Thursday, August 21, 2025
Google search engine
HomeASTROLOGYಎರಡನೇ ಮದುವೆಯಾದ ಸಂಸದೆ ಮಹುವಾ ಮೊಯಿತ್ರಾ; ಪೋಟೋ ವೈರಲ್​

ಎರಡನೇ ಮದುವೆಯಾದ ಸಂಸದೆ ಮಹುವಾ ಮೊಯಿತ್ರಾ; ಪೋಟೋ ವೈರಲ್​

ಕೋಲ್ಕತ್ತಾ: ಟಿಎಂಸಿ ಸಂಸದೆ ಮಹುವಾ ಮೊಯಿತ್ರ ಸದ್ದಿಲ್ಲದೇ ಎರಡನೇ ಮದುವೆಯಾಗಿದ್ದು. 65 ವರ್ಷದ ಪಿನಾಕಿ ಮಿಶ್ರ ಎಂಬುವವರನ್ನು ವರಿಸಿದ್ದಾರೆ. ಈ ಕುರಿತಾದ ವಿಡಿಯೋವೊಂದು ವೈರಲ್​ ಆಗಿದ್ದು. ಮೇ.3 ರಂದೇ ಮದುವೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ :ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಿಸಿದ RCB

ತೃಣಮೂಲ ಕಾಂಗ್ರೆಸ್​ನ ಸಂಸದೆ ಮಹುವಾ ಮೊಯಿತ್ರಾ ಸದದ್ದಿಲ್ಲದೇ ಎರಡನೇ ಮದುವೆಯಾಗಿದ್ದಾರೆ. ಬಿಜು ಜನತಾ ದಳದ ಪಾರ್ಟಿಯ ಸಂಸದ ಪಿನಾಕಿ ಮಿಶ್ರಾ ಅವರನ್ನು ಮದುವೆಯಾಗಿದ್ದಾರೆ. ಮೇ. 03ರಂದು ಮದುವೆಯಾಗಿದ್ದು. ಇದೀಗ ಈ ಕುರಿತಾದ ಜರ್ಮಿನಿಯಲ್ಲಿರುವ ಪೋಟೋ ವೈರಲ್​ ಆಗಿದೆ.

ಮೊದಲ ಪತಿಗೆ ಡಿವೋರ್ಸ್​..!

ಮಹುವಾ ಮೊದಲು ಲಾರ್ಸ್​ ಬ್ರೋರ್ಸೆನ್ ಅವರನ್ನು ವಿವಾಹವಾಗಿದ್ದರು, ನಂತರ ವಿಚ್ಛೇದನ ಪಡೆದಿದ್ದರು. ನಂತರ ಅವರು ವಕೀಲ ಜೈ ಅನಂತ್ ದೇಹಾದ್ರಾಯಿ ಅವರೊಂದಿಗೆ ಸುಮಾರು ಮೂರು ವರ್ಷಗಳ ಕಾಲ ಸಂಬಂಧದಲ್ಲಿದ್ದರು. ಆದರ ಇದೀಗ ಸದ್ದಿಲ್ಲದೇ ಒಡಿಶಾದ ಸಂಸದ ಪಿನಾಕಿ ಮಿಶ್ರಾರನ್ನು ಮದುವೆಯಾಗಿದ್ದಾರೆ.

ಇದನ್ನೂ ಓದಿ :‘ಕನ್ನಡದ ನಟರು ತಮಿಳಿನಲ್ಲಿ ನಟಿಸುತ್ತಿದ್ದಾರೆ’; ಪರೋಕ್ಷವಾಗಿ ಬೆದರಿಕೆ ಹಾಕಿದ ತಮಿಳು ನಿರ್ಮಾಪಕರು

ಹಾಗೆಯೇ ವರದಿಗಳ ಪ್ರಕಾರ, ಪಿನಾಕಿ ಮೊದಲು ಸಂಗೀತಾ ಮಿಶ್ರಾ ಅವರನ್ನು ವಿವಾಹವಾದರು. ಇಬ್ಬರೂ ಜನವರಿ 16, 1984 ರಂದು ವಿವಾಹವಾಗಿದ್ದರಯ ಮತ್ತು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಪಿನಾಕಿ ಈಗ ಮಹುವಾ ಮೊಯಿತ್ರಾ ಅವರನ್ನು ಮದುವೆಯಾಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ :ಪಾಕ್​ ಗುಪ್ತಚರ ಅಧಿಕಾರಿಗಳ ಜೊತೆ ಸೇನೆಯ ಸೂಕ್ಷ್ಮ ಮಾಹಿತಿ ಹಂಚಿಕೊಂಡಿದ್ದ ದೇಶದ್ರೋಹಿ ಅರೆಸ್ಟ್

ಇನ್ನು ಮಹುವಾ ಮೊಹಿತ್ರಾ ಅವರ ಬಗ್ಗೆ ನೋಡುವುದಾದರೆ ‘ಅವರು ರಾಜಕೀಯದಲ್ಲಿ ತಮ್ಮ ತೀಕ್ಷ್ಣವಾದ ಹೇಳಿಕೆಗಳು ಮತ್ತು ಬಲವಾದ ವಿರೋಧದ ನಿಲುವಿಗೆ ಹೆಸರುವಾಸಿಯಾದ ಮಹುವಾ, ತಮ್ಮ ಹಳೆಯ ಸಂಬಂಧಗಳು ಮತ್ತು ವೈಯಕ್ತಿಕ ನಿರ್ಧಾರಗಳಿಗಾಗಿ ಹಲವು ಬಾರಿ ಮುನ್ನಲೆಗೆ ಬಂದಿದ್ದರು. ಜೊತೆಗೆ ಮಹುವಾ ಅವರು ಹಣ ಪಡೆದು ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ್ದಾರೆ ಎಂದು ಅವರನ್ನು ಲೋಕಸಭೆಯಿಂದ ಉಚ್ಚಾಟನೆ ಮಾಡಲಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments