Monday, August 25, 2025
Google search engine
HomeUncategorizedKSRTC ಟ್ರೇಡ್ ಮಾರ್ಕ್ ವಿವಾದ ಅಂತ್ಯ: ಕರ್ನಾಟಕಕ್ಕೆ ಜಯ

KSRTC ಟ್ರೇಡ್ ಮಾರ್ಕ್ ವಿವಾದ ಅಂತ್ಯ: ಕರ್ನಾಟಕಕ್ಕೆ ಜಯ

ಚೆನ್ನೈ: KSRTC ಟ್ರೇಡ್​ ಮಾರ್ಕ್​ ವಿವಾದಕ್ಕೆ ಸಂಬಂಧಿಸಿ ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವಿನ ಹೋರಾಟಕ್ಕೆ ಮದ್ರಾಸ್​ ಹೈಕೋರ್ಟ್ ಕೇರಳ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವ ಮೂಲಕ ಕರ್ನಾಟಕಕ್ಕೆ ನ್ಯಾಯವೊದಗಿಸಿದೆ.

ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಚೆನ್ನೈನಲ್ಲಿರುವ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿಯ(IPAB) ಮುಂದೆ ಇದನ್ನು ಪ್ರಶ್ನಿಸಿದೆ. ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸಂಸ್ಥೆಯು 42 ವರ್ಷಗಳಿಂದ KSRTC ಹೆಸರನ್ನು ಬಳಸುತ್ತಿರುವ ಬಗ್ಗೆ ತಿಳಿದಿರುತ್ತದೆ. ಆದ್ದರಿಂದ KSRTCಯು ಪಡೆದಿರುವ ಟ್ರೇಡ್ ಮಾರ್ಕ್ ನೋಂದಣಿ ಅಮಾನ್ಯವಾಗಿದೆ ಎಂದು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ ಎಂದು KSRTC ವಾದ ಮಂಡಿಸಿದೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ನಂದಿನಿ ಹಾಲು ದರ ಏರಿಕೆ!

ಕರ್ನಾಟಕ ಪಡೆದಿರುವ KSRTC ಟ್ರೇಡ್ ಮಾರ್ಕ್ ನೋಂದಣಿ ಅಮಾನ್ಯವಾಗಿದೆ. ಹೀಗಾಗಿ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ ಎಂದು ಕೇರಳ RTC ವಾದಿಸಿತ್ತು. KSRTC, ಕೇರಳ RTC ವಾದ ಆಲಿಸಿದ ಮದ್ರಾಸ್​ ಹೈಕೋರ್ಟ್ ​ಕೇರಳ ಸಾರಿಗೆ ಸಂಸ್ಥೆಯ ಅರ್ಜಿ ವಜಾಗೊಳಿಸಿದೆ. ಈ ಮೂಲಕ ಕಾನೂನು ಹೋರಾಟದಲ್ಲಿ ಕರ್ನಾಟಕಕ್ಕೆ ಭರ್ಜರಿ ಜಯ ಸಿಕ್ಕಿದರೆ, ಕೇರಳಕ್ಕೆ ಮುಖಭಂಗವಾಗಿದೆ.

ಕೇರಳ KRTC ಕೂಡ 2019 ರಲ್ಲಿ KSRTCಗೂ ಹಿಂದಿನಿಂದ ಸಂಕ್ಷಿಪ್ತ ಹೆಸರನ್ನು ಬಳಸುತ್ತಿರುವ ಕುರಿತು ನೋಂದಣಿಯನ್ನು ಪಡೆದುಕೊಂಡಿದೆ. ನಂತರ ಕೇಂದ್ರ ಸರ್ಕಾರವು ಐಪಿಎಬಿಯನ್ನು ರದ್ದುಗೊಳಿಸಿದ್ದು ಐಪಿಎಬಿ ಮುಂದೆ ಬಾಕಿ ಉಳಿದಿದ್ದ ಪ್ರಕರಣಗಳನ್ನು ಚೆನ್ನೈನಲ್ಲಿರುವ ಮದ್ರಾಸ್ ಹೈಕೋರ್ಟ್ಗೆ ವರ್ಗಾಯಿಸಲಾಯಿತು. ಕೇರಳ KRTC ಸಲ್ಲಿಸಿದ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿರುವ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ‌ (ಕೆ ಎಸ್ ಆರ್ ಟಿ ಸಿ) ಪ್ರಸಕ್ತ ಹಾಗೂ ಮುಂಬರುವ ದಿನಗಳಲ್ಲಿ ಸಹ “ಕೆಎಸ್ಆರ್ ಟಿ ಸಿ” ಹೆಸರನ್ನು ಬಳಸಲು ಯಾವುದೇ ಕಾನೂನು ಅಡಚಣೆಯಿರುವುದಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments