Monday, August 25, 2025
Google search engine
HomeUncategorizedಗೃಹಜ್ಯೋತಿ, ಅನ್ನಭಾಗ್ಯ ಇಂದಿನಿಂದ ಜಾರಿ

ಗೃಹಜ್ಯೋತಿ, ಅನ್ನಭಾಗ್ಯ ಇಂದಿನಿಂದ ಜಾರಿ

ಬೆಂಗಳೂರು:  ಇಂದಿನಿಂದ ಕ್ರಾಂಗೆಸ್​ ಗ್ಯಾರಂಟಿಗಳಾದ ಗೃಹಜ್ಯೋತಿ, ಅನ್ನಭಾಗ್ಯಯೋಜನೆಗಳು ಚಾಲನೆ ದೊರಕಿದೆ. 

ಹೌದು, ಈಗಲೇ ರಾಜ್ಉದಲ್ಲಿ ಶಕ್ತಿ ಯೋಜನೆ ಜಾರಿಗೆ  ಬಂದು ರಾಜ್ಯದ ಜನರು ಫುಲ್​ ಖುಷಿಯಾಗಿದ್ದಾರೆ. ಇದರ ನಡುವೆ ಇಂದು ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗಳು ಜಾರಿಗೆ ಬಂದಿದ್ದಾವೆ.

ಇದನ್ನೂ ಓದಿ: ಸ್ವಯಂಘೋಷಿತ ಆರ್ಥಿಕ ತಜ್ಞರೇ, 15 ಕೆಜಿ ಅಕ್ಕಿ ಯಾವಾಗ ಕೊಡ್ತೀರಿ? : ನಳಿನ್ ಕುಮಾರ್ ಕಟೀಲ್

5 ಕೆ.ಜಿ ಅಕ್ಕಿ ಬದಲು 170 ರೂ ಬ್ಯಾಂಕ್‌ ಖಾತೆಗೆ ಹಣ ಜಮಾ

ಅನ್ನಭಾಗ್ಯ ಯೋಜನೆಯಡಿಯಲ್ಲಿ  ಬಿಪಿಎಲ್ ಪಡಿತರ ಚೀಟಿ ಹೊಂದಿದ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 10 ಕೆ.ಜಿ. ಅಕ್ಕಿ ವಿತರಿಸುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಅಕ್ಕಿ ಹೊಂದಿಸಲು ಸಾಧ್ಯವಾಗಿಲ್ಲ. ಹೀಗಾಗಿ, ಬಿಪಿಎಲ್ ಕುಟುಂಬದ ಒಬ್ಬೊಬ್ಬರಿಗೂ ತಲಾ 5 ಕೆ.ಜಿ ಅಕ್ಕಿ ಹಾಗೂ ಬಾಕಿ 5 ಕೆ.ಜಿ ಅಕ್ಕಿ ಬದಲು 170 ಅನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ಜಮಾ ಮಾಡಲು ಸರ್ಕಾರ ತೀರ್ಮಾನಿಸಿದೆ. ಇನ್ನೂ ಒಂದು ಕುಟುಂಬದಲ್ಲಿ ಐವರು ಸದಸ್ಯರು ಇದ್ದರೆ ಒಟ್ಟು 25 ಕೆ.ಜಿ ಅಕ್ಕಿಗೆ ತಗಲುವ ವೆಚ್ಚ 1850 ಅನ್ನು ಕುಟುಂಬದ ಮುಖ್ಯಸ್ಥನ ಖಾತೆಗೆ ಜಮೆ ಮಾಡಲಾಗುತ್ತದೆ.

ಗೃಹಜ್ಯೋತಿ ಯೋಜನೆ ಜಾರಿ

ಗೃಹಬಳಕೆಯ ವಿದ್ಯುತ್‌ಗೆ ಗರಿಷ್ಠ 200 ಯೂನಿಟ್‌ವರೆಗೆ ಉಚಿತವಾಗಿ ನೀಡುವ ಗೃಹಜ್ಯೋತಿ ಯೋಜನೆ ಸಹ ಇಂದಿನಿಂದ ಆರಂಭವಾಗಲಿದೆ.ಈ ಯೋಜನೆಗೆ ಜೂನ್ 18ರಿಂದ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ರಾಜ್ಯದ ಆರು ವಿದ್ಯುತ್ ಕಂಪನಿಗಳ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ 7ರವರೆಗೆ 86.24 ಲಕ್ಷಕ್ಕೂ ಅಧಿಕ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments