Friday, August 29, 2025
HomeUncategorizedಸಿದ್ದರಾಮಯ್ಯರ ನಂತರ ಈ ರಾಜ್ಯದಲ್ಲಿ ಏನಾಗುತ್ತೋ ಗೊತ್ತಿಲ್ಲ: ವಾಟಾಳ್​ ನಾಗರಾಜ್​

ಸಿದ್ದರಾಮಯ್ಯರ ನಂತರ ಈ ರಾಜ್ಯದಲ್ಲಿ ಏನಾಗುತ್ತೋ ಗೊತ್ತಿಲ್ಲ: ವಾಟಾಳ್​ ನಾಗರಾಜ್​

ಮಂಡ್ಯ : ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಗಣತಿ ವಿಚಾರವಾಗಿ ಕನ್ನಡಪರ ಹೋರಾಟಗಾರ ವಾಟಾಳ್​ ನಾಗರಾಜ್​ ಹೇಳಿಕೆ ನೀಡಿದ್ದು. ಕೇವಲ ಒಂದು ಪಕ್ಷವಲ್ಲ. ಎಲ್ಲಾ ಪಕ್ಷಗಳು ಜಾತಿ ಹಿಂದೆ ಬಿದ್ದಿವೆ. ಸಿದ್ದರಾಮಯ್ಯನವರೇ ಈ ರಾಜ್ಯದ ಕೊನೆಯ ಕೊಂಡಿ. ಅವರ ನಂತರ ಏನಾಗುತ್ತದೋ ಗೊತ್ತಿಲ್ಲ ಎಂದು ಹೇಳಿದರು.

ಮಂಡ್ಯದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ವಾಟಾಳ್​ ನಾಗರಾಜ್​ ‘ನಾನು ಇವತ್ತಿನವರೆಗೂ ಜಾತಿ ಬಗ್ಗೆ ಮಾತಾಡಿಲ್ಲ. ಅದನ್ನ ಯಾಕೆ ಮಾಡಲು ಹೊರಟಿದ್ದಾರೋ ಗೊತ್ತಿಲ್ಲ. ಆದರೆ ಜಾತಿ ವರದಿ ಜಾರಿ ಮಾಡೋ ವಿಚಾರದಲ್ಲಿ ಇರುವ ಸ್ಪೀಡ್​ ಇವರಿಗೆ ರಾಜ್ಯದ ಬಗ್ಗೆಯಾಗಲಿ. ಭಾಷೆಯ ಮೇಲಾಗಲಿ ಇಲ್ಲ. ನಮ್ಮ ರಾಜ್ಯ ಉದಯವಾಗಿದ್ದು ಭಾಷೆ ಮೇಲೆ. ಮೈಸೂರು ಸಂಸ್ಥಾನ ಸಮಗ್ರ ಕರ್ನಾಟಕ ಆಗಬೇಕು ಎಂದು ಕುವೆಂಪು ಹೇಳಿದ್ದರು.

ಇದನ್ನೂ ಓದಿ :ಗೌರಿ ಖಾನ್ ಒಡೆತನದ ರೆಸ್ಟೋರೆಂಟ್​ನಲ್ಲಿ ನಕಲಿ ಪನ್ನೀರ್ ಬಳಕೆ ? ಶಾರುಕ್​ ಪತ್ನಿ ಮೇಲೆ ಗಂಭೀರ ಆರೋಪ

ಆದರೆ ಇಂದು ಜಾತಿಯ ಕರ್ನಾಟಕವಾಗಿದೆ. ಈ ವಿಷಯದ ಕುರಿತು ನಾವೂ ಬಹಳ ಗಂಭೀರವಾಗಿರಬೇಕು.  ಬಸವಣ್ಣ, ಕನಕದಾಸರ ಸಂದೇಶಗಳನ್ನ ಅರ್ಥ ಮಾಡಿಕೊಳ್ಳಬೇಕು. ಒಂದು ಪಕ್ಷ ಅಲ್ಲ, ಎಲ್ಲಾ ಪಕ್ಷಗಳು ಜಾತಿ ಹಿಂದೆ ಬಿದ್ದಿವೆ. ಸಿದ್ದರಾಮಯ್ಯನವರೇ ಕರ್ನಾಟಕದ ಕೊನೆಯ ಕೊಂಡಿ. ಸಿದ್ದರಾಮಯ್ಯ ನಂತರ ರಾಜ್ಯದಲ್ಲಿ ಏನಾಗುತ್ತೋ ಗೊತ್ತಿಲ್ಲ. ಮುಂದೆ ಬರುವವರು ಯಾವ ಯಾವ ಆಧಾರದಲ್ಲಿ ಅಧಿಕಾರಕ್ಕೆ ಬರುತ್ತಾರೋ ಗೊತ್ತಿಲ್ಲ.

ಸದನದಲ್ಲಿ ಹನಿಟ್ರ್ಯಾಪ್ ಬಗ್ಗೆ ಚರ್ಚೆ ಮಾಡ್ತಾರೆ. ಶಾಸನ ಸಭೆಯಲ್ಲಿ ಈ ವಿಷಯದ ಚರ್ಚೆ ಬೇಕಾ?.
ಶಾಸನಸಭೆಯ ಗಂಭೀರತೆ ಏನಾಗಬೇಕು?. ವಿಧಾನಸಭೆ, ಪರಿಷತ್ತಿನ ಘನತೆ, ಗಾಂಭೀರ್ಯ ಕುಸಿಯುತ್ತಿದೆ.
ಎಲ್ಲರೂ ದುಡ್ಡಿನ ಮೇಲೆ ಅಧಿಕಾರಕ್ಕೆ ಬರುವವರೇ ಆಗಿದ್ದಾರೆ. ವಿಧಾನಪರಿಷತ್ತು ವ್ಯಾಪಾರೀಕರಣ ಆಗ್ತಿದೆ.
ಇವಾಗ ನಾಲ್ಕು ಸ್ಥಾನಗಳಿಗೆ ನಾಮಕರಣ ಆಗಬೇಕಿದೆ. ಅದನ್ನೂ ಹಂಚಿಕೆ ಮಾಡಿಕೊಳ್ತಾರೆ. ಕೇವಲ ಹನಿಟ್ರ್ಯಾಪ್​ ವಿಷಯದ ಕುರಿತು ಚರ್ಚೆ ಮಾಡುತ್ತಿದ್ದಾರೆ. ಕರ್ನಾಟಕದ ಅಭಿವೃದ್ದಿ ಬಗ್ಗೆ ಚರ್ಚೆ ಮಾಡುತ್ತಿದ್ದಾರಾ ಎಂದು ಪ್ರಶ್ನಿಸಿದ ವಾಟಳ್​ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments