Tuesday, August 26, 2025
Google search engine
HomeUncategorizedಒಂದು ಮುತ್ತಿಗೆ 50 ಸಾವಿರ ರೂ. ಚಾರ್ಜ್ ಮಾಡಿದ ಟೀಚರಮ್ಮನ ಸ್ಟೋರಿ..!

ಒಂದು ಮುತ್ತಿಗೆ 50 ಸಾವಿರ ರೂ. ಚಾರ್ಜ್ ಮಾಡಿದ ಟೀಚರಮ್ಮನ ಸ್ಟೋರಿ..!

ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಹನಿಟ್ರ್ಯಾಪ್​ ಸುದ್ದಿ ಸಾಕಷ್ಟು ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಮತ್ತೊಂದು ಹನಿಟ್ರ್ಯಾಪ್​ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದು. ವಂಚಕಿ ಮಹಿಳೆ ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದ್ದು.

ಆರೋಪಿ ಮಹಿಳೆ ಶ್ರೀ ದೇವಿ ರೂಡಗಿ ಎಂಬಾಕೆ ಮಹಲಕ್ಷ್ಮಿ ಲೇಔಟ್​ನಲ್ಲಿ ಕಿಂಡರ್​ ಗಾರ್ಡನ್​ ಶಾಲೆ ನಡೆಸುತ್ತಿದ್ದಳು. ಈ ವೇಳೆ ಈಕೆಯ ಶಾಲೆಗೆ ಬರುತ್ತಿದ್ದ ಪೋಷಕರನ್ನು ಶ್ರೀ ದೇವಿ ಪರಿಚಯ ಮಾಡಿಕೊಂಡಿದ್ದಳು. ಅದೇ ರೀತಿ 2023ರಲ್ಲಿ ರಾಕೇಶ್​ ವೈಷ್ಣವ್​ ಎಂಬಾತನನ್ನು ಶ್ರೀದೇವಿ ಪರಿಚಯ ಮಾಡಿಕೊಂಡಿದ್ದಳು. ರಾಕೇಶ್​ ಕೂಡ ತನ್ನ ಮಗುವನ್ನು ಶ್ರೀದೇವಿಯ ಪ್ಲೇ ಹೋಮ್​ ಕಳಿಸುತ್ತಿದ್ದ. ಈ ವೇಳೆ ಶಾಲೆಯ ನಿರ್ವಹಣೆಗೆ ಎಂದು ಶ್ರೀದೇವಿ ರಾಕೇಶ್​ನಿಂದ 2ಲಕ್ಷ ಸಾಲ ಪಡೆದಿದ್ದಳು.

ಇದನ್ನು ಓದಿ :ರಾಜ್ಯದಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆ; ಯಲ್ಲೋ ಅಲರ್ಟ್​ ಘೋಷಣೆ

ಕೊಟ್ಟ ಹಣವನ್ನು ರಾಕೇಶ್​ ವಾಪಾಸ್ ಕೇಳಿದಾಗ, ರಾಕೇಶ್​ ಜೊತೆ ಸಲುಗೆ ಬೆಳೆಸಿದ ಶ್ರೀದೇವಿ, ಶಾಲೆಗೆ ಪಾರ್ಟನರ್​ ಆಗುವಂತೆ ಕೇಳಿಕೊಂಡಿದ್ದಳು. ಈ ರೀತಿ ಇಬ್ಬರ ನಡುವೆ ಆತ್ಮೀಯತೆ ಬೆಳೆದು, ಇಬ್ಬರ ಖಾಸಗಿ ಕ್ಷಣಗಳನ್ನು ಜೊತೆಯಾಗಿ ಕಳೆದಿದ್ದರು. ಇದೇ ಖಾಸಗಿ ಪೋಟೋಗಳನ್ನು ಇಟ್ಟುಕೊಂಡು ಶ್ರೀ ದೇವಿ ರಾಕೇಶ್​ಗೆ ಬ್ಲಾಕ್​ಮೇಲ್​ ಮಾಡುತ್ತಿದ್ದಳು.

ಪದೇ ಪದೇ ಹಣಕ್ಕೆ ಬೇಡಿಕೆ ಇಟ್ಟಿದ್ದ ಶ್ರೀದೇವಿ 1 ಕೋಟಿ, 60 ಲಕ್ಷ ಹಣಕ್ಕೆ ಒಪ್ಪಂದ ಮಾಡಿಕೊಂಡಿದ್ದಳು . ಇದಾದ ನಂತರ ಮತ್ತೆ 15 ಲಕ್ಷ ಹಣ ಕೊಡುವಂತೆ ಶ್ರೀ ದೇವಿ ಬೇಡಿಕೆ ಇಟ್ಟಿದ್ದಳು. ಇದರಿಂದ ಬೇಸತ್ತ ರಾಕೇಶ್ ಸಿಸಿಬಿ ಪೊಲೀಸರಿಗೆ ದೂರು ಕೊಟ್ಟಿದ್ದು. ಸದ್ಯ ಶ್ರೀ ದೇವಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments