೆ ಆದಾಗಿನಿಂದಲೂ ಮಗಳನ್ನ ಮಲತಾಯಿ ಸಪ್ನಾ ಆರೈಕೆ ಮಾಡುತ್ತಿದ್ದಳು.

ಆದರೆ ಮೊದಲನೇ ಹೆಂಡ್ತಿ ಮಗು ಅನ್ನೋ ಕಾರಣಕ್ಕೆ ಆಗಾಗ ಮಗುವಿಗೆ ಹೊಡೆಯುವುದು, ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ ಅಂತಾ ಮಾಹಿತಿ ಪೊಲೀಸರಿಗೆ ಗೊತ್ತಾಗುತ್ತದೆ. ಹೀಗಾಗಿ ಮರಣೋತ್ತರ ಪರೀಕ್ಷೆ ವರದಿ ಬರೋವರೆಗೂ ಕಾಯ್ದು ಕುಳಿತ ಪೊಲೀಸರು. ವರದಿ ಬರುತ್ತಿದ್ದಂತೆ ಆರೋಪಿ ಮಲತಾಯಿ ಸಪ್ನಾಳನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಒಟ್ಟಿನಲ್ಲಿ ತಾಯಿಯಿಲ್ಲದ ತಬ್ಬಲಿಯನ್ನ ಕಣ್ಣಲ್ಲಿ ಕಣ್ಣಿಟ್ಟು ಆರೈಕೆ ಮಾಡಬೇಕಿದ್ದ ಮಲತಾಯಿ ಸಪ್ನಾ ಪಾಪಿಯಂತೆ ವರ್ತಿಸಿ ಹೊಡೆದು ಕೊಂದಿದ್ದಾಳೆ. ಫಿಟ್ಸ್ ಬಂದು ಮಗು ಸತ್ತಿದೆ ಎಂದವಳ ಅಸಲಿ ಬಣ್ಣವನ್ನ ಮರಣೋತ್ತರ ಪರೀಕ್ಷೆ ವರದಿ ಬಯಲು ಮಾಡಿದೆ. ಸದ್ಯ ಮುಚ್ಚಿ ಹೋಗುತ್ತಿದ್ದ ಪ್ರಕರಣವನ್ನ ಬೆಳಗಾವಿ ಎಪಿಎಂಸಿ ಪೊಲೀಸರು ಪತ್ತೆ ಮಾಡಿ ಮಗುವಿನ ಸಾವಿಗೆ ನ್ಯಾಯ ಒದಗಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments