Saturday, August 23, 2025
Google search engine
HomeUncategorizedಯಡಿಯೂರಪ್ಪ ಜೀ ಆಪ್ ಚುಪ್ ಕೆ ಬೈಟೊ: ಯತ್ನಾಳ್​

ಯಡಿಯೂರಪ್ಪ ಜೀ ಆಪ್ ಚುಪ್ ಕೆ ಬೈಟೊ: ಯತ್ನಾಳ್​

ದೆಹಲಿ : ಯತ್ನಳ್​​ ಬಣ ಹೈಕಮಾಂಡ್​ ಭೇಟಿಗೆ ಎಂದು ದೆಹಲಿಗೆ ಹೋಗಿದ್ದು. ಅಲ್ಲಿ ವರಿಷ್ಟರನ್ನು ಭೇಟಿಯಾಗಿ ವಿಜಯೇಂದ್ರನ ಬದಲು ಬೇರೆಯವರನ್ನು ರಾಜ್ಯಧ್ಯಕ್ಷ ಮಾಡುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಮಾಧ್ಯಮದೊಂಡಿಗೆ ಮಾತನಾಡಿದ ಶಾಸಕ ಯತ್ನಾಳ್​ ಬಿಎಸ್​ವೈಗೆ ವ್ಯಂಗ್ಯ ಮಾಡಿದ್ದು. ಯಡಿಯೂರಪ್ಪಗೆ ತುಂಬಾ ಜನ ಮೊಮ್ಮಕ್ಕಳಿದ್ದಾರೆ, ಅವರದೊಡನೆ ಆಟವಾಡುತ್ತಾ ನೂರು ವರ್ಷ ಬದುಕಬಹುದು, ಯಡಿಯೂರಪ್ಪ ಜೀ ಆಪ್​ ಚುಪ್​ ಬೈಟೋ ಎಂದು ವ್ಯಂಗ್ಯವಾಡಿದರು.

ಹೈಕಮಾಂಡ್​ ಮುಂದೆ ಮೂರು ಅಂಶಗಳನ್ನು ಬೇಡಿಕೆ ಇಡುತ್ತೇವೆ !

ಮೂರ ಅಂಶಗಳನ್ನು ಹೈಕಮಾಂಡ್ ಗಮನಕ್ಕೆ ತರ್ತೆವೆ, ಭ್ರಷ್ಟಾಚಾರ, ಕುಟುಂಬ ರಾಜಕಾರಣ ಅಂತ್ಯ ಮಾಡಬೇಕು, ಹಿಂದೂಗಳ ಹತ್ಯೆ ಆಯಿತು ಬಿಎಸ್‌ವೈ ಏನ್ ಮಾಡಿದರು, ಶಿವಮೊಗ್ಗದಲ್ಲಿ ಔರಂಗಜೇಬನ ಪೊಟೊ ಹಾಕಿದರು ಏನು ಮಾಡಿದರಿ, ಜಮೀರ್ ಅಹಮದ್ ಖಾನ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ, ನಮ್ಮ ತಂಡದಲ್ಲಿ ಕುಟುಂಬ ರಾಜಕೀಯ ಇಲ್ಲ,  ಸಿದ್ದೇಶ್ವರ್, ಲಿಂಬಾವಳಿ ತಮ್ಮ ಸ್ಥಾನ ಬಿಟ್ಟುಕೊಟ್ಟಿದ್ದಾರೆ
ಹೀಗಾಗಿ ಅವರ ಮನೆಯವರು ಸ್ಪರ್ಧೆ ಮಾಡಿದ್ದಾರೆ.

ಒಂದೇ ಮನೆಯಲ್ಲಿ ಎಲ್ಲ ಅಧಿಕಾರ ಅನುಭವಿಸ್ತಿಲ್ಲ, ಕಾಂಗ್ರೆಸ್ ಕೊಟ್ಟ ಭಿಕ್ಷೆಯಿಂದ ಬಿ.ವೈ ವಿಜಯೇಂದ್ರ ಶಾಸಕರಾಗಿದ್ದಾರೆ. ಡಿ.ಕೆ ಶಿವಕುಮಾರ್ ಆರ್ಶಿವಾದದಿಂದ ಶಾಸಕರಾಗಿದ್ದಾರೆ. ಮೊದಲ ಬಾರಿ ಶಾಸಕರಾಗಿ ರಾಜ್ಯಧ್ಯಕ್ಷರಾಗಿದ್ದಾರೆ. ರಮೇಶ್ ರಾಜಕಿಹೋಳಿ, ಸಿ.ಪಿ ಯೋಗೇಶ್ವರರಿಂದ ಸರ್ಕಾರ ಬಂತು, ರಮೇಶ್ ಜಾರಕಿಹೋಳಿ ಪಕ್ಷ ಗಟ್ಟಿ ಮಾಡಲು ಬಂದವರು, ಆದರೆ ವಿಜಯೇಂದ್ರ ನಕಲಿ ಸಹಿ ಮಾಡಿ ಭ್ರಷ್ಟಚಾರ ಮಾಡಿದರು.

ಇದನ್ನೂ ಓದಿ :ಅಕ್ರಮ ಸಂಬಂಧದ ಶಂಕೆ: ನಡುರಸ್ತೆಯಲ್ಲೆ ಪತ್ನಿಗೆ ಚಾಕು ಹಾಕಿದ ಪಾಪಿ ಪತಿ

ಶ್ರೀರಾಮುಲು ಕೂಡ ನಿಮ್ಮ ಜೊತೆಗಿದ್ದೇನೆ ಎಂದು ಹೇಳಿದ್ದಾರೆ. ಹೈಕಮಾಂಡ್ ನಿರ್ಧಾರ ಬದಲಾವಣೆ ಮಾಡಿದರೆ ಮುಂದೆ ಏನು ಎಂದು ಹೇಳುತ್ತೇನೆ. ದುಡ್ಡಿನ ಅಹಂಕಾರದಿಂದ ಎಲ್ಲರನ್ನು ಖರೀದಿ ಮಾಡಬಹುದು ಅಂದುಕೊಂಡಿದ್ದಾರೆ, ದುಡ್ಡಿನಿಂದ ಕೆಲವರನ್ನು ಕೆಲವು ಕಾಲ ಮೋಸ ಮಾಡಬಹುದು, ಆದರೆ ಎಲ್ಲಾ ಸಮಯದಲ್ಲಿ ಮೋಸ ಮಾಡಲು ಸಾಧ್ಯವಾಗಲ್ಲ.

ನಿನ್ನ ಬಳಿ ದುಡ್ಡು ಇರಬಹುದು, ಆದರೆ ಚಾರಿತ್ರ್ಯ ಇಲ್ಲ, ನಾನು ಅಧ್ಯಕ್ಷನಾಗಲು ಪ್ರಯತ್ನ ಮಾಡುತ್ತಿಲ್ಲ
ಯಾವುದೇ ಸಮುದಾಯದ ನಾಯಕರು ಅಧ್ಯಕ್ಷರಾಗಬಹುದು, ಹೈಕಮಾಂಡ್ ಭೇಟಿಗೆ ಸಮಯ ಕೇಳಿದೆ, ಅವರು ಹೇಳಿದ ತಕ್ಷಣ ನಿಮ್ಮಗೆ ತಿಳಸ್ತಿನಿ, ಅವರನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ, ಯಡಿಯೂರಪ್ಪ ಹೊಸ ನಾಟಕ ಕಂಪನಿ ತೆಗೆದಿದ್ದಾರೆ,

ಹುಷಾರಿಲ್ಲ ಎಂದು ನಾಟಕ ಮಾಡುತ್ತಿದ್ದಾರೆ, ಆದರೆ ನಿನ್ನೆ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದಾರೆ, ಎಲ್ಲರನ್ನು ಸಿಂಪಥಿ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ಹೆಚ್ಚು ಮೊಮ್ಮಕ್ಕಳಿದ್ದಾರೆ, ಆಟ ಆಡ್ತಾ ಕೂತಾರೆ ನೂರು ವರ್ಷ ಬದಕಬಹುದು, ಯಡಿಯೂರಪ್ಪ ಜೀ ಆಪ್ ಚುಪ್ ಬೈಟೊ ಎಂದು ಬಿಎಸ್​​ವೈಗೆ ಬಸನಗೌಡ ಪಾಟೀಲ್​ ಯತ್ನಾಳ್​ ವ್ಯಂಗ್ಯ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments